ಭಾರತ ಕ್ರಿಕೆಟ್ ತಂಡದ ನಾಯಕ, ರನ್ ಮಷಿನ್ ವಿರಾಟ್ ಕೊಹ್ಲಿ ಹಲವು ದಾಖಲೆಗಳಿಗೆ ಮತ್ತೊಂದನ್ನು ಸೇರ್ಪಡೆಗೊಳಿಸಿದ್ದಾರೆ. ಸತತ ಮೂರು ಶತಕ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರನೆಂಬ ಖ್ಯಾತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.
ವಿಶ್ವದಲ್ಲಿ ಈ ಸಾಧನೆ ಮಾಡಿದ 10ನೇ ಆಟಗಾರರಲ್ಲಿ ಕೊಹ್ಲಿ ಹೆಸರು ಸೇರ್ಪಡೆಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ 5 ಏಕದಿನ ಪಂದ್ಯಗಳ ಸರಣಿ ಆಡುತ್ತಿರುವ ಟೀಂ ಇಂಡಿಯಾ ಆಟಗಾರ ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 140, ವಿಶಾಖಪಟ್ಟಣದಲ್ಲಿ ಅಜೇಯ 157, ನಿನ್ನೆ ಪುಣೆಯಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ 107 ರನ್ ಬಾರಿಸಿ ಹ್ಯಾಟ್ರಿಕ್ ವೀರರಾಗಿದ್ದಾರೆ. ವಿರಾಟ್ ಶತಕದ ಬಲವಿಲ್ಲದ್ದರೂ ಉಳಿದವರ ವೈಫಲ್ಯದಿಂದ ಭಾರತ 43 ರನ್ ಗಳಿಂದ ಸೋತಿದೆ. ಮೊದಲ ಪಂದ್ಯ ಭಾರತ ಗೆದ್ದಿತ್ತು. ಎರಡನೇ ಪಂದ್ಯ ಟೈ ಆಗಿತ್ತು. ಮೂರನೇ ಪಂದ್ಯ ಇಂಡೀಸ್ ಗೆದ್ದಿದೆ.ಇದರೊಂದಿಗೆ ಸರಣಿ 1-1 ಆಗಿದ್ದು, ಇನ್ನುಳಿಸ ಎರಡು ಪಂದ್ಯಗಳ ಕುತೂಹಲ ಹೆಚ್ಚಿದೆ.