ಅಮಾಯಕರ ಬಲಿ ಪಡೆದಿದ್ದ ಉಗ್ರರ ನೆಲೆ ಧ್ವಂಸ ಮಾಡಿದ್ದು ಸಮಾಧಾನ ತಂದಿದೆ: ಹೆಚ್ ಕೆ ಪಾಟೀಲ್!
ಗದಗ:- ಅಮಾಯಕರ ಬಲಿ ಪಡೆದಿದ್ದ ಉಗ್ರರ ನೆಲೆ ಧ್ವಂಸ ಮಾಡಿದ್ದು ಸಮಾಧಾನ ತಂದಿದೆ ಎಂದು ಹೆಚ್ ಕೆ ಪಾಟೀಲ್ ಹೇಳಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ಇವತ್ತು ಭಾರತೀಯರಿಗೆ ಸಮಾಧಾನದ ದಿನವಾಗಿದೆ. ಉಗ್ರರು ಕುತಂತ್ರದಿಂದ ದೇಶದ ಪ್ರಜೆಗಳ ಹತ್ಯೆಗೈದಿದ್ದರು. ಅವರಿಗೆ ತಕ್ಕ ಶಾಸ್ತಿ ಮಾಡಲು ಸೇನೆಯು ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದು ಸಮಾಧಾನ ತಂದಿದೆ.
ಭಾರತೀಯ ಸೈನ್ಯ 9 ಸ್ಥಳಗಳಲ್ಲಿ ಆಪರೇಷನ್ ಸಿಂಧೂರ ಹೆಸರಲ್ಲಿ ಕಾರ್ಯಚರಣೆ ಮಾಡಿದೆ. ದೇಶದ ಜನ ನಿರ್ಣಯಿಸಿ, ಒಗ್ಗಟ್ಟಿನ ಬಲವನ್ನು ಸೈನ್ಯಕ್ಕೆ ನೀಡಿದ್ದೇವೆ. ಭಾರತವನ್ನು ಕೆಣಕಿದರೇ ತಕ್ಕ ಶಾಸ್ತಿ ಆಗುತ್ತದೆ. ದಾಳಿ ಮೂಲಕ ಮೊದಲ ಹೆಜ್ಜೆಯನ್ನು ಇಂದು ಇಟ್ಟಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ಭಾರತ ಕೇವಲ ಶಾಂತಿ ಪ್ರಿಯರು ಎಂದು ಪಾಕಿಸ್ತಾನದವರು ತಿಳಿದುಕೊಂಡಿದ್ದರು. ಅವರಿಗೆ ಸರಿಯಾದ ಉತ್ತರ ನೀಡುವ ಮೂಲಕ ಜ್ಞಾನೋದಯ ಮಾಡಲಾಗಿದೆ. ಭಾರತವನ್ನು ಕೆಣಕಿದರೆ ಬಿಡುವ ಮಾತೇ ಇಲ್ಲ ಎನ್ನುವಂತಹ ಕಾರ್ಯಚರಣೆ ಮಾಡಲಾಗಿದೆ. ಇದು ಯುದ್ಧ ಕಾಲವಾಗಿದ್ದು, ಎಲ್ಲರೂ ಸನ್ನದ್ಧರಾಗಿರಬೇಕು. ಎಲ್ಲರೂ ತಯಾರಿ ಮಾಡಿಕೊಳ್ಳಬೇಕಿದೆ ಎಂದರು.