ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯಲಕ್ಷ್ಮಿ ಅವರಿಗೆ ಒಲಿದು ಬಂತು ಸ್ಟಾರ್ ನಟನ ಸಿನಿಮಾ ಆಫರ್..!
ಸದ್ಯ ವಿಜಯಲಕ್ಷ್ಮಿ ಅವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆಗಾಗಿ ಸಹಾಯ ಕೇಳಿದ್ದು ನಿಮಗೆ ಗೊತ್ತೆ ಇದೆ.. ಇದಕ್ಕೆ ಕೂಡಲೇ ಸ್ಪಂದಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ ನೆರವನ್ನ ನೀಡಿತ್ತು.. ಜೊತೆಗೆ ವಿಜಯಲಕ್ಷ್ಮಿ ಅವರಿಗೆ ಸಿನಿಮಾದಲ್ಲಿ ಅವಕಾಶವನ್ನ ನೀಡುವಂತೆ ಇಲ್ಲಿನ ನಿರ್ದೇಶನಕರಿಗೆ ಹೇಳಿದೆ.. ಈ ಮೂಲಕ ಈ ಹಿರಿಯ ನಟಿಯ ಆರ್ಥಿಕ ಸ್ಥಿತಿಯನ್ನ ಸುಧಾರಿಸಲು ಮುಂದಾಗಿದೆ..
ಈ ಬಗ್ಗೆ ವಾಣಿಜ್ಯ ಮಂಡಳಿಯಿಂದ ಅಯೋಗ್ಯ ಸಿನಿಮಾದ ನಿರ್ದೇಶಕರಿಗೆ ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ನೀಡುವಂತೆ ಮನವಿ ಮಾಡಲಾಗಿತಂತೆ.. ಇದಕ್ಕೆ ಮಹೇಶ್ ಕೂಡ ಸಮ್ಮಿತಿಯನ್ನ ನೀಡಿದ್ದು, ತಾನು ನಿರ್ದೇಶನ ಮಾಡುತ್ತಿರುವ ಮದಗಜ ಚಿತ್ರದಲ್ಲಿ ವಿಶೇಷ ಪಾತ್ರವೊಂದನ್ನ ನೀಡಲು ಮುಂದಾಗಿದ್ದಾರೆ..
ಮದಗಜ ಶ್ರೀ ಮುರುಳಿ ಅಭಿನಯಿಸಲಿರುವ ಚಿತ್ರ.. ಕೋಟ್ಯಾಧಿಶನ ಪಾತ್ರದಲ್ಲಿ ರೋರಿಂಗ್ ಸ್ಟಾರ್ ಕಾಣಿಸಿಕೊಳ್ಳಲ್ಲಿದ್ದು, ಸದ್ಯ ತಾರಬಳಗ ಆಯ್ಕೆಯಲ್ಲಿ ತೊಡಗಿಕೊಂಡಿದೆ ಚಿತ್ರತಂಡ..