ಇಂದು ವಿಷ್ಣುವರ್ಧನ್ ಪುಣ್ಯತಿಥಿ, ಸ್ಮಾರಕ ಆಗೋವರೆಗೂ ಮಾತನಾಡುವುದಿಲ್ಲ ಎಂದರು ಭಾರತಿ..
ಇಂದು ಸಾಹಸ ಸಿಂಹ ವಿಷ್ಣುವರ್ಧನ್ ಅವರ 9ನೇ ಪುಣ್ಯತಿಥಿ. ಮುಂಜಾನೆ ವಿಷ್ಣು ಕುಟುಂಬ ಅಭಿಮಾನ್ ಸ್ಟುಡಿಯೋಗೆ ಆಗಮಿಸಿ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಅಭಿಮಾನಿಗಳು ಅನ್ನದಾನ, ರಕ್ತದಾನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾದೆ.
ಅಭಿಮಾನ್ ಸ್ಟುಡಿಯೋ ಮಾತ್ರವಲ್ಲದೆ ಆಟೋ ರಿಕ್ಷಾಗಳಲ್ಲೂ ಸಾಹಸ ಸಿಂಹನ ಭಾವಚಿತ್ರ ಹಾಕಿ, ಪೂಜೆ ಸಲ್ಲಿಸಲಾಗುತ್ತಿದೆ.
ಈ ಬಗ್ಗೆ ಭಾರತಿ ವಿಷ್ಣುವರ್ಧನ್ ಮಾತನಾಡಿ, 9 ವರ್ಷ ಕಳೆದರೂ ವಿಷ್ಣು ಪುಣ್ಯ ಭೂಮಿ ನಿರ್ಮಾಣಗೊಂಡಿಲ್ಲ ಅನ್ನೋ ಕೊರಗು ಇದ್ದೇ ಇದೆ. ಸ್ಮಾರಕ ನಿರ್ಮಾಣ ಆಗೋ ವರೆಗೆ ಮಾತನಾಡುವುದಿಲ್ಲ. ಅಭಿಮಾನಿಗಳ ಕೂಡ ಕಾಯುತ್ತಿದ್ದು, ಅದಷ್ಟು ಬೇಗ ಸಮಾಧಿ ಆಗಲ್ಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.