ಸಿಕ್ಕಾಪಟ್ಟೆ ಚಳಿ. ತಡೆದುಕೊಳ್ಳೋಕೆ ಆಗ್ತಾ ಇಲ್ಲ..! ಮನೆಯಲ್ಲಿ ಬೆಚ್ಚಗೆ ಹೊದ್ಕೊಂಡು ಮಲಗಿದ್ರೆ ಆಹಾ..ಎಂಥಾ ನಿದ್ರೆ..?!
ಎಷ್ಟೇ ಕೆಟ್ಟ ಚಳಿಯಿದ್ರೂ ಮನೆಯಿದ್ದವರು ಹೇಗೋ ತಡೆದುಕೊಳ್ತೀವಿ..! ಆದ್ರೆ ಮನೆಯಿಲ್ಲದವರ ಕಥೆ..?! ಇರಾನ್ ನಲ್ಲಂತೂ ಈಗ ಸಿಕ್ಕಾಪಟ್ಟೆ ಚಳಿ..! ಚಳಿ ಚಳಿ ಚಳಿ ಅಂತ ನಡಗುತ್ತಾ ಇದ್ದಾರೆ..! ಅಲ್ಲಿ ಮನೆ ಇರೋರು, ದುಡ್ಡಿರೋರು ಹೇಗೋ ಬೆಚ್ಚಗೆ ಇರ್ತಾರೆ..? ಮನೆ ಇಲ್ಲದವರು ಹೇಗಪ್ಪಾ ಬದುಕೋದು..?!
ಮನೆಯಿಲ್ಲದವರಿಗಾಗಿಯೇ ಈಗ ಇರಾನ್ ನಲ್ಲಿ `ದಯೆ ಗೋಡೆ’ಗಳನ್ನು (ವಾಲ್ಸ್ ಆಫ್ ಕೈಂಡ್ನೆಸ್) ನಿರ್ಮಿಸಲಾಗಿದೆ..!
ಮನೆಯಿಲ್ಲದವರಿಗೆ ದಯೆ ಗೋಡೆಗಳಾ..?! ಹೌದು ಸಾರ್ ದಯೆ ಗೋಡೆಗಳು..! ಈ ಬಣ್ಣದ ಗೋಡೆಗಳಲ್ಲಿ ಮೊಳೆಗಳನ್ನು ಸಿಕ್ಕಿಸಲಾಗಿದೆ..! ಇಲ್ಲಿ ಮನೆ ಇಲ್ಲದವರಿಗಾಗಿ ಕೋಟ್, ಸ್ವೆಟರ್, ಪ್ಯಾಂಟ್ ಹೀಗೆ ಬೆಚ್ಚನೆ ಬಟ್ಟೆಗಳನ್ನು ಸಿಕ್ಕಿಸಿ ಹೋಗ ಬಹುದು..! ಹೀಗೆ ಮನೆಯಿಲ್ಲದವರಿಗಾಗಿ ಬಟ್ಟೆ ದಾನ ಮಾಡಲು ಈ ದಯೆ ಗೋಡೆಗಳನ್ನು ನಿರ್ಮಿಸಲಾಗಿದೆ..!
ಈ ರೀತಿಯ ಪರಿಕಲ್ಪನೆ ಮೊದಲು ಮಶಾದ್ ನ ಈಶಾನ್ಯ ನಗರದಲ್ಲಿ ಪ್ರಯೋಗಿಸಲಾಯಿತು..! ನಂತರ ಸಾಮಾಜಿಕ ಜಾಲತಾಣಗಳಲ್ಲಿ ಇದು ತುಂಬಾನೇ ಪ್ರಚಾರಕ್ಕೆ ಬಂತು ನಂತರದಲ್ಲಿ ಇರಾನ್ ನ ಹಲವಾರು ಕಡೆಗಳಲ್ಲಿ ಮನೆ ಇಲ್ಲದವರಿಗಾಗಿ `ದಯೆ ಗೋಡೆಗಳು’ ಹುಟ್ಟಿಕೊಂಡವು..!
ಅಧಿಕೃತ ಮಾಹಿತಿ ಪ್ರಕಾರ ಇರಾನ್ ನಲ್ಲಿ 15,000 ಮನೆಯಿಲ್ಲದವರಿದ್ದಾರೆ. ಆದರೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಿರಾಶ್ರಿತರಿದ್ದಾರೆಂದು ಹೇಳಲಾಗುತ್ತಿದೆ. ಈ ಎಲ್ಲಾ ನಿರಾಶ್ರಿತರಿಗೆ ಚಳಿಯಿಂದ ರಕ್ಷಣೆ ಸಿಗಲು ಈ `ದಯೆ ಗೋಡೆಗಳನ್ನು’ ನಿರ್ಮಿಸಲಾಗಿದೆ..! ಈ `ದಯೆ ಗೋಡೆ’ ಸಧ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ವಿಷಯವೂ ಆಗಿದೆ.. .
- ಶಶಿಧರ ಡಿ ಎಸ್ ದೋಣಿಹಕ್ಲು
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಇವರು ವಿಶ್ವ ಸುತ್ತಿ ದುಡ್ಡು ಮಾಡಿದ್ರು..! ಕೆಲಸ ಬಿಟ್ಟು, ಜಗತ್ತನ್ನು ಸುತ್ತಿ ದುಡ್ಡು ಮಾಡಿದ್ದು ಹೇಗೆ..?
ಸಾಮಾಜಿಕ ಜಾಲತಾಣಗಳಲ್ಲಿ ಇವರ ಒಂದು ಪೋಸ್ಟ್ ಮೌಲ್ಯ 8289993.75 -19898985.00 ರೂಪಾಯಿಗಳು..!
78 ವರ್ಷದ ಅಜ್ಜಿಯನ್ನು ರಕ್ಷಿಸಿದ 8ರ ಹುಡುಗಿ..! ಕಾಡಿನ ಮಧ್ಯೆ 4.5 ಕಿಮೀ ನಡೆದಿದ್ದಳಂತೆ ಆ ಪುಟ್ಟ ಬಾಲೆ..!
ರಷ್ಯಾದಲ್ಲಿ ನಡೆಯಿತು ಕೂದಲಿಗಾಗಿ 8 ಕೊಲೆ..! ಕೂದಲಿನ ವಿಷಯಕ್ಕೆ ಪತ್ನಿ, ಮಕ್ಕಳು, ತಾಯಿಯನ್ನೇ ಕೊಂದ..!
ಒಂಟೆಗೆ ಮುತ್ತಿಕ್ಕಿದಳು ಆತ ಡೈವೋರ್ಸ್ ಕೊಟ್ಟ..! ಇದು ಒಂ(ಟೆ)ದು ಮುತ್ತಿನ ಕಥೆ..!
ಕೂಲಿಯ ಮಗ ಇವತ್ತು 100 ಕೋಟಿ ಒಡೆಯ..! ಆರನೇ ಕ್ಲಾಸ್ ಫೇಲ್ ಆಗಿದ್ದ ಹುಡುಗ ಇವತ್ತು ಕೋಟ್ಯಾಧಿಪತಿ..!
ಹುಚ್ಚು ಪರಪಂಚದಲ್ಲಿ ಹುಚ್ಚ ವೆಂಕಟ್ ಗಾನಸುಧೆ.. !
ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!