ಟೀಂ ಇಂಡಿಯಾದ ಕ್ಯಾಪ್ಟನ್ , ಕ್ರಿಕೆಟ್ ಸಾಮ್ರಾಟ್ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ನಟಿ ಅನುಷ್ಕಾ ಅವರಿಗೆ ಶ್ರೀಲಂಕಾದ ಕ್ರೀಡಾ ಸಚಿವ ದಯಾಶಿರಿ ಜಯಶೇಖರ್ ತಮ್ಮ ದೇಶಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
ವಿರಾಟ್ ಗೆ ಆಹ್ವಾನ ನೀಡಿರುವುದು ಕ್ರಿಕೆಟ್ ಆಡೋಕೆ ಅಂತ ಕರೆದಿರೋದಿಲ್ಲ. ಮದುವೆಯಾದ ಬಳಿಕ ನೀವು ನಮ್ಮ ದೇಶಕ್ಕೆ ಬಂದಿಲ್ಲ. ಇಲ್ಲಿ ಸಾಕಷ್ಟು ನೋಡಿವಂತಹ ಸ್ಥಳಗಳಿವೆ. ನಮ್ಮ ದೇಶಕ್ಕೆ ಅತಿಥಿಗಳಾಗಿ ಬನ್ನಿ ಎಂದು ಕರೆದಿದ್ದಾರೆ.
ಜಯಶೇಖರ್ ಅವರು ವಿರಾಟ್ ಕೊಹ್ಲಿಯ ಆಟವನ್ನು ತುಂಬಾ ಇಷ್ಟಪಟ್ಟಿರುವವರಲ್ಲೊಬ್ಬರು. ವಿರಾಟ್ ಅವರನ್ನು ತಮ್ಮ ದೇಶಕ್ಕೆ ಪ್ರೀತಯಿಂದ ಆಹ್ವಾನಿಸಿದ್ದಾರೆ. ವಿರಾಟ್, ಅನುಷ್ಕಾ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.