ಹಣಕ್ಕಾಗಿ ಜನ ಎಂಥಾ ಕೆಲಸವನ್ನೂ ಮಾಡಲು ರೆಡಿ ಇರ್ತಾರೆ. ಇಲ್ಲೊಬ್ಬ ಮಹಿಳೆ ಇನ್ಶುರೆನ್ಸ್ ಆಸೆಗೆ ಬಿದ್ದು ತಾಳಿ ಕಟ್ಟಿದ ಗಂಡನನ್ನೇ ಲಾರಿ ಕೆಳಗೆ ತಳ್ಳಿ ಕೊಂದುಬಿಟ್ಟಿದ್ದಾಳೆ.
ಹೌದು ಆಂಧ್ರಪ್ರದೇಶದ ಕುರ್ನೂಲಿನಲ್ಲಿ ಈ ಘಟನೆ ನಡೆದಿದೆ. ಶ್ರೀನಿವಾಸಲು ಮೃತ ದುರ್ದೈವಿ.
ಇವರ ಪತ್ನಿ ರಮಾದೇವಿ 2ಕೋಟಿ ರೂ ವಿಮೆ ಹಣದಾಸೆಗೆ ಗಂಡನನ್ನು ಕೊಂದ ಪಾಪಿ.
ಶ್ರೀನಿವಾಸಲು ಪ್ರಕಾಶಂ ಜಿಲ್ಲೆಯ ಚೋಳವೀಡು ಗ್ರಾಮದವರಾಗಿದ್ದು ಅದೇ ಗ್ರಾಮದ ರಮಾದೇವಿ ಎಂಬಾಕೆಯನ್ನು ಮದ್ವೆ ಆಗಿದ್ದರು. ಈಕೆ ಗ್ರಾಮದ ಮುಖ್ಯಸ್ಥ ಮಧುಸೂಧನ್ ರೆಡ್ಡಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ರಮಾದೇವಿ ತನ್ನ ಸಹೋದರ ರಮೇಶ್ ಮತ್ತು ಆತನ ಪತ್ನಿ ಶಿವಪ್ರಣಿತಾ ಮೂವರು ಮಧುಸೂದನ್ ಜೊತೆಗೂಡಿ ಶ್ರೀನಿವಾಸಲು ಅವರನ್ನು ಹೆದ್ದಾರಿಯಲ್ಲಿ ಲಾರಿ ಕೆಳಗಿ ತಳ್ಳಿ ಕೊಂದಿದ್ದಾರೆ. ನಂತರ ಹಿಟ್ ಅಂಡ್ ರನ್ ಎಂದು ಕಥೆಕಟ್ಟಿದ್ದಾರೆ.