ಸೋಶಿಯಲ್ ಮೀಡಿಯಾದಿಂದ ಎಷ್ಟು ಉಪಯೋಗವಿದೆಯೋ? ಅಷ್ಟೇ ಅವಾಂತರಗಳು, ತೊಂದರೆಗಳೂ ಸಹ ಇವೆ.
ಸೋಶಿಯಲ್ ಮೀಡಿಯಾಗಳಿಂದ ಸ್ನೇಹ ಸಂಬಂಧ, ಪ್ರೀತಿ ಹುಟ್ಟುವುದು ಮಾತ್ರವಲ್ಲ. ಎಷ್ಟೋ ಸಂಬಂಧಗಳು ಮುರಿದು ಬಿದ್ದಿವೆ, ಬೀಳುತ್ತಿವೆ. ಹೀಗೆ ಅತಿಯಾದ ವಾಟ್ಸಪ್ ಬಳಕೆಯಿಂದ ವಿವಾಹವೊಂದು ಮುರಿದಿದೆ.
ವಧು ಅಥವಾ ವರನ ಹಳೆಯ ಪ್ರೇಮ ಪುರಾಣ ಅಥವಾ ಗುಣ’ ನಡತೆ ಇಷ್ಟವಾಗದ ಕಾರಣ , ಅಷ್ಟೇ ಏಕೆ ಅಡುಗೆ ಸರಿಯಿಲ್ಲ ಎಂಬ ಕಾರಣಕ್ಕೂ ನಿಶ್ಚಯವಾದ ಮದುವೆ ಮುರಿದು ಬಿದ್ದಿರುವ ಪ್ರಸಂಗಗಳಿವೆ. ಆದರೆ, ಇದೇನು ವಾಟ್ಸಪ್ ನಿಂದ ಮದುವೆ ನಿಂತು ಹೋಯಿತಾ?
ಹೌದು ವಧು ಹೆಚ್ಚಿನ ಸಮಯವನ್ನು ವಾಟ್ಸಪ್ ನಲ್ಲಿ ಕಳೆಯುತ್ತಾಳೆ ಎಂದು ಆರೋಪಿಸಿ ವರನ ಕಡೆಯವರು ಮದುವೆಯನ್ನು ನಿಲ್ಲಿಸಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ನವ್ಗಾನ್ ಸದತ್ ಎಂಬ ಹಳ್ಳಿಯಲ್ಲಿ ನಡೆದಿದೆ.
ಮದುವೆ ನಿಶ್ಚಯವಾಗಿತ್ತು.ವಧುವಿನ ಕಡೆಯವರು ಆರತಕ್ಷತೆಗೆ ರೆಡಿ ಮಾಡಿದ್ದರು. ಆದರೆ, ವರ ಮತ್ತು ಅವನ ಸಂಬಂಧಿಕರು ಮಂಟಪಕ್ಕೆ ಬರಲೇ ಇಲ್ಲ.
ಆಗ ವಧುವಿನ ಕಡೆಯವರು ಫೋನ್ ಮಾಡಿ ವಿಚಾರಿಸಿದಾಗ ನಿಮ್ಮ ಹುಡುಗಿ ಹೆಚ್ಚಾಗಿ ವಾಟ್ಸಪ್ ಬಳಸುತ್ತಿದ್ದಾಳೆ. ಹೀಗಾಗಿ ಮದುವೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣ ನೀಡಿದ್ದಾರೆ. ಆದರೆ ವಧುವಿನ ಕಡೆಯವರು 65ಲಕ್ಷ ವರದಕ್ಷಿಣೆ ಕೊಡದೇ ಇದ್ದುದಕ್ಕೆ ಮದುವೆ ನಿಲ್ಲಿಸಿದ್ದಾರೆ ಅಂತ ವರನ ಕಡೆಯವರ ವಿರುದ್ಧ ಆರೋಪ ಮಾಡಿದ್ದಾರೆ