ವಾಟ್ಸಾಪ್‍ನಿಂದ 10 ವರ್ಷದ ಲವ್ ಬ್ರೇಕಪ್..!

Date:

ಸುಮಾರು 10 ವರ್ಷಗಳಿಂದ ಪ್ರೀತಿ ಮಾಡ್ತಾ ಬರ್ತಿದ್ದ ಇಬ್ಬರು ಜೋಡಿಗಳು ಇನ್ನೇನು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಇಬ್ಬರ ಪ್ರೀತೀಲಿ ದೊಡ್ಡ ಕೊಡಲಿ ಪೆಟ್ಟು ಬಿದ್ದಿದೆ. ಒಬ್ಬರೊನ್ನೊಬ್ಬರು ಪ್ರೀತಿಸಿ ಮನೆಯವರನ್ನೂ ಹೇಗೋ ಒಪ್ಪಿಸಿ ಕೊನೆಗೂ ಮದುವೆಯಾಗುವ ನಿರ್ಧಾರಕ್ಕೆ ಬಂದ ಜೋಡಿ ಇನ್ನೇನು ಮದುವೆಗೆ ನಾಲ್ಕು ದಿನ ಇರುವಾಗಲೇ ಇಬ್ಬರ ಸಂಬಂಧ ಕಡಿತಗೊಂಡಿದೆ. ಅಚ್ಚರಿಯ ಸಂಗತಿ ಅಂದ್ರೆ ಇಬ್ಬರ ಪ್ರೀತಿ ಬ್ರೇಕಪ್ ಆಗೋಕೆ ಮೂಲ ಕಾರಣ ವಾಟ್ಸಾಪ್ ಅಂತೆ..!
ಇಂತಹ ವಿಚಿತ್ರ ಘಟನೆ ವರದಿಯಾಗಿದ್ದು ಬೇರೆಲ್ಲೂ ಅಲ್ಲ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ. ಇಬ್ಬರ ಮನೆಯ ಸಂಬಂಧಿಕರು ಈ ಜೋಡಿಯ ಪ್ರೀತಿಯನ್ನು ಒಪ್ಪಿಕೊಂಡು ಮದುವೆಯ ತಯಾರಿಯೂ ಕೂಡ ಮಾಡಿದ್ದರು. ಮದುವೆ ಆಹ್ವಾನ ಪತ್ರಿಕೆಯಿಂದ ಹಿಡಿದು ಮದುವೆ ಮಂಟಪ, ಚಪ್ಪರದವರೆಗೂ ಸಿದ್ದತೆಗಳು ಭರದಿಂದ ಸಾಗ್ತಾ ಇದ್ವು.. ಆದ್ರೆ ಇದ್ದಕ್ಕಿದ್ದ ಹಾಗೆ ಮದುವೆ ನಿಂತೇ ಹೋಗಿದೆ ನೋಡಿ..! ಇನ್ನೇನು ನಾಲ್ಕು ದಿನಗಳಲ್ಲಿ ಹಸೆ ಮಣೆಗೆ ಏರಬೇಕಿದ್ದ ಇವರು ತಮ್ಮ ಸ್ನೇಹಿತ ಬಳಗದವರಿಗೆ ಆಹ್ವಾನ ಪತ್ರಿಕೆ ನೀಡಲು ಮಂಡ್ಯಕ್ಕೆ ಹೊರಟಿದ್ದರಂತೆ. ಇದೇ ವೇಳೆ ಹುಡುಗಿ ವಾಟ್ಸಾಪ್‍ನಲ್ಲಿ ಇನ್ನೋರ್ವ ಯುವಕನೊಂದಿಗೆ ಚಾಟ್ ಮಾಡ್ತಾ ಇದ್ದದನ್ನು ಕಂಡ ಯುವಕ ಪ್ರಶ್ನೆ ಮಾಡಿದ್ದಾನೆ. ಈ ಒಂದು ಸಣ್ಣ ವಿಚಾರಕ್ಕೆ ಈತ ನನ್ನನ್ನು ಅನುಮಾನ ಪಡುತ್ತಿದ್ದಾನೆ ಎಂದು ಹೇಳಿ ಅವನ ಜೊತೆ ಮದುವೆಯಾಗಲಾರೆ ಎಂದು ಹೇಳಿದ್ದಾಳೆ ಹುಡುಗಿ..! ಮದುವೆಗೆ ಇನ್ನೇನು ನಾಲ್ಕೇ ದಿನ ಬಾಕಿ ಉಳಿದಿರೋದು ಈಗ ಈ ನಿರ್ಧಾರಕ್ಕೆ ಬಂದಿರೋದು ಸರಿಯಲ್ಲ ಎಂದು ಎರಡೂ ಮನೆಯವರೂ ಹುಡುಗಿಗೆ ಬುದ್ದಿವಾದ ಹೇಳಿದರೂ ಕೂಡ ತನ್ನ ಹಟ ಬಿಟ್ಟೆ ಇಲ್ಲ. ಇದೀಗ ಇವರಿಬ್ಬರ ಹತ್ತು ವರ್ಷದ ಪ್ರೀತಿ ವಾಟ್ಸಾಪ್ ಮೆಸೇಜ್ ಕಾರಣದಿಂದ ಮುರಿದು ಬಿದ್ದಿದ್ದು. ಕೊನೆಗೂ ಮದುವೆ ನಿಲ್ಲಿಸಲು ನಿರ್ಧರಿಸಿದ್ದಾರೆ..!

Like us on Facebook  The New India Times

POPULAR  STORIES :

ಕಿಚ್ಚ ಸುದೀಪ್‍ಗೆ ಕ್ಷಮೆಯಾಚಿಸಿದ ಹುಚ್ಚಾ ವೆಂಕಟ್..!

ಇನ್ಮೇಲೆ ಪೆಟ್ರೋಲ್ ಬಂಕ್‍ನಲ್ಲೂ ಹಣ ವಿತ್ ಡ್ರಾ ಮಾಡ್ಬೋದು.

ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!

30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?

ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರಾಕಿದ ಕಿರಿಕ್ ಕೀರ್ತಿ..! ಕೀರ್ತಿ ಅಳುವಿಗೆ ಪ್ರಥಮ್ ಕಾರಣ…!

ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ

2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಬೆಂಗಳೂರು :...

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ!

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ! ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯೆಂದು...

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...