ಇತ್ತೀಚೆಗೆ ಡೈವೋರ್ಸ್ ಎಂಬ ಸುದ್ದಿ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಚಿಕ್ಕ ಚಿಕ್ಕ ಕಾರಣಕ್ಕೆ ಡೈವೋರ್ಸ್ ಆದ ನೂರಾರು ಜನ ನಮಗೆ ಕಾಣಸಿಗುತ್ತಾರೆ. ಇತ್ತೀಚೆಗೆ ಅಂಥದ್ದೇ ಒಂದು ಘಟನೆ ನಡೆಯಿತು. `ಭಾರತದ ಆ ದಂಪತಿ ಮದುವೆಯ ಬಳಿಕ ಬಾಲಿ ದೇಶಕ್ಕೆ ಹನಿಮೂನ್ ಗೆಂದು ಹೋದರು. ಅದಕ್ಕಾಗಿ ಕೂಡಾ 10 ದಿನಕ್ಕೆಂದು ಟಿಕೆಟ್ ಬುಕ್ ಆಗಿತ್ತು. ಆದರೆ ಕೇವಲ ಮೂರು ದಿನಗಳ ಬಳಿಕ ಆ ದಂಪತಿ ಮರಳಿ ಬಂದರು..! ಕೆಲವೇ ದಿನಗಳ ಅಂತರದಲ್ಲಿ ಡೈವೋರ್ಸ್ ಗೆ ಅರ್ಜಿ ಹಾಕಿ ಬೇರಾದರು..! ಇಷ್ಟಕ್ಕೂ ಭಾರತೀಯ ದಂಪತಿಗಳು ಡೈವೋರ್ಸ್ ಪಡೆಯಲು ಕಾರಣವೇನು..?
ಲವ್ ಮ್ಯಾರೇಜ್ ಗಳೂ ಕೂಡಾ ಮುರಿದುಬೀಳುತ್ತವೆ..!
ಲವ್ ಮಾಡಿ ಮದುವೆಯಾದರೆ ಸುಖ ಸಂಸಾರ ನಡೆಸಬಹುದು ಎಂದು ಕೆಲವರ ಅನಿಸಿಕೆ. ಆದರೆ ಮೃಣಾಲಿನಿ ದೇಶ್ ಮುಖ್ ಎಂಬ ವಕೀಲರು ಹೇಳುವ ಪ್ರಕಾರ ಇತ್ತೀಚೆಗೆ ಪ್ರೀತಿಸಿ ಮದುವೆಯಾದವರೇ ಹೆಚ್ಚು ಸಂಖ್ಯೆಯಲ್ಲಿ ವಿವಾವ ವಿಚ್ಛೇದನ ಪಡೆಯುತ್ತಿದ್ದಾರಂತೆ..! ಪ್ರೀತಿಸುವಾಗ ಇರುವ ಸಹನೆ, ಹೊಂದಿಕೊಂಡು ಹೋಗುವ ಗುಣಗಳು ಮದುವೆಯಾಗುತ್ತಿದ್ದಂತೆ ಕಡಿಮೆಯಾಗುತ್ತಿವೆ. ಇದೇ ವಿಚ್ಛೇದನ ಪಡೆಯಲು ಕಾರಣವಾಗುತ್ತಿವೆ ಎಂದು ಅವರು ಹೇಳುತ್ತಾರೆ.
ಕಾವ್ಯ(ಹೆಸರು ಬದಲಿಸಲಾಗಿದೆ) ಎಂಬುವವರು ಮದುವೆಗೆ ಮುನ್ನ ಅವರ ಪತಿಯ ಜೊತೆ ಸುಮಾರು 3 ವರ್ಷ ಪ್ರೀತಿ ಮಾಡಿದ್ದರು. ಆದರೆ ಹನಿಮೂನ್ ನ ನಂತರ ಪತಿಯ ಬಳಿ ಹತ್ತಾರು ಬದಲಾವಣೆ ಕಾಣಲಾಂಭಿಸಿದವಂತೆ..! ನಂತರ ಆಕೆಯನ್ನು ಕೆಲಸದವಳಂತಯೆ ನೋಡಲಾರಂಭಿಸಿದರಂತೆ..! ಇದನ್ನು ಅನುಭವಿಸಿ ಕಾವ್ಯರವರು ಕೆಲದಿನಗಳವರೆಗೆ ಕಣ್ಣೀರಲ್ಲಿ ಕೈತೊಳೆದಿದ್ದರು. ಆದರೆ ಕೆಲ ದಿನಗಳ ಬಳಿಕ ಆಕೆಯ ಪತಿ `ನಿನ್ನ ಜೊತೆ ನನಗೆ ಬದುಕಲಾಗುವುದಿಲ್ಲ ಎಂದು ವಿವಾಹ ವಿಚ್ಛೇದನ ಪಡೆದ.
ಸಹನೆಗೆ ಇಲ್ಲ ಬೆಲೆ..!
ಪ್ರತಿ ದಿನದ ಕೆಲಸದ ಮಧ್ಯೆ ನಮ್ಮ ಜನರಿಗೆ ಸಹನೆ ಎಂಬ ಪದವೇ ಮರೆತಂತಾಗಿದೆ. ಅದರಲ್ಲೂ `ಶ್ರೀಮಂತ ಕುಟುಂಬಗಳಲ್ಲಿ ಹೊಂದಾಣಿಕೆ ಎಂಬುದೇ ಇರುವುದಿಲ್ಲ. ಆದರೆ ಬಡ ಕುಟುಂಬಗಳಲ್ಲಿ ಮಾತ್ರ ಗಂಡ ಹೆಂಡತಿ ಜಗಳ ರಾತ್ರಿ ಉಂಡು ಮಲಗುವತನಕ ಎಂಬಂತೆ ಇರುತ್ತದೆ’ ಎನ್ನುತ್ತಾರೆ ನಂದಿತಾಶಮರ್ಾ. `ಅಲ್ಲದೇ ನಾನು ಮದುವೆಯಾಗಿ ಕೇವಲ ಎರಡ್ಮೂರು ತಿಂಗಳುಗಳ ಬಳಿಕ ಡೈವೋರ್ಸ್ ಪಡೆದ ಅದೆಷ್ಟೋ ದಂಪತಿಗಳನ್ನು ನೋಡಿದ್ದೇನೆ’ ಎಂದು ಮನಶ್ಯಾಸ್ತ್ರಜ್ಞರಾಗಿರುವ ನಂದಿತಾ ಶರ್ಮಾ ಹೇಳುತ್ತಾರೆ.
ದಂಪತಿಗಳಿಗೆ ಇಲ್ಲಿದೆ ಸಲಹೆ
ಸತಿ-ಪತಿಗಳಿಬ್ಬರು ಹೊಂದಾಣಿಕೆಯಿಂದ ಮುನ್ನಡೆಯುವುದು ಉತ್ತಮ. ಆದರೆ ಒಂದೆರೆಡು ದಿನಕ್ಕೆ ಹೊಂದಾಣಿಕೆ ಮೂಡುವುದಿಲ್ಲ. ಬದಲಿಗೆ ಸ್ವಲ್ಪ ಸಮಯವೂ ಬೇಕಾಗುತ್ತದೆ. ಮದುವೆ ಎಂಬುದು ಕೇವಲ ಒಂದೆರೆಡು ದಿನದ ಬಂಧವಾಗಿರದೇ ಇಡೀ ಜೀವನ ಪೂತರ್ಿ ನಿರಾತಂಕವಾಗಿ ನಡೆದುಕೊಂಡು ಹೋಗುವಂಥದ್ದು. ಆದ್ದರಿಂದ ಅದು ಯಾವುದೇ ವಿಧದ ಮದುವೆಯೇ ಆಗಿರಲಿ ಸತಿ ಪತಿಗಳಿಬ್ಬರು ಹೊಂದಿಕೊಂಡು ಹೋಗುವುದು ಉತ್ತಮ. ಇಲ್ಲದೇ ಹೋದಲ್ಲಿ ಮದುವೆ ಎಂಬ ಪವಿತ್ರ ಬಂಧಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ.
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್’ ಮೇಲೆ ಇಟ್ಕೊಳ್ಳಿ..!
ಅಂದು ಇಡೀ ವಿಶ್ವವೇ ಭಾರತಕ್ಕೆ ತಲೆಬಾಗಿತ್ತು..!
ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!