ಉರಿಯ ಭಾರತೀಯ ಸೇನಾ ವಲಯದ ಮೇಲೆ ಪಾಕ್ ಉಗ್ರರು ನಡೆಸಿದ ದಾಳಿಯಿಂದಾಗಿ ವಿಶ್ವದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತಿದ್ದ ಬೆನ್ನಲ್ಲಿಯೇ ಇಡೀ ವಿಶ್ವವೇ ಪಾಕ್‍ಗೆ ಒಂದು ಗತಿ ಕಾಣಿಸಲು ಹೊರಟಿತ್ತು. ವಿಶ್ವದಾದ್ಯಂತ ಪಾಕ್ ಒಂದು ಉಗ್ರ ರಾಷ್ಟ್ರ ಎಂದು ಘೋಷಿಸಬೇಕೆಂದು ಆಗ್ರಹ ಹೆಚ್ಚಾಗುತ್ತಿದ್ದು ಮಿಲಿಯನ್‍ಗಟ್ಟಲೇ ಆನ್ಲೈನ್ ಅರ್ಜಿಗಳು ಬಂದಿದೆ. ಆದರೆ ಅಮೇರಿಕಾ ಮಾತ್ರ ಇದನ್ನು ಅಲ್ಲಗೆಳೆಯುವ ಮೂಲಕ ತನ್ನ ದ್ವಂದ್ವ ನಿಲುವನ್ನು ತೋರಿಸಿದೆ.
ಪಾಕಿಸ್ತಾನವನ್ನು ಉಗ್ರರಾಷ್ಟ್ರ ಎಂದು ಘೋಷಿಸಬೇಕೆಂಬ ಕುರಿತಾಗಿ ಶ್ವೇತ ಭವನದ ವೆಬ್‍ಸೈಟ್‍ಗೆ ಲಕ್ಷಾಂತರ ಅರ್ಜಿಗಳು ಬಂದಿದ್ದವು. ಆದರೆ ಅಮೇರಿಕಾ ಈ ಆನ್ಲೈನ್ ಅರ್ಜಿಯನ್ನು ಏಕಾಏಕಿ ಆರ್ಕೈವ್ ಪಟ್ಟಿಗೆ ಸೇರಿಸುವ ಮೂಲಕ ಅಂದರೆ ಇನ್ನು ಮುಂದೆ ಆನ್ಲೈನ್ ಅರ್ಜಿಗೆ ಯಾರೂ ಕೂಡ ಸಹಿ ಹಾಕುವಂತಿಲ್ಲ ಎಂಬ ಆದೇಶ ಹೊರಡಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಈ ವರೆಗೂ ಆನ್ಲೈನ್‍ನಲ್ಲಿ ಅಗತ್ಯವಿದ್ದ ಕನಿಷ್ಠ ಅರ್ಜಿಗಿಂತ ಐದು ಪಟ್ಟು ಹೆಚ್ಚು ಸಹಿ ಸಂಗ್ರಹವಾಗಬೇಕು ಎಂದು ಹೇಳಿಕೆ ನೀಡಿದ್ದ ಅಮೇರಿಕಾ, ಇದೀಗ ತನ್ನ ಮಾತು ಬದಲಾಯಿಸಿದೆ. ಎರಡೂ ರಾಷ್ಟ್ರಗಳ ಮೇಲೆ ಹೆಚ್ಚಿನ ಒಲವನ್ನು ಹೊಂದಿರುವ ವಿಶ್ವ ದೊಡ್ಡಣ್ಣನಿಗೆ ಪಾಕ್ ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವ ಕುರಿತಾಗಿ ದ್ವಂದ್ವ ನಿಲುವು ವ್ಯಕ್ತ ಪಡಿಸಿದೆ. ಅಲ್ಲದೇ ಈವರೆಗೂ ಆನ್ಲೈನ್ ಅರ್ಜಿಯಲ್ಲಿ ಕನಿಷ್ಠ ಪ್ರಮಾಣದ ಸಹಿಯೂ ಕೂಡ ಬಂದಿಲ್ಲ ಎಂದು ಕಾರಣ ನೀಡಿ ಪಾಕ್‍ಗೆ ಮಣೆ ಹಾಕಿದೆ.
ಅ.3ರಂದು ಪ್ರಕಟವಾದ ವರಧಿಯ ಪ್ರಕಾರವಾಗಿ ಆನ್ಲೈನ್ ಅರ್ಜಿ ಪ್ರಾರಂಭವಾದ ಆರೇ ದಿನಗಳಲ್ಲಿ ಪಾಕ್ ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಲು ಕನಿಷ್ಠ ಸಹಿಯಾದರೂ ಬೇಕಿತ್ತು. ಆದರೆ ಅರ್ಜಿ ಅಮೇರಿಕಾದ ನಿರೀಕ್ಷೆಗೂ ಮೀರಿ ಬಂದಿತ್ತು. ಆನ್ಲೈನ್‍ಗೆ ಅರ್ಜಿ ಸಹಿ ಹಾಕಲು ನೀಡಲಾಗುವ ಗಡುವು ಮುಕ್ತಾಯಗೊಳ್ಳುವ ವೇಳೆಗೆ ಒಂದು ಮಿಲಿಯನ್‍ಗೂ ಹೆಚ್ಚು ಸಹಿ ಸಂಗ್ರಹವಾಗುತ್ತದೆ ಎಂಬ ನಿರೀಕ್ಷೆಯಿಟ್ಟಿದ್ದವು. ಆದರೆ ಅಮೇರಿಕಾ ಈ ವೇಳೆ ಉಲ್ಟಾ ಹೊಡೆದು ಪಾಕ್ ಭಯೋತ್ಪಾದಕ ರಾಷ್ಟ್ರ ಎಂದು ಘೋಷಣೆ ಮಾಡಲು ಕನಿಷ್ಠ ಸಹಿಯ ಅರ್ಜಿಯೂ ಬಂದಿಲ್ಲ ಎಂದು ಹೇಳಿಕೆ ನೀಡಿ ಪಾಕ್ ಪರವಾಗಿ ಬ್ಯಾಟಿಂಗ್ ಮಾಡಿದೆ ಅಲ್ಲದೇ ಹೆಚ್ಚು ಸಹಿ ಬಂದಿಲ್ಲ ಎಂದು ಹೇಳಿಕೆ ನೀಡಿ ಅರ್ಜಿ ಸಹಿಗಳನ್ನು ಆರ್ಕೈವ್ ಪಟ್ಟಿಗೆ ಸೇರಿಸಿ ಕೈ ತೊಳೆದುಕೊಂಡಿದೆ.
Like us on Facebook The New India Times
POPULAR STORIES :
ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?
ಸಲ್ಮಾನ್, ಶಾರುಖ್, ಅಮೀರ್ ಖಾನ್ ಪಾಕಿಸ್ತಾನಕ್ಕೆ ಹೋಗಲಿ : ಸಾದ್ವಿ ಪ್ರಾಚಿ
ಮಹಾಜನಗಳೇ.. ದಸರಾಗೆ ಹೋಗಿ ‘ಆಕಾಶ ಅಂಬಾರಿ’ಯಲ್ಲಿ..!
ವ್ಯಕ್ತಿಯೋರ್ವನ ನಸೀಬು ಬದಲಾಯಿಸಿದ ವಾಂತಿ..!
ಈ ಕ್ರೂರ ಮುಖದ ಶಿಕ್ಷಕನ ಶಿಕ್ಷೆ ನೋಡುದ್ರೆ ನೀವೇ ದಂಗಾಗಿ ಹೋಗ್ತೀರಾ..!