ಮನುಷ್ಯನ ವಿಕೃತ ಮನಸ್ಥಿತಿ ಹೀಗೂ ಇರತ್ತೆ ಅನ್ನೋದಕ್ಕೆ ಈ ಸ್ಟೋರಿಯೇ ದಿ ಬೆಸ್ಟ್ ಎಕ್ಸಾಂಪಲ್..! ಗೆಳೆಯರೊಂದಿಗೆ ಸಹಕರಿಸದಿದ್ರೆ ನಿನ್ನ ಕೊಲ್ತೀನಿ ಅಂತ ನೆತ್ತಿನ ಮೇಲೆ ಗನ್ ಇಟ್ಟು ತನ್ನ ಗಂಡನೇ ಗೆಳೆಯರೊಂದಿಗೆ ಪತ್ನಿಯನ್ನು ಅತ್ಯಾಚಾರವೆಸಗಿದ್ದಾನೆ..! ಹೌದು.. ಇಂತಹದೊಂದು ಮನಕಲುಕುವ ಘಟನೆ ನಡೆದದ್ದು ಜಾರ್ಖಂಡ್ ಜಿಲ್ಲೆಯ ಪುಟ್ಟ ಗ್ರಾಮವೊಂದರಲ್ಲಿ..!
ಪಲಮೌ ಜಿಲ್ಲೆಯ ಪುಟ್ಟ ಗ್ರಾಮವಾದ ರಹೈಯಾದಲ್ಲಿ ಹೊಸದಾಗಿ ಮದುವೆಯಾಗಿದ್ದ ಅಘ್ಜಲ್ ಅನ್ಸಾರಿ ತನ್ನ ಇಬ್ಬರು ಗೆಳೆಯರೊಂದಿಗೆ ಸೇರಿ ಪತ್ನಿಗೆ ಜೀವ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಾನೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಹೀರಾಲಾಲ್ ರವಿ ತಿಳಿಸಿದ್ದಾರೆ. ಪತಿ ಅನ್ಸಾರಿ ಮತ್ತು ಆತನ ಇಬ್ಬರು ಗೆಳೆಯರಾದ ಬಬ್ಲು ಸಿಂಗ್ ಹಾಗೂ ಅಫ್ಜಲ್ ಮಿಯಾ ಕಳೆದ ಬುಧವಾರದಂದು ಮನೆಗೆ ಬಂದಿದ್ದರು. ಇದೇ ವೇಳೆ ನನ್ನ ನೆತ್ತಿಗೆ ಗನ್ ಇಟ್ಟ ಪತಿ ಅನ್ಸಾರಿ ನನ್ನ ಮೇಲೆ ಬಲತ್ಕಾರ ಮಾಡಲು ಮುಂದಾದ. ಅಷ್ಟೇ ಅಲ್ಲ ತನ್ನ ಇಬ್ಬರು ಗೆಳೆಯರಿಗೂ ಒಬ್ಬರ ಮೇಲೊಬ್ಬರಂತೆ ಅತ್ಯಾಚಾರ ಎಸಗಲು ಅವಕಾಶ ನೀಡಿದ ಎಂದು ನೀಚ ಪತಿಯ ನಿಜ ರೂಪವನ್ನು ಬಿಚ್ಚಿಟ್ಟಿದ್ದಾಳೆ. ಅಲ್ಲದೆ ಈ ಎಲ್ಲಾ ದೃಶ್ಯಾವಳಿಯನ್ನು ಮೊಬೈಲ್‍ನಲ್ಲಿ ದೃಶ್ಯೀಕರಸಿದ್ದಾರಂತೆ ನೋಡಿ ಈ ಪಾಪಿಗಳು..! ಮೂವರು ಅತ್ಯಾಚಾರ ನಡೆಸಿದ ಬಳಿಕ ಮತ್ತೆ ಗನ್ ತೊರಿಸಿ ವಿಷಯ ಬಾಯ್ಬಟ್ಟರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ನನ್ನನ್ನು ಮನೇಲಿ ಕೂಡಿ ಹಾಕಿದ್ರು ಅಂತ ಅಳಲು ತೋಡಿಕೊಂಡಿದ್ದಾಳೆ ಯುವತಿ..! ಮರುದಿನ ಹೇಗೋ ಮನೆಯಿಂದ ತಪ್ಪಿಸಿಕೊಂಡ ಮಹಿಳೆ ನಡೆದ ವಿಷಯವನ್ನೆಲ್ಲಾ ಪೋಷಕರಿಗೆ ತಿಳಿಸಿದ್ದಾಳೆ. ನಂತರ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರೂ ಕೂಡ ಪೊಲೀಸರು ಈ ಮೂವರು ಆರೋಪಿಗಳಿಗೆ ಎಚ್ಚರಿಕೆ ನೀಡಿದ್ರು ಬಿಟ್ರೆ ಅವರ ವಿರುದ್ದ ಎಫ್‍ಐಆರ್ ದಾಖಲಿಸಲಿಲ್ಲ..! ಈ ಬಗ್ಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಬಳಿಕವಷ್ಟೆ ಆರೋಪಿಗಳ ವಿರುದ್ದ ಮೊಕದ್ದಮೆ ದಾಖಲಿಸುವಂತೆ ಡಿಎಸ್ಪಿ ಸೂಚನೆ ನೀಡಿದ್ದಾರೆ..! ಸದ್ಯಕ್ಕೆ ಆರೋಪಿಗಳು ತಲೆ ಮರೆಸಿಕೊಂಡಿದ್ದು ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಆರ್‍ಟಿಇ ಪ್ರವೇಶ: ಜನವರಿ 15ರಿಂದ ಅರ್ಜಿ ಸ್ವೀಕೃತಿ, ಆಧಾರ್ ಕಡ್ಡಾಯ
ಬಿಗ್‍ಬಾಸ್ ಮನೆಯಲ್ಲಿ ಸಖತ್ ವಾಕ್ಸಮರ..!
ದರ್ಶನ್‍ರನ್ನು ಬಿಗ್‍ಬಾಸ್ ವೇದಿಕೆಗೆ ಕರ್ದಿದೀರಾ ಎಂಬ ಅಭಿಮಾನಿಯ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರವೇನು..?
ಗುಡ್ ನ್ಯೂಸ್: ಚಿನ್ನದ ಬೆಲೆ 3000ರೂ ಇಳಿಕೆ..!
ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ..!
ಕುಡುಕರಿಗೆ ಶಾಕ್ ಕೊಟ್ಟ ಸುಪ್ರೀಂ: ದೇಶದ ಎಲ್ಲಾ ಹೆದ್ದಾರಿಗಳಲ್ಲಿನ ಬಾರ್, ವೈನ್ ಶಾಪ್ ಬಂದ್…!