ಸೆ.15ರಿಂದ ಯುಎಇ ನಲ್ಲಿ ನಡೆಯಲಿರುವ ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಡುತ್ತಿಲ್ಲ.
ಕೊಹ್ಲಿ ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸುತ್ತಿದ್ದಾರೆ. ನಿರಂತರ ಪಂದ್ಯಗಳನ್ನಾಡುತ್ತಿರುವ ಕೊಹ್ಲಿ ಕುತ್ತಿಗೆ ನೋವಿನ ಸಮಸ್ಯೆಯಿಂದ ಸಹ ಬಳಲಿದ್ದಾರೆ. ವರ್ಷಾಂತ್ಯಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸರಣಿ ನಿಗಧಿ ಆಗಿರುವುದರಿಂದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಏಷ್ಯಾಕಪ್ ಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಉದ್ದೇಶಿಸಿ, ಏಷ್ಯಾಕಪ್ ತಂಡದಿಂದ ಕೊಹ್ಲಿಯನ್ನು ಕೈಬಿಟ್ಟಿದೆ.
ಕೊಹ್ಲಿಯ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡದ ಸಾರಥ್ಯ ವಹಿಸಲಿದ್ದಾರೆ. ಶಿಖರ್ ಧವನ್ ಅವರಿಗೆ ಉಪನಾಯಕನ ಜವಬ್ದಾರಿ ನೀಡಲಾಗಿದೆ. 16 ಆಟಗಾರರನ್ನು ಆಯ್ಕೆಮಾಡಲಾಗಿದ್ದು, ತಂಡ ಇಂತಿದೆ
ರೋಹಿತ್ ಶರ್ಮಾ(ನಾಯಕ), ಕೆ.ಎಲ್ ರಾಹುಲ್, ಶಿಖರ್ ಧವನ್, ಎಂ.ಎಸ್ ಧೋನಿ, ಅಂಬಟಿ ರಾಯಡು, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಮನೀಶ್ ಪಾಂಡೆ, ಯಜ್ವಿಂದರ್ ಚಹಲ್, ಕೇದರ್ ಜಾದವ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಶಾರ್ದುಲ್ ಠಾಕೂರ್,ಜಸ್ಪ್ರೀತ್ ಬೂಮ್ರಾ, ಖಲೀಲ್ ಅಹಮ್ಮದ್