ವಿಶ್ವಕಪ್ ಕಬಡ್ಡಿ: ಪಾಕ್‍ಗೆ ಇಲ್ಲ ಅವಕಾಶ..!

Date:

ಪ್ರೋ ಕಬಡ್ಡಿ ಲೀಗ್‍ನ ಬಹಳ ಯಶಸ್ವೀ ಪ್ರದರ್ಶನದಿಂದಾಗಿ ವಿಶ್ವದಾದ್ಯಂತ ಕಬಡ್ಡಿ ಅಭಿಮಾನಿಗಳ ಮನಸೊರೆಗೊಳಿಸಿದೆ. ಈ ಕಾರಣದಿಂದಾಗಿಯೇ ಈ ಬಾರಿಯ ವಿಶ್ವಕಪ್ ಕಬಡ್ಡಿ ಪಂದ್ಯಾವಳಿಯನ್ನು ಭಾರತ ಆಥಿತ್ಯ ವಹಿಸಿಕೊಂಡಿದೆ. ಅಲ್ಲದೇ ವಿಶ್ವಕಪ್ ಕಬಡ್ಡಿ ಆರಂಭವಾಗಲು ಇನ್ನೇನು ಎರಡೇ ದಿನ ಬಾಕಿ ಉಳಿದಿವೆ. 12 ರಾಷ್ಟ್ರಗಳು ಈ ವಿಶ್ವಕಪ್ ಕಬಡ್ಡಿಯಲ್ಲಿ ಕಾದಾಟಕ್ಕಿಳಿಯಲಿದ್ದು ಅದರಲ್ಲಿ ಪಾಕಿಸ್ತಾನಕ್ಕೆ ಮಾತ್ರ ಈ ಬಾರಿ ಅವಕಾಶ ನೀಡಲಿಲ್ಲ..! ಅಷ್ಟೇ ಅಲ್ಲ ಈ ನಿರ್ಧಾರದಿಂದ ಪಾಕಿಸ್ತಾನದಲ್ಲಿ ಭಾರೀ ಟೀಕೆ, ವಿವಾದ ಉಂಟುಮಾಡಿದೆ. ಉರಿ ದಾಳಿಯಿಂದಾಗಿ ಭಾರತ-ಪಾಕಿಸ್ತಾನಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಪಾಕ್‍ಗೆ ಈ ಬಾರಿಯ ವಿಶ್ವಕಪ್ ಕಬಡ್ಡಿ ಕೂಟದಲ್ಲಿ ಭಾಗವಹಿಸದಿರಲು ತಿಳಿಸಿದ್ದಾರೆ. ಪಾಕ್ ಜೊತೆ ಇಂತಹ ಪರಿಸ್ಥಿತಿಯಲ್ಲಿ ಆಡುವುದು ಸೂಕ್ತ ಸಮಯವಲ್ಲ ಎಂದು ಅಂತರಾಷ್ಟ್ರೀಯ ಕಬಡ್ಡಿ ಒಕ್ಕೂಟ (ಐಕೆಎಫ್) ಮುಖ್ಯಸ್ಥ ಧೀರಜ್ ಚತುರ್ವೇದಿ ಹೇಳಿದ್ದಾರೆ. ಇನ್ನು ಪಾಕ್ ಕೂಡ ಐಕೆಎಫ್‍ನ ಸದಸ್ಯತ್ವ ಪಡೆದ ರಾಷ್ಟ್ರವಾಗಿದ್ದು ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಉಭಯ ದೇಶಗಳ ಹಿತದೃಷ್ಠಿಯಿಂದ ಪಾಕ್‍ನ್ನು ಕೂಟದಿಂದ ಹೊರಗಿಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಐಕೆಎಫ್‍ನ ಈ ನೀತಿಯನ್ನು ಪಾಕ್ ಕಟುವಾಗಿ ಟೀಕಿಸಿದ್ದು ಒಂದು ದೇಶದ ಮೇಲೆ ಗುರಿ ಇಡುವುದು ಒಳ್ಳೆಯ ಭಾವನೆ ಇಲ್ಲ ಎಂದು ಹೇಳಿದ್ದಾರೆ. ಭದ್ರತಾ ಕಾರಣಗಳಿಕೆ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದೇ ಆದಲ್ಲಿ ಎರಡೂ ರಾಷ್ಟ್ರವನ್ನೂ ಕೂಟದಿಂದ ಹೊರಗಿಡಬಹುದಿತ್ತಲ್ಲವೇ ಎಂದು ಹೇಳಿರುವ ಪಾಕ್ ಈ ವಿಷಯದ ಕುರಿತಾಗಿ ನಾವು ಸಭೆ ನಡೆಸಲಿದ್ದೇವೆ ಎಂದು ಪಕಿಸ್ತಾನ ಕಬಡ್ಡಿ ಒಕ್ಕೂಟ ಕಾರ್ಯದರ್ಶಿ ಹೇಳಿದ್ದಾರೆ.

Like us on Facebook  The New India Times

POPULAR  STORIES :

ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..!

ಧೋನಿ ಚಿತ್ರದಲ್ಲಿ ಸ್ವಂತ ಅಣ್ಣನ ಪಾತ್ರವೇ ಇಲ್ಲ ಯಾಕೆ ಗೊತ್ತಾ..?

ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.

24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!

ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?

ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!

ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...