ವಾಯುಮಾಲಿನ್ಯ ನಿಯಂತ್ರಣಕ್ಕೆ ಕೊಹ್ಲಿ ಸಲಹೆ

Date:

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹೊಗೆ ಮಂಜು (ಸ್ಮಾಗ್) ಹಾಗೂ ವಾಯುಮಾಲಿನ್ಯ ಹೆಚ್ಚಿದೆ. ಇದರಿಂದ ಜನ ತುಂಬಾ ತೊಂದರೆ ಅನುಭವಿಸ್ತಾ ಇದ್ದಾರೆ. ದೆಹಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಲೆಕೆಡಿಸಿಕೊಂಡಿವೆ. ಹೀಗಿರುವಾಗ ಟೀಂ ಇಂಡಿಯಾದ ಕ್ಯಾಪ್ಟನ್, ರನ್ ಮಿಶನ್ ವಿರಾಟ್ ಕೊಹ್ಲಿ ವಾಯುಮಾಲಿನ್ಯ ತಡೆಗೆ ಸಲಹೆ ನೀಡಿದ್ದಾರೆ.


ಈ ಬಗ್ಗೆ ಟ್ವೀಟರ್‍ನಲ್ಲಿ ವೀಡಿಯೋ ಒಂದನ್ನು ಅಪ್ಲೋಡ್ ಮಾಡಿರೋ ಕ್ರಿಕೆಟ್ ಸಾಮ್ರಾಟ್ ವಿರಾಟ್ ಪ್ರತಿಯೊಬ್ಬರು ಜೀವನ ಶೈಲಿ ಬದಲಿಸಿಕೊಳ್ಳಬೇಕಿದೆ ಅಂತ ಹೇಳಿದ್ದಾರೆ.


ವಾಯುಮಾಲಿನ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳಿಂದ ಯಾವುದೇ ಪ್ರಯೋಜನವಿಲ್ಲ, ಇದರಿಂದ ನಿಯಂತ್ರಣ ಸಾಧ್ಯವಿಲ್ಲ ಎಂದಿರೋ ಕೊಹ್ಲಿ ವೀಡಿಯೋ ಮೂಲಕ ಸಂದೇಶ ಒಂದನ್ನು ನೀಡಿದ್ದಾರೆ.
ನಾವು ಮಾಲಿನ್ಯದ ವಿರುದ್ಧದ ಪಂದ್ಯವನ್ನು ಗೆಲ್ಲಬೇಕಾದರೆ, ಸಂಘಟಿತವಾಗಿ ಆಡಬೇಕು. ಆಗ ಮಾತ್ರ ಗೆಲುವು ಸಾಧ್ಯವಾಗುತ್ತೆ. ಮಾಲಿನ್ಯ ಕಡಿಮೆ ಮಾಡೋದು ನಮ್ಮೆಲ್ಲರ ಕರ್ತವ್ಯ, ಅದರಲ್ಲೂ ವಿಶೇಷವಾಗಿ ದೆಹಲಿ ನಿವಾಸಿಗಳ ಕರ್ತವ್ಯವಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.


ಖಾಸಗಿ ವಾಹನಗಳನ್ನು ಬಳಸೋದನ್ನು ಬಿಟ್ಟು, ಬಸ್, ಮೆಟ್ರೋ, ಸೋಲರ್ ಕ್ಯಾಬ್‍ಗಳಲ್ಲಿ ಸಂಚರಿಸಬೇಕು. ವಾರದಲ್ಲಿ ಒಂದು ದಿನ ಮಾಡಿದರೂ ಇದರಿಂದ ಬದಲಾವಣೆ ಸಾಧ್ಯವಾಗುತ್ತೆ ಅಂತ ಸಲಹೆ ನೀಡಿದ್ದಾರೆ.

https://twitter.com/imVkohli/status/930856114186477568

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ತಪ್ಪದೆ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ! ಯಾವುವು ಗೊತ್ತಾ..?

ಚಳಿಗಾಲದಲ್ಲಿ ತಪ್ಪದೆ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ! ಯಾವುವು ಗೊತ್ತಾ..? ಚಳಿಗಾಲದಲ್ಲಿ ಹೃದಯ...

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ ಬೆಂಗಳೂರು: ಮುಖ್ಯಮಂತ್ರಿ...

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...