ವಿಷ್ಣುದಾದರಿಂದ ಸೂಪರ್‍ಸ್ಟಾರ್ ಆದ್ರಂತೆ ಈ ನಟ..!

Date:

1950 ರಲ್ಲಿ ಸಂಪತ್ ಕುಮಾರ್ ಎನ್ನುವ ರತ್ನ ಒಂದು ಮೈಸೂರಿನಲ್ಲಿ ಜನ್ಮ ತಾಳತ್ತೆ.. ಅವತ್ತು ಸಂಪತ್ ಕುಮಾರ್ ಇವತ್ತು ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ಜಗತ್ತೇ ನೆನಪಿನಲ್ಲಿಟ್ಟುಕೊಳ್ಳವಂತಹ ಶಕ್ತಿಯಾಗಿ ಹೊರಹೊಮ್ಮುತ್ತಾರೆ.. ಇವರಿಂದ ಸಿನಿಮಾ ಲೋಕಕ್ಕೆ ಅದ್ಭುತ ಕೊಡುಗೆಯನ್ನು ಕೊಡ್ಬೇಕು ಅಂತ ಇತ್ತು ಅನ್ನಿಸತ್ತೆ. ತಮ್ಮ ಮೊದ್ಲ ಸಿನಿಮಾ ವಂಶವೃಕ್ಷಾದಲ್ಲಿ ಸಪೋರ್ಟಿವ್‍ರೋಲ್‍ನಲ್ಲಿ ನಟಿಸುತ್ತಾರೆ. ಆಗ ಪುಟ್ಟಣ್ಣ ಕಣಗಾಲ್ ಅವ್ರಿಗೆ ಅನ್ನಿಸರ್ಬೇಕು ಈ ನಟ ಮುಂದೊಂದು ದಿನ ಜಗತ್ತನ್ನೆ ತನ್ನ ನಟನೆಯ ಮೂಲಕ ಪರಿಚಯಿಸಿಕೊಳ್ತಾನೆ ಅಂತ. ಆ ಕಾರಣದಿಂದಲೇ ನಾಗರಹಾವು ಚಿತ್ರಕ್ಕೆ ನಾಯಕನಟನನ್ನಾಗಿ ಆಯ್ಕೆ ಮಾಡಿಕೊಳ್ತಾರೆ. ಈ ನಟ ಯಾರು ಅಂತಾ ಈಗಾಗಲೇ ಗೊತ್ತಾಗಿದೆ ಅಲ್ವಾ..
ಸಾಹಸಸಿಂಹ, ಅಭಿನವ ಭಾರ್ಗವ ಎಂದೆಲ್ಲಾ ಕರೆಯಲ್ಪಡುವ ಏಕೈಕ ನಟ ಅಂದ್ರೆ ಅದು ವಿಷ್ಣುವರ್ಧನ್ ಮಾತ್ರ.. ತಾವು ನಟಿಸಿದ ಮೊದ್ಲ ಚಿತ್ರವೇ 100 ಡೇಸ್ ಪೂರೈಸುತ್ತೆ. ಒಬ್ಬ ಹೊಸ ನಟನ ಚಿತ್ರ ಒಂದು ವಾರ ಥಿಯೇಟರ್‍ಗಳಲ್ಲಿ ನಿಲ್ಲುವುದೇ ಹೆಚ್ಚು ಇಂತಹ ಟೈಮ್ನಲ್ಲಿ ನೂರು ದಿನ ಪೂರೈಸತ್ತೆ ಅಂದ್ರೆ ಆ ನಟನ ಸಾಮರ್ಥ ಎಂಥಹದ್ದು ಅಂತ ಯೋಚಿಸಲೇಬೇಕಲ್ವೇ..
ಅಲ್ಲಿಂದ ವಿಷ್ಣು ನಟಿಸಿದ್ದ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗ್ತಾವೆ. ಗಂಧದ ಗುಡಿಯಲ್ಲಿ ಡಾ.ರಾಜ್‍ಕುಮರ್ ಜೊತೆ ನಟಿಸಿ ಸೈ ಎನ್ನಿಸಿಕೊಂಡಿದ್ರು.. ನಂತ್ರ ಬಂದ ಭೂತಯ್ಯನ ಮಗ ಅಯ್ಯೂ, ಕಳ್ಳಕುಳ್ಳ ಸೇರಿದಂತೆ ಎಲ್ಲಾ ಚಿತ್ರಗಳು ಮೆಗಾ ಹಿಟ್ ಆಗ್ತಾವೆ. ಇವರ ನಟನಾ ಸಾಮರ್ಥ್ಯ ಕಂಡು ಅಭಿಮಾನಿಗಳು ವಿಷ್ಣುವರ್ಧನ್ ಅವ್ರಿಗೆ ವಿಷ್ಣುದಾದ ಅಂತ ಕರೀತಾರೆ.. ಸಿನಿಮಾ ಅಷ್ಟೇ ಅಲ್ಲದೆ, ಚಿತ್ರರಂಗದ ಎಲ್ಲಾ ನಟರ ಜೊತೆ ಒಳ್ಳೆಯ ಸ್ನೇಹಿತರಾಗಿರ್ತಾರೆ.. ಸಮಾಜ ಸೇವೆಯಲ್ಲಂತೂ ಎತ್ತಿದ ಕೈ ಅವರದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷ್ಯ. ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟ ವಿಷ್ಣುವರ್ಧನ್..
ಕನ್ನಡದಲ್ಲಿ ವಿಷ್ಣುವರ್ಧನ್ ಅವ್ರನ್ನ ಹೇಗೆ ದೇವ್ರು, ಸಾಹಸಸಿಂಹ, ಅಭಿನವ ಭಾರ್ಗವ ಅಂತೆಲ್ಲಾ ಕರೆದು ಪೂಜಿಸುತ್ತಾರೋ ಹಾಗೆ ತಮಿಳಿನಲ್ಲಿ ಈರ್ವ ನಟನನ್ನ ಅಭಿಮಾನಿಗಳು ಪೂಜಿಸುತ್ತಾರೆ.. ತಲೈವಾ.. ಸೂಪರ್‍ಸ್ಟಾರ್ ಅಂಥೆಲ್ಲಾ ಕರೆಯಲ್ಪಡುವ ಆ ವ್ಯಕ್ತಿ ಬೇರ್ಯಾರೂ ಅಲ್ಲ ನಮ್ಮ ಸೂಪರ್ ಸ್ಟಾರ್ ರಜಿನಿಕಾಂತ್.. ಹೌದು ರಜಿನಿ ಮತ್ತು ವಿಷ್ಣುದಾದ ಒಳ್ಳೆಯ ಸ್ನೇಹಿತ್ರು.. ಇಬ್ಬ್ರು ಜೊತೆಯಾಗಿ ಕನ್ನಡದಲ್ಲಿ ಸಹೋದರರ ಸವಾಲ್, ಕಿಲಾಡಿ ಕಿಟ್ಟುಗಳಂತ ಸೂಪರ್ ಹಿಟ್ ಚಿತ್ರಗಳನ್ನು ಮಾಡಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ್ರು ಈ ಜೋಡಿ. ಇವೆಲ್ಲ ಹಳೆಯ ಮಾತು. ಆದ್ರೆ ನಿಮಗೊಂದು ಸತ್ಯ ಗೊತ್ತಾ..? ರಜನಿಕಾಂತ್ ಸೂಪರ್ ಸ್ಟಾರ್ ಪಟ್ಟ ಪಡೆಯೋಕೆ ಅವ್ರಿಂದೆ ನಿಂತು ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ ವ್ಯಕ್ತಿ ಯಾರು ಅಂತ..? ರಜಿನಿ ಎಲ್ಲಿದ್ರೆ ಅವ್ರ ಜೀವನ ಉಜ್ವಲವಾಗುತ್ತೆ ಅಂಥಾ ಯಾರಿಂದ ಸತ್ಯ ಗೊತ್ತಾಯ್ತು ಅನ್ನೋದು ಗೊತ್ತಾ..? ಅದನ್ನ ಸ್ವತಃ ರಜನಿ ಅವ್ರೆ ಹೇಳಿದ್ದಾರೆ ನೋಡಿ.. ಒಮ್ಮೆ ರಜಿನಿಕಾಂತ್ ಅವ್ರಿಗೆ ತಮಿಳು ಪ್ರಡ್ಯೂಸರ್‍ರಿಂದ ತಮಿಳು ಚಿತ್ರಕ್ಕೆ ಅಫರ್ ಬಂದಿತ್ತಂತೆ ಅದೇ ಟೈಮ್‍ಗೆ ಕನ್ನಡದಲ್ಲೂ ಒಂದು ಚಿತ್ರಕ್ಕೆ ಅಫರ್ ಬರುತ್ತೆ ಈ ಟೈಮಲ್ಲಿ ರಜಿನಿ ಫುಲ್ ಕನ್ಯ್ಫೂಶನ್ ಆಗಿದ್ರಂತೆ. ಯಾವ ಸಿನಿಮಾನ ಒಪ್ಪಿಕೊಂಡ್ರೆ ಚನ್ನಾಗಿರುತ್ತೆ ಅನ್ನೋ ಕನ್ಫೂಷನ್‍ನಲ್ಲಿದ್ರಂತೆ ರಜಿನಿ. ಈ ಕುರಿತು ಚಿತ್ರರಂಗದ ಆಪ್ತ ಸ್ನೇಹಿತರಾಗಿ ಬೆಳೆದಿದ್ದ ವಿಷ್ಣು ಅವರ ಬಳಿ ಹೇಳಿಕೊಂಡಾಗ, ವಿಷ್ಣು ನೀವು ತಮಿಳು ಚಿತ್ರವನ್ನೇ ಒಪ್ಪಿಕೋಳ್ಳಿ ಅಂದಿದ್ರಂತೆ. ಗೆಳೆಯ ಹೇಳಿದ ಮಾತಿಗೆ ಮರು ಮಾತನಾಡದೆ ತಮಿಳು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡ್ರಂತೆ ಈ ಸೂಪರ್ ಸ್ಟಾರ್..
ಕೆಲವ್ರಿಗೆ ಅನ್ನಿಸ್ಬೇಕು ವಿಷ್ಣುದಾದ ಸ್ವಾರ್ಥತೆ ತೋರ್ಸಿದ್ರಾ ಅಂತ. ಹಾಗೇನಾದ್ರು ಅಂದುಕೊಂಡ್ರೆ ನಿಮ್ಮ ಕಲ್ಪನೆ ಖಂಡಿತ ತಪ್ಪು. ವಿಷ್ಣುದಾದಾಗೆ ಅವತ್ತೆ ಗೊತ್ತಾಗಿದೆ ರಜಿನಿಯ ನಟನಾ ಕೌಶಲ್ಯಕ್ಕೆ ತಮಿಳಿನಲ್ಲಿ ಆಧ್ಯತೆ ಇದೆ. ಕನ್ನಡದ ರತ್ನ ತಮಿಳಿನಲ್ಲಿ ಮಿಂಚಲಿದೆ ಎಂದು. ಆ ಕಾರಣಕ್ಕೆ ವಿಷ್ಣು ತಮಿಳು ಚಿತ್ರವನ್ನು ಒಪ್ಪಿಕೊ ಎಂದಿರುವುದು. ಅಂದು ವಿಷ್ಣು ಅವರ ಮಾತನ್ನು ರಜಿನಿ ಒಪ್ಪಿಕೊಂಡಿದ್ದರಿಂದಲೇ ಇಂದು ಸಿನಿಮಾ ಜಗತ್ತಿಗೆ ರಜಿನಿಕಾಂತ್ ಕೊಟ್ಟಿರುವ ಕೊಡುಗೆ ಹಾಗೆ ನೆಲೆನಿಂತಿದೆ.. ಸ್ವತಃ ರಜಿನಿ ಅವರೆ ನಾನಿಂದು ಸೂಪರ್‍ಸ್ಟಾರ್ ಆಗಿದ್ದೇನೆ ಅಂದ್ರೆ ಅದಕ್ಕೆ ವಿಷ್ಣು ಅವ್ರೇ ಕಾರಣ. ಅವತ್ತು ಅವ್ರು ತಮಿಳು ಚಿತ್ರವನ್ನು ಆಯ್ಕೆ ಮಾಡಿಕೊ ಎನ್ನದಿದ್ದರೆ ನಾನಿಂದು ಸೂಪರ್‍ಸ್ಟಾರ್ ಆಗುತ್ತಿರಲಿಲ್ಲ ಅಂತ ವಿಷ್ಣು ಅವ್ರಾ ಬಗ್ಗೆ ಹೇಳಿದ್ದರು..
ಅವರ ಮತ್ತು ನನ್ನ ಗೆಳೆತನದ ಬಗ್ಗೆ ವರ್ಣಿಸಲು ಪದಗಳೇ ಸಾಲದು ನಾನೊಬ್ಬ ಒಳ್ಳೆಯ ಗೆಳೆಯನ್ನು ಕಳೆದುಕೊಂಡಿದ್ದೇನೆ ಎಂದು ದುಖಪಟ್ಟಿದ್ದರು ರಜಿನಿ.. ಒಬ್ಬ ಕನ್ನಡದ ನಟ ತಮಿಳಿನಲ್ಲಿ ಸ್ಟಾರ್ ಆಗಿ ಮಿಂಚುತ್ತಾನೆ ಅಂದ್ರೆ ಅದು ಖುಷಿಯ ಸಂಗತಿ ಅಲ್ವೇ.. ಮಹಾನ್ ನಟನನ್ನು ಕಳೆದುಕೊಂಡಿದ್ದು ನಮ್ಮ ದುರಾದೃಷ್ಟವಾದ್ರು ಇಂತಹ ನಟ ನಮ್ಮ ಮಧ್ಯೆ ಇದ್ದರಲ್ಲ ಎನ್ನುವುದೇ ಖುಷಿ.

  • ಹಾಲೇಶ್ ಎಂ.ಎಸ್ ಹುಣಸನಹಳ್ಳಿ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.

ಶುಭ ಶುಕ್ರವಾರದಂದು ತೆರೆಗೆ ಬರಲಿದೆ ಕುಳ್ಳನ ಚೌಕ

ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

Share post:

Subscribe

spot_imgspot_img

Popular

More like this
Related

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ ಸ್ಯಾಂಡಲ್‌ವುಡ್‌ನ ಖ್ಯಾತ ನಟ...

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಜಾ

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ...

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....