ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ‘ಕ್ವಿಟ್ ಇಂಡಿಯಾ’ ಎಂದು ಹೇಳಿದ್ದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ.
ಮೊಬೈಲ್ ಆ್ಯಪ್ ಬಿಡುಗಡೆ ಮಾಡಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವ ವೇಳೆ ಕೊಹ್ಲಿ ನೀಡಿದ್ದ ಉತ್ತರ ವಿವಾದಕ್ಕೆ ಕಾರಣವಾಗಿತ್ತು.
ಅಭಿಮಾನಿಯೊಬ್ಬರು ಕೊಹ್ಲಿ ಬ್ಯಾಟಿಂಗ್ ನಲ್ಲಿ ಅಂಥಾ ವಿಶೇಷತೆ ಏನಿಲ್ಲ. ನನಗೆ ಭಾರತೀಯ ಕ್ರಿಕೆಟಿಗರಿಗಿಂತ ಇಂಗ್ಲೆಂಡ್ ಮತ್ತು ಆಸೀಸ್ ಕ್ರಿಕೆಟಿಗರ ಬ್ಯಾಟಿಂಗ್ ಇಷ್ಟ ಆಗುತ್ತದೆ ಎಂದು ಹೇಳಿದ್ದರು.
ಅದಕ್ಕೆ ಟೀಕೆ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದಾರೆ. ನೆಚ್ಚಿನ ಆಟಗಾರರ ಆಯ್ಕೆಯ ಸ್ವಾತಂತ್ರ್ಯದ ಪರ ನಾನಿದ್ದೇನೆ. ಕ್ರಿಕೆಟ್ ಅಭಿಮಾನಿಗಳ ಹೇಳಿಕೆಯಲ್ಲಿ ಭಾರತೀಯರು ಎಂದು ನಮೂದಿಸಿದ ವಿರುದ್ಧ ನಾನು ಆ ಹೇಳಿಕೆ ನೀಡಿದ್ದೆ. ಹೋಗಲಿ ಎಲ್ಲವನ್ನೂ ಮರೆತುಬಿಡಿ.ಹಬ್ಬವನ್ನು ಖುಷಿಯಾಗಿ ಕಳೆಯಿರಿ. ಎಲ್ಲರಿಗೂ ಪ್ರೀತಿ, ನೆಮ್ಮದಿ ಸಿಗಲಿ ಎಂದು ಕೊಹ್ಲಿ ಹೇಳಿದ್ದಾರೆ.