ವಾಟ್ಸಪ್ ವಾಟ್ಸಪ್… ಇದನ್ನು ಬಳಸದೇ ಇರೋರೇ ಇಲ್ಲ. ಹಳ್ಳಿಯಿಂದ ಹಿಡಿದು ದಿಲ್ಲಿವರೆಗೆ ಬಹುತೇಕರು ವಾಟ್ಸಪ್ ಯೂಸ್ ಮಾಡ್ತಿದ್ದಾರೆ.
ವಾಟ್ಸಪ್ ಕೂಡ ಗ್ರಾಹಕ ಸ್ನೇಹಯಾಗಿ ಹೊಸ ಹೊಸ ಫೀಚರ್ ಪರಿಚಯಿಸ್ತಿದೆ.
ಇತ್ತೀಚೆಗೆ ಇದು ಪ್ರೈವೇಟ್ ರಿಪ್ಲೈ ಎಂಬ ಫೀಚರನ್ನು ಪರಿಚಯಿಸಿದೆ. ಆದರೆ, ಇದು ಬೀಟಾ ಆವೃತ್ತಿ 2.18.355ಗೆ ಮಾತ್ರ ಸೀಮಿತ..? ಗ್ರೂಪ್ ನಲ್ಲಿ ಪ್ರೈವೇಟ್ ರಿಪ್ಲೇಗೆ ಅವಕಾಶ ಮಾಡಿಕೊಟ್ಟಿದೆ.
ಪ್ರೈವೇಟ್ ರಿಪ್ಲೈ ಫೀಚರ್ ಬಳಸಿ, ಗ್ರೂಪ್ ನಲ್ಲಿ ಇತರ ಸದಸ್ಯರ ಗಮನಕ್ಕೆ ಬಾರದಂತೆ ಯಾರಾದರೂ ಒಬ್ಬರಿಗೆ ಮಾತ್ರ ಅವರ ಮೆಸೇಜ್ ಗೆ ಉತ್ತರಿಸಬಹುದು.
ಈ ಫೀಚರ್ ಬಳಸಿಕೊಳ್ಳಬೇಕಾದರೆ, ಯಾವ ಮೆಸೇಜ್ ಗೆ ರಿಪ್ಲೈ ಮಾಡಬೇಕೋ ಆ ಮೆಸೇಜನ್ನು ಒತ್ತಿ ಹಿಡಿದು, ಬಳಿಕ ಟಾಪ್ ಬಲಗಡೆ ಕಾರ್ನರ್ ನಲ್ಲಿರುವ 3 ಚುಕ್ಕಿಗಳ ಮೆನುವನ್ನು ಓಪನ್ ಮಾಡಿ. ಅಲ್ಲಿ ನಿಮಗೆ ಪ್ರೈವೇಟ್ ರಿಪ್ಲೈ ಆಯ್ಕೆ ಸಿಗುತ್ತದೆ.
ನೀವು ಅದನ್ನು ಆಯ್ಕೆ ಮಾಡಿಕೊಂಡಾಗ, ನೀವು ಸೆಲೆಕ್ಟ್ ಮಾಡಿರುವ ಸದಸ್ಯನಿಗೆ ಪ್ರತ್ಯೇಕವಾಗಿ ರಿಪ್ಲೇ ಮಾಡ್ಬಹುದು.