ಭಾರತೀಯ ಬ್ಯಾಂಕ್‍ಗಳಲ್ಲಿ ಸಾವಿರಾರು ಕೋಟಿ ಹಣ ಸಾಲ ಮಾಡಿ ವಿದೇಶದಲ್ಲಿ ಅಡಗಿ ಕುಳಿತಿರುವ ಮಧ್ಯದ ದೊರೆ ವಿಜಯ್ ಮಲ್ಯರ ಐಶಾರಾಮಿ ವಿಮಾನಕ್ಕೆ ಈಗ ಕಂಟಕ ಶುರುವಾಗಿದೆ. ಸೇವಾ ತೆರಿಗೆ ಇಲಾಖೆಯಲ್ಲಿ ಸುಮಾರು 535 ಕೋಟಿ ಹಣ ಸಾಲ ಬಾಕಿ ಉಳಿದಿರುವ ಕಾರಣ ಅಧಿಕಾರಿಗಳ ಕಣ್ಣು ಈಗ ಮಲ್ಯ ಅವರ ಐಶಾರಾಮಿ ವಿಮಾನದ ಮೇಲೆ ಬಿದ್ದಿದೆ. ಹಾಗಾಗಿ ಸೇವಾ ತೆರಿಗೆ ಇಲಾಖೆ ಹರಾಜು ನಡೆಸುವುದಾಗಿ ತಿಳಿಸಿದೆ. ಇನ್ನು ಇಂದು ಮತ್ತು ನಾಳೆ ಹರಾಜು ಪ್ರಕ್ರಿಯೆ ನಡೆಯಲಿದ್ದು, ಇಲಾಖೆ ಈ ಮೊದಲು ಹರಾಜು ಮೊತ್ತವನ್ನು 152 ಕೋಟಿ ನಿಗದಿ ಮಾಡಿದ್ದ ಬದಲಾಗಿ ಹೈಕೋರ್ಟ್ ಆದೇಶದ ಮೇರೆಗೆ ಬೆಲೆಯನ್ನು ಕಡಿಮೆ ಮಾಡಲಾಗಿದೆ.
ಮಲ್ಯರ ವಿಮಾನ ಹರಾಜು ಪ್ರಕ್ರಿಯೆ ಮೂರನೇ ಬಾರಿಯಾಗಿದ್ದು, ಈ ಹಿಂದೆ ದುಬಾರಿ ಬೆಲೆಯಲ್ಲಿ ಹರಾಜು ಮೊತ್ತವಿದ್ದ ಕಾರಣದಿಂದ ಯಾರೂ ಕೂಡ ಕೊಳ್ಳಲು ಮನಸ್ಸು ಮಾಡಿರಲಿಲ್ಲ. ಆಗಸ್ಟ್ ನಲ್ಲಿ ನಡೆದ ಎಸ್ ಜಿ ಐ ಕೋಮೆಕ್ಸ್ ಕೇವಲ 27 ಕೋಟಿ ಗೆ ಬಿಡ್ ಮಾಡಲಾಗಿತ್ತು. ಮೊದಲ ಹರಾಜು ಪ್ರಕ್ರಿಯೆಯಲ್ಲಿ ದುಬೈ ಮೂಲದ ಕಂಪನಿ ಕೇವಲ 1.9 ಕೋಟಿ ಕೊಟ್ಟು ವಿಮಾನ ಖರೀದಿಸುವುದಾಗಿ ಹೇಳಿತ್ತು. ನಿರೀಕ್ಷಿತ ಬೆಲೆ ದೊರಕದ ಕಾರಣ ಆದಾಯ ಸೇವಾ ತೆರಿಗೆ ಇಲಾಖೆ ಈ ಬಾರಿ ಅಂತರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಜಾಹಿರಾತು ನೀಡಿದೆ.
Like us on Facebook The New India Times
POPULAR STORIES :
ತಮಿಳು ಚಿತ್ರ ನಟ ಧನುಷ್ ತಮ್ಮ ಮಗನೆಂದು ಮುಧುರೈ ದಂಪತಿ ಕೊರ್ಟ್‍ಗೆ ದೂರು..!
500ರೂ. ಹೊಸ ನೋಟಿನಲ್ಲಿ ತಪ್ಪು: ಆರ್‍ಬಿಐ ಸ್ಪಷ್ಟನೆ
ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.
ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ