ಏನಪ್ಪಾ ಇದು ತಿಮಿಂಗಿಲ ವಾಂತಿಯಿಂದ ಮೀನುಗಾರರು ಕೋಟ್ಯಾಧಿಪತಿಗಳಾದ್ರು ಅಂತಿದ್ದೀರಲ್ಲ…? ಸುಮ್ನೆ ಏನೇನೋ ಅರ್ಥವಿಲ್ಲದ್ದನ್ನು ಹೇಳ್ಬೀಡಿ, ಬರಿಬೇಡಿ ಅಂತ ಬೈಯ್ತಾ ಇದ್ದೀರ? ಒಂದ್ ನಿಮಿಷ…ಈ ಸ್ಟೋರಿ ಓದಿ..ನಾವು ಸುಳ್ ಹೇಳ್ತಿಲ್ಲ.
ಮಧ್ಯ ಪ್ರಾಚ್ಯದ ಒಮನ್ ದೇಶದ ಮೂರು ಮೀನುಗಾರರಿಗೆ 176 ಪೌಂಡ್ (80ಕೆಜಿ) ಯಷ್ಟು ತಿಮಿಂಗಲ ವಾಂತಿ ದೊರೆತಿದ್ದು ಅದರ ಮೌಲ್ಯ ಬರೊಬ್ಬರಿ 17 ಕೋಟಿ ರೂ..!
ಒಮನ್ ನ ಕಡಲ ತೀರವು ‘ಸ್ಪರ್ಮ್ ‘ ತಿಮಿಂಗಲಗಳಿಗೆ ಹೆಸರುವಾಸಿ. ಈ ದೇಶದ ಖುರಾಯತ್ ಪ್ರಾಂತ್ಯದ ಸಮುದ್ರ ತೀರದಲ್ಲಿ ಮೀನುಗಾರರು ಮೀನುಗಳನ್ನು ಹಿಡಿದು ದೋಣಿಯಲ್ಲಿ ಹಾಕಿಕೊಂಡು ತೀರಕ್ಕೆ ಮರಳುತ್ತಿರುವಾಗ ಬಿಳಿರೂಪದ ವಸ್ತು ತೇಲುತ್ತಿರೋದು ಕಣ್ಣಿಗೆ ಬಿದ್ದಿದೆ. ಇದು ಕೋಟಿಗಟ್ಟಲೆ ದುಡ್ಡು ನೀಡುವ ತಿಮಿಂಗಲ ವಾಂತಿ…! ಬರೊಬ್ಬರಿ 17 ಕೋಟಿರೂ ಇದರಿಂದ ಲಭಿಸಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಹೌದು ತಿಮಿಂಗಿಲಗಳು ತಮ್ಮ ವೀರ್ಯವನ್ನು ವಿಶಿಷ್ಟವಾಗಿ ವಾಂತಿ ಮಾಡುತ್ತವೆ. ಇವು ಮೇಣದಂತೆ ತೇಲುತ್ತಿರುವಾಗ ಕೆಟ್ಟ ವಾಸನೆ ಇರುತ್ತದೆ. ಗಟ್ಟಿಯಾದ ಮೇಲೆ ಸುವಾಸನೆ ಬೀರುತ್ತವೆ. ಸೆಂಟ್ ಉದ್ಯಮದಲ್ಲಿ ಇವಕ್ಕೆ ಭಾರಿ ಬೇಡಿಕೆ ಇದೆ.