ಟೀಂ ಇಂಡಿಯಾದ ಅಗ್ರೆಸಿವ್ ಬ್ಯಾಟ್ಸ್ ಮನ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾರ ನಡುವಿನ ಲವ್ವಿಡವ್ವಿ ವಿಷಯ ಎಲ್ರಿಗೂ ಗೊತ್ತಿರೋದೆ. ಈ ಜೋಡಿ ಕೆಲವು ತಿಂಗಳು ಕಾಲ ಬ್ರೇಕಪ್ ಸಹ ಮಾಡ್ಕೊಂಡಿದ್ರು. ಆದ್ರೆ ಈಗ ಮತ್ತೆ ಒಂದಾಗಿ ಕಾಣಿಸ್ಕೊಳ್ತಾ ಇದಾರೆ..! ಅಷ್ಟೆ ಅಲ್ಲ ತಮ್ಮ ಅಭಿಮಾನಿಗಳಿಗೊಂದು ಸಪ್ರೈಸ್ ಕೊಡೋಕೆ ಮುಂದಾಗಿದ್ದಾರೆ..! ಅದೇನು ಅಂತಿರಾ..? ವಿರಾಟ್ ಹಾಗೂ ಅನುಷ್ಕಾ ಸದ್ಯದಲ್ಲೆ ಉಂಗುರ ಬದ್ಲಾಯಿಸ್ಕೊಳ್ತಾ ಇದಾರೆ ಅನ್ನೊ ಸುದ್ದಿ ಈಗ ಹರಡಿದೆ. ಬ್ರೇಕಪ್ ಆದ ಎರಡು ಜೋಡಿ ಹಕ್ಕಿಗಳು ಈಗ ಒಂದಾಗಿ ಕಾಣುಸ್ಕೊಳ್ತಾ ಇದ್ದು ಹೊಸ ವರ್ಷಕ್ಕೆ ಈ ಜೋಡಿ ಹೊಸ ಸುದ್ದಿಯನ್ನು ನೀಡುವ ನಿರೀಕ್ಷೆ ಇದೆ. ಕ್ರಿಸ್‍ಮಸ್‍ನ ಹಿಂದಿನ ದಿನ ಈ ಇಬ್ಬರು ಜೋಡಿಗಳು ಉತ್ತರಾಖಂಡದ ಹೋಟೆಲ್ ಆನಂದ್‍ಗೆ ಭೇಟಿ ನೀಡಿದ್ರಂತೆ. ಅಷ್ಟೆ ಅಲ್ಲ ಈ ಬಾರಿಯ ಹೊಸ ವರ್ಷಕ್ಕೆ ಇದೇ ಹೋಟೆಲ್‍ನ ಬುಕ್ ಮಾಡಿದ್ದಾರಂತೆ. ವಿಶೇಷ ಅಂದ್ರೆ ಹೋಟೆಲ್ ಆನಂದ್‍ಗೆ ಹೊಸ ವರ್ಷದ ದಿನ ಕೇವಲ ಕೋಹ್ಲಿ ಹಾಗೂ ಅನುಷ್ಕಾ ಮಾತ್ರ ಬರ್ತಾ ಇಲ್ಲ. ಬದ್ಲಾಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಅನಿಲ್ ಅಂಬಾನಿ, ಪತ್ನಿ ಟೀನಾ ಅಂಬಾನಿ, ಮುಖ್ಯ ಮಂತ್ರಿ ಹರೀಶ್ ರಾವತ್ ಜೊತೆಗೆ ಇಬ್ಬರು ಕ್ರಿಕೆಟರ್ಸ್ ಕೂಡ ಬರ್ತಾ ಇದ್ದು ಎಲ್ಲರ ಅನುಮಾನಗಳಿಗೂ ಕಾರಣವಾಗಿದೆ. ಈ ನಡುವೆ ಕೊಹ್ಲಿ ಹಾಗೂ ಅನುಷ್ಕಾ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಡಿದ್ದು ಅನುಮಾನ ಇನ್ನಷ್ಟು ಹೆಚ್ಚಾಗಿದೆ. ಇನ್ನು ಹೊಸ ವರ್ಷದ ದಿನ ಅನುಷ್ಕಾ ಹಾಗೂ ಕೊಹ್ಲಿ ಕುಟುಂಬಸ್ಥರು ಬರ್ತಾ ಇದ್ದಾರೆ ಎನ್ನುವ ಸುದ್ದಿ ಹರಡಿದೆ. ಹೀಗಾಗಿ ಹೊಸ ವರ್ಷದ ದಿನ ಈ ಇಬ್ಬರು ಜೋಡಿಗಳು ಅಭಿಮಾನಿಗಳಿಗೆ ಖುಷಿಯ ಸಂಗತಿ ನೀಡೋದು ಕನ್ಫರ್ಮ್ ಆಗಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!
ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!
ಉಪೇಂದ್ರ ಹಾಗೂ ಯಶ್ ಬಗ್ಗೆ ಹಂಸಲೇಖ ಹೇಳಿದ್ದಾದ್ರೂ ಏನು..?
ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story
ಜನವರಿಯಿಂದ ಜಿಯೋ ಫ್ರೀ ಇಂಟರ್‍ನೆಟ್ ಕ್ಯಾನ್ಸಲ್..?!!
ಬ್ಯಾಂಕ್ ಜೊತೆ ಬ್ಯುಸಿನೆಸ್ ಮಾಡಲು ಅವಕಾಶ, ಪ್ರತಿ ತಿಂಗಳು 30,000 ತನಕ ಆದಾಯ