ರೀ ಇಲ್ನೋಡ್ರೀ… ನೀರಿನಿಂದ ಚಲಿಸುವ ಕಾರು…!

Date:

ಮೊಹಮ್ಮದ್ ರಯೀಸ್ ಮರ್ಕನಿ. ಪೆಟ್ರೋಲ್, ಡೀಸೆಲ್ ಇಲ್ಲದೆಯೂ ಆರಾಮಾಗಿ ನೀರಿನಿಂದ ಚಲಿಸಬಲ್ಲ ಕಾರನ್ನು ತಯಾರಿಸಿ ಎಲ್ಲೆಡೆ ಹೆಸರಾಗಿದ್ದಾರೆ. ಮಧ್ಯಪ್ರದೇಶ ಮೂಲದ 45ರ ಹರೆಯದ ಮೊಹಮದ್ ರಯೀಸ್ ಎಂಜಿನಿಯರ್ ಪದವೀಧರರಿಬಹುದು ಅಂದ್ಕೋಬೇಡಿ. ಅವರು ಓದಿದ್ದು ಕೇವಲ 12ನೇ ತರಗತಿ ಮಾತ್ರ, ಆದ್ರೆ ಅವರ ಸಾಧನೆ ಎಲ್ಲರೂ ಮೆಚ್ಚುವಂಥದ್ದು. ಈ ಕಾರನ್ನು ಸಿದ್ಧಪಡಿಸಲು ಅವರು ಬರೋಬ್ಬರಿ 5 ವರ್ಷಗಳ ಕಾಲ ಶ್ರಮಿಸಿದ್ದಾರೆ.
ರಯೀಸ್ ಮರ್ಕನಿ, ಇದೀಗ ನೀರಿನಿಂದಲೇ ಓಡುವ ತಮ್ಮ ಕಾರಿಗೆ ರಯೀಸ್ ಪೇಟೆಂಟ್ ಕೂಡ ಪಡೆದಿದ್ದಾರೆ. ಕಳೆದ 5 ವರ್ಷಗಳಿಂದ ರಯೀಸ್ ತಮ್ಮ ಕಾರಿಗೆ 800 ಸಿಸಿ ಎಂಜಿನ್ ಅನ್ನು ಅಭಿವೃದ್ಧಿಪಡಿಸ್ತಾ ಇದ್ರು. ಈಗ ಅದರಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ನೀರು ಮತ್ತು ಕಾರ್ಬೈಡ್ನಿಂದ ಚಲಿಸುವ ಪರಿಸರ ಸ್ನೇಹಿ ಕಾರು ಎಲ್ಲರನ್ನೂ ನಿಬ್ಬೆರಗಾಗಿಸುತ್ತಿದೆ. ಕಳೆದ 15 ವರ್ಷಗಳಿಂದ ರಯೀಸ್ ಮೆಕ್ಯಾನಿಕ್ ಆಗಿ ಕೆಲಸ ಮಾಡ್ತಿದ್ದಾರೆ. ಕಾರು ವೆಲ್ಡಿಂಗ್ ಮಾಡುತ್ತಿದ್ದಾಗ್ಲೇ ಅವರಿಗೆ ಈ ಅದ್ಭುತ ಪರಿಕಲ್ಪನೆ ಹೊಳೆದಿತ್ತು. ವೆಲ್ಡಿಂಗ್, ಪೋರ್ಟೆಬಲ್ ಲೈಟನಿಂಗ್ ಸೇರಿದಂತೆ ಹಲವು ಕೈಗಾರಿಕಾ ಉದ್ದೇಶಗಳಿಗಾಗಿ ಈ ಅನಿಲವನ್ನು ಬಳಸಲಾಗುತ್ತದೆ. ನಾನು ಕಾರ್ ಎಂಜಿನ್ ಅನ್ನು ಮುಂದೂಡಲು ಅಸಿಟಿಲೀನ್ ಅನಿಲವನ್ನು ಬಳಸಿಕೊಂಡಿದ್ದೇನೆ. ಕಾರಿನ ಸಂಪೂರ್ಣ ಪ್ರದರ್ಶನಕ್ಕೆ ಅನುಕೂಲವಾಗುವಂತಹ ಇನ್ನೂ ಕೆಲವು ಬದಲಾವಣೆಗಳನ್ನು ಕೂಡ ಮಾಡಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಕಾರು ನೀರಲ್ಲಿ ಚಲಿಸುತ್ತೆ ಅನ್ನೋದೇ ವಿಶೇಷ, ನೀರೇ ಇಲ್ಲಿ ಮುಖ್ಯವಾದದ್ದು” ಎನ್ನುವುದು ಮೊಹಮದ್ ರಯೀಸ್ ವಾದ.

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ನಂತಹ ಇಂಧನ ಬಳಕೆಯಿಂದ ವಾಯುಮಾಲಿನ್ಯ ಹೆಚ್ಚಾಗ್ತಾ ಇದೆ. ವಾತಾವರಣದಲ್ಲಿ ಉಷ್ಣಾಂಶ ಮಿತಿಮೀರಿದೆ. ಹಾಗಾಗಿ ಪರಿಸರ ಸ್ನೇಹಿ ಕಾರುಗಳ ಅಗತ್ಯ ಮತ್ತು ಬೇಡಿಕೆ ಎರಡೂ ಅಧಿಕವಾಗಿದೆ. ಭಾರತದಲ್ಲಿ ರಯೀಸ್ ಅವರ ಪರಿಸರ ಸ್ನೇಹಿ ಕಾರಿಗೆ ಬೇಡಿಕೆ ಬರುತ್ತೋ ಇಲ್ವೊ ಗೊತ್ತಿಲ್ಲ. ಆದ್ರೆ ನೆರೆರಾಷ್ಟ್ರ ಚೀನಾ ಈ ಅದ್ಭುತ ಐಡಿಯಾವನ್ನು ಬಳಸಿಕೊಳ್ಳಲು ನಿರ್ಧರಿಸಿದೆಯಂತೆ. ಇದಕ್ಕಾಗಿಯೇ ರಯೀಸ್ ಅವರನ್ನು ತಮ್ಮ ರಾಷ್ಟ್ರಕ್ಕೆ ಚೀನಾ ಆಹ್ವಾನಿಸಿದೆ. ಆದರೆ, ರಯೀಸ್ ಮಾತ್ರ ಇನ್ನು ದೃಢ ನಿರ್ಧಾರ ಕೈಗೊಂಡಿಲ್ಲ.
ರಯೀಸ್ ಅವರು ಯಾರಿಸಿದ ಕಾರು ನೀರಿನಿಂದ್ಲೇ ಚಲಿಸಬಲ್ಲದು, ಮತ್ತೆ ಹೆಚ್ಚೇನೂ ಖರ್ಚಾಗುವುದಿಲ್ಲ, ಇದು ಪರಿಸರ ಸ್ನೇಹಿ ವಾಹನವೂ ಹೌದು. ಕಾರಿಗೆ ಬೇಕಾದ ಇಂಧನ ಅಂದ್ರೆ ನೀರು ಮತ್ತು ಅಸಿಟಿಲೀನ್ ಅನಿಲ್ ತಯಾರಿಕೆ ಅತ್ಯಂತ ಸುಲಭ. ಒಂದು ಲೀಟರ್ಗೆ ಕೇವಲ 2 ಪೈಸೆ ಖರ್ಚಾಗುತ್ತದೆ. ಹಾಗಾಗಿ ಇದೊಂದು ಅಸಾಮಾನ್ಯ ಯೋಜನೆ ಅನ್ನೋದ್ರಲ್ಲಿ ಅನುಮಾನವಿಲ್ಲ. ಚೀನಾ ರಯೀಸ್ ಅವರ ಪರಿಸರ ಸ್ನೇಹಿ ಕಾರನ್ನು ಬಳಸಿಕೊಳ್ಳುವ ಹವಣಿಕೆಯಲ್ಲಿರುವುದು ಇದೇ ಕಾರಣಕ್ಕೆ. ಒಟ್ಟಾರೆ, ಆದಷ್ಟು ಬೇಗ ಭಾರತದ ಆಟೋಮೊಬೈಲ್ ಕಂಪನಿಗಳು ಕೂಡ ಮೊಹಮದ್ ರಮೀಸ್ ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ರೆ ವಾಯುಮಾಲಿನ್ಯಕ್ಕೆ ಬ್ರೇಕ್ ಹಾಕಬಹುದು. ದುಬಾರಿ ಇಂಧನವಿಲ್ಲದೆ ಚಲಿಸುವ ಅಗ್ಗದ ಕಾರು ಎಲ್ಲರ ಮನೆ ಸೇರಬಹುದು ಅಲ್ಲವೇ?

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...