ನೀವು ಥಾಯ್ಲೆಂಡ್ ಗೆ ಪ್ರವಾಸ ಹೋಗಬೇಕೇ…? ಹಾಗಾದರೆ ನಿಮಗೆ ಉಚಿತ ಪ್ರವಾಸಿ ವೀಸಾ ಸೌಲಭ್ಯ ಇದೆ.
ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಭಾರತೀಯರು ಉಚಿತ ಪ್ರವಾಸಿ ವೀಸಾ ದೊಂದಿಗೆ ಥಾಯ್ಲೆಂಡ್ ಪ್ರವಾಸ ಮಾಡಬಹುದು.
ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ.
‘ವೀಸಾ ಆನ್ ಅರೈವಲ್ ‘ ಶುಲ್ಕವನ್ನು ಈ ಎರಡು ತಿಂಗಳ ಅವಧಿಗೆ ಥಾಯ್ಲೆಂಡ್ ರದ್ಧುಪಡಿಸಿದೆ. ಹೀಗಾಗಿ ಈಗ ಇರುವ 4,385 ಶುಲ್ಕ ನೀಡ ಬೇಕಿಲ್ಲ. 21 ರಾಷ್ಟ್ರಗಳ ಪ್ರವಾಸಿಗರಿಗೆ ಡಿಸೆಂಬರ್ 1ರಿಂದ ಜನವರಿ 31ರವರೆಗೆ ವೀಸಾ ಶುಲ್ಕ ರದ್ದು ಪಡಿಸಲಾಗಿದೆ.