ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಆರಂಭವಾದ 21ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕನ್ನಡಿಗ ಪಿ. ಗುರುರಾಜ್ 56ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿಪದಕ ಜಯಿಸುವುದರ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ.

ಪುರುಷರ 56ಕೆಜಿ ವಿಭಾಗದಲ್ಲಿ ಒಟ್ಟು 246 ಕೆಜಿ ಭಾರ ಎತ್ತಿದ ಗುರುರಾಜ್ , ಸ್ಕ್ಯಾಚ್ ವಿಭಾಗದಲ್ಲಿ 111ಕೆಜಿ, ಕ್ಲೀನ್ ಎಂಡ್ ಜರ್ಕ್ ವಿಭಾಗದಲ್ಲಿ 138 ಕೆಜಿ ಎತ್ತುವುದರ ಮೂಲಕ ಪದಕ ಗೆದ್ದಿದ್ದಾರೆ.  ಉಡುಪಿಯವರಾದ ಇವರು ಭಾರತೀಯ ವಾಯುಪಡೆ ಉದ್ಯೋಗಿ.



ಪಿವಿ ಸಿಂಧು ತ್ರಿವರ್ಣಧ್ವಜ ಹಿಡಿದು ಮುನ್ನಡೆಸುವ ಮೂಲಕ ಕ್ರೀಡಾಕೂಟಕ್ಕೆ ಚಾಲಾನೆ ನೀಡಿದ್ದರು.




