ಟೀಂ ಇಂಡಿಯಾದ ಸ್ಪೋಟಕ ಬ್ಯಾಟ್ಸ್ ಮನ್ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಕ್ರಿಕೆಟ್ ಕೆರಿಯರ್‍ಗೆ ಗುಡ್‍ಬೈ ಹೇಳಿದ್ಮೆಲೆ ಅವ್ರು ಯಾವತ್ತು ಸುಮ್ನೆನೆ ಕೂರ್ಲಿಲ್ಲ ಅನ್ಸತ್ತೆ. ಯಾಕಂದ್ರೆ ಬ್ಯಾಟಿಂಗ್‍ನಲ್ಲಿ ಹೆಸ್ರು ಮಾಡಿದ ನಂತ್ರ ಟ್ವಿಟರ್‍ನಲ್ಲಿ ಸೆಲೆಬ್ರೆಟಿಗಳ ಕಾಲೆಳೆಯೊ ಮೂಲಕ ಟ್ವಿಟರ್ ಕಿಂಗ್ ಪಟ್ಟ ಗಳಿಸಿರೊ ವೀರೂ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ..! ಅದೇನಪ್ಪಾ ಅಂತೀರಾ..? ವೀರೂ ಈಗ ಗಾಯಕರಾಗಿ ಮಿಂಚುತ್ತಿದ್ದಾರೆ..! ರಿಯಾಲಿಟಿ ಶೋ ಒಂದರ ಜಡ್ಜ್ ಆಗಿ ಭಾಗವಹಿಸಿದ್ದ ಡೆಲ್ಲಿ ಡ್ಯಾಶರ್ ಬಾಲಿವುಡ್ ಖ್ಯಾತ ಗಾಯಕ ಕಿಶೋರ್ ಕುಮಾರ್ ಹಾಡಿರುವ ಶ್ರೇಷ್ಠ ನಟ ರಾಜೇಶ್ ಖನ್ನಾ ಅಭಿನಯಿಸಿರುವ ಮೇರಿ ಜೀವನ್ ಸಾತಿ ಚಿತ್ರದ ‘ಚಲೇ ಜಾತಾ ಹೂಂ ಕಿಸಿಕಿ ಗುನ್ ಮೈ’ ಹಾಗೂ ತು ಜಾನೆ ನಾ ಎಂಬ ಹಾಡನ್ನು ತನ್ನ ಸುಮಧುರ ಕಂಠದ ಮೂಲಕ ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಸೆಹ್ವಾಗ್‍ರೊಂದಿಗೆ ಖ್ಯಾತ ಗಾಯಕ ಸೋನು ನಿಗಮ್ ಹಾಗೂ ಇತರೆ ಗಾಯಕರೂ ಕೂಡ ಹಾಡಿ ಮನರಂಜನೆ ನೀಡಿದ್ದು ವಿಶೇಷವಾಗಿತ್ತು. ಏನೆ ಆಗ್ಲಿ ಸೆಹ್ವಾಗ್ ತಾನು ಕೇವಲ ಬ್ಯಾಟ್‍ನಿಂದ ಮಾತ್ರವಲ್ಲ ಹಾಡಲ್ಲೂ ಎಲ್ಲರನ್ನು ರಂಜಿಸುತ್ತೇನೆ ಅನ್ನೋದನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಜಯಲಲಿತ ಜೀವನಾಧಾರಿತ ಸಿನಿಮಾ ಮಾಡ್ತಾರಂತೆ ಆರ್.ಜಿ.ವಿ..!
LIVE : ಬಿಗ್‍ಬಾಸ್ ಕನ್ನಡ ಸೀಸನ್-04 ಈ ಮೂವರಲ್ಲಿ ಫೈನಲ್ ತಲಪುವವರು ಯಾರು.?
ರಾಜಮೌಳಿಯ ಮಹಾಭಾರತದಲ್ಲಿ ಸುದೀಪ್ ಕರ್ಣ?
ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಕೀರ್ತಿ ಬಗ್ಗೆ ಅಪಪ್ರಚಾರ
ಮೋದಿಗೆ ಧನ್ಯವಾದ ಹೇಳಿದ ಒಬಾಮಾ ಯಾಕೆ ಗೊತ್ತಾ.?
ಮೆಣಸಿನಕಾಯಿ ತಿಂದು ಬೀಗಿದ ಪ್ರಥಮ್.
ಮನಿ ಪ್ಲಾಂಟ್ ಮನೆಗೆ ಸೊಬಗೋ ಮನಿಯ ಸಂಕೇತವೋ???
ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?