ಬಡವರು, ಶ್ರೀಮಂತರನ್ನು ಬೇರ್ಪಡಿಸುತ್ತದೆ ಈ ಗೋಡೆ..!

0
156

ಶ್ರೀಮಂತರು, ಬಡವರು ತಮ್ಮ ಅಗತ್ಯಕ್ಕೆ ತಕ್ಕಂತಹ ಪ್ರದೇಶದಲ್ಲಿ ವಾಸಿಸುತ್ತಾರೆ. ಶ್ರೀಮಂತರು ವಾಸಿಸುವ ಪ್ರದೇಶ ಸ್ವಚ್ಛ, ಸುಂದರವಾಗಿರುತ್ತದೆ. ಆದರೆ ಬಡವರದ್ದು ಅದಕ್ಕೆ ತದ್ವಿರುದ್ಧ ಸ್ಥಿತಿ. ಆದ್ದರಿಂದ ಶ್ರೀಮಂತರ ಮನೆಗಳಿಗೂ, ಬಡವರ ಮನೆಗಳಿಗೂ ಹೆಚ್ಚು ಅಂತರವಿರುತ್ತದೆ. ಆದರೆ ಶ್ರೀಮಂತರ ಮನೆಯ ಪಕ್ಕದಲ್ಲೇ ಬಡವರ ಮನೆಗಳಿದ್ದರೆ ಹೇಗೆ..? ಈ ಪ್ರಶ್ನೆಗೆ ಪೆರು ದೇಶದ ಶ್ರೀಮಂತರು ಉತ್ತರ ಕಂಡುಕೊಂಡಿದ್ದಾರೆ. ಅದೇನೆಂದರೆ ಗೋಡೆ ಕಟ್ಟುವುದು.


ಯೆಸ್.. ಬಡವರಿಂದ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಪೆರು ದೇಶದ ಶ್ರೀಮಂತರು ತಮ್ಮ ಪಕ್ಕದ ಬಡವರ ಮನೆಗಳಿಂದ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಒಂಧು ಬೃಹತ್ ಗೋಡೆ ನಿರ್ಮಿಸಿದ್ದಾರೆ. ಇದನ್ನು ಪೆರು ದೇಶದ ಬರ್ಲಿನ್ ಗೋಡೆ ಎಂದು ಕರೆಯುತ್ತಾರೆ.


ಕೈಜುವಾರಿನಾಜ್ ಎಂಬ ಈ ಪ್ರದೇಶದಲ್ಲಿ ಹೆಚ್ಚು ಸಂಖ್ಯೆ ಶ್ರೀಮಂತರು ನೆಲೆಸಿದ್ದಾರೆ. ಅವರ ಬೀದಿಗಳ ಪಕ್ಕದಲ್ಲೇ ಬಡವರು ವಾಸವಿದ್ದಾರೆ. ಅವರಿಂದ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದಲೇ ಹತ್ತು ಫೀಟ್ ಅಗಲದ ಈ ಗೋಡೆಯನ್ನು ನಿರ್ಮಿಸಿ ಅದರ ಮೇಲೆ ಟಾರ್ ಹಾಕಲಾಗಿದೆ. ಈಗ ಈ ಗೋಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ಇದನ್ನು ವೀಕ್ಷಿಸಿದ್ದಾರೆ.
ಪೆರುವಿನ ಈ ಗೋಡೆಗೆ ವಾಲ್ ಆಫ್ ಶೇಮ್ ಎಂದು ಹೆಸರಿಡಲಾಗಿದ್ದು, ಒಂದು ಬದಿಯ ಜನರು ಇನ್ನೊಂದು ಬದಿಗೆ ಬರಲು ಸಾಧ್ಯವಾಗದ ರೀತಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಆದರೆ ಈ ಗೋಡೆ ಹತ್ತಾರು ಚರ್ಚೆಗಳಿಗೆ ಆಹಾರವಾಗಿದೆ. ವಿಶೇಷವೆಂದರೆ ಈ ಗೋಡೆ ಶ್ರೀಮಂತರ ದರ್ಪವನ್ನು ಎತ್ತಿ ತೋರಿಸುತ್ತದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.

wall of shame Video :

 

LEAVE A REPLY

Please enter your comment!
Please enter your name here