ನೈಋತ್ಯ ಚೀನಾದ ಗ್ಯುಯಿಝೋವ್ ಪ್ರಾಂತ್ಯದ ಪಿಂಗ್‍ಟಾಂಗ್ ಕೌಂಟಿಯಲ್ಲಿ ವಿಶ್ವದ ಅತೀ ದೊಡ್ಡ ರೇಡಿಯೋ ದೂರದರ್ಶಕ ತಯಾರಾಗಿದ್ದು, 500 ಮೀಟರ್ ಸುತ್ತಳತೆಯನ್ನು ಹೊಂದಿದೆ. ಒಟ್ಟು 180 ದಶಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಿತವಾಗಿರುವ ಈ ದೂರದರ್ಶಕ ನಿರ್ಮಿಸಲು ತೆಗೆದುಕೊಂಡಿರುವ ಅವಧಿ ಬರೋಬ್ಬರಿ ಐದುವರೆ ವರ್ಷಗಳು.
ಈ ದೂರದರ್ಶಕ ಬೃಹತ್ ಗಾತ್ರದ ಪ್ರತಿಫಲಕವನ್ನು(ರಿಫ್ಲೆಕ್ಟರ್ಸ್) ಹೊಂದಿದ್ದು, ಇದಕ್ಕೆ ಒಟ್ಟು 4,450 ಪ್ಯಾನಲ್ ಕವರ್‍ಗಳನ್ನು ಅಳವಡಿಸಲಾಗಿದೆ. ಸುಮಾರು 30 ಫುಟ್‍ಬಾಲ್ ಮೈದಾನಗಳನ್ನು ಹೊಂದುವ ಜಾಗದಷ್ಟು ಪ್ರದೇಶದಲ್ಲಿ ಇದನ್ನು ನಿರ್ಮಿಸಲಾಗಿದೆ.
ಫೈನಲ್ ಟಚ್‍ಅಪ್
ತಯಾರಕರು, ತಜ್ಞರು, ವಿಜ್ಞಾನ ಉತ್ಸಾಹಿಗಳು ಮತ್ತು ವರದಿಗಾರರು ಸೇರಿದಂತೆ ಒಟ್ಟು 300 ಜನ ಈ ದೂರದರ್ಶಕದ ಕೊನೆಯ ತ್ರಿಕೋನ ಫಲಕವುಳ್ಳ ಪ್ರತಿಫಲಕದ ಅಳವಡಿಕೆಯ ಸಾಕ್ಷಿಯಾದರು.
ಸೆಪ್ಟಂಬರ್‍ನಲ್ಲಿ ಕಾರ್ಯನಿರ್ವಹಿಸಲಿರುವ ಈ ಬೃಹತ್ ದೂರದರ್ಶಕಗದ ನಿರ್ಮಾಣ ಚೀನಾ ಪಾಲಿಗೆ ಅತ್ಯಂತ ಮಹತ್ವದ ನಡೆ ಎಂದು ಹೇಳಬಹುದು.
ಉದ್ದೇಶ
ಆಗಸದಲ್ಲಿರುವ ಅನೇಕ ವಿಚಿತ್ರ ವಸ್ತುಗಳನ್ನು ಪತ್ತೆಹಚ್ಚುವ ಸಾಮಥ್ರ್ಯ ಈ ದೂರದರ್ಶಕಕ್ಕಿದೆ. ಸೃಷ್ಟಿಯ ನಿರ್ಮಾಣ ಮತ್ತು ಅನ್ಯಜೀವಿಗಳ ಹುಡುಕಾಟದಲ್ಲಿ ತೊಡಗಿರುವ ವಿಜ್ಞಾನಿಗಳಿಗೆ ಉಪಯೋಗವಾಗಲಿ ಎಂಬ ಹಿತದೃಷ್ಟಿಯಿಂದ ಈ ಬೃಹತ್ ಗಾತ್ರದ ದೂರದರ್ಶಕ ನಿರ್ಮಿಸಲಾಗಿದೆ ಎಂದು ಚೀನಾ ಅಕಾಡೆಮಿ ಆಫ್ ಸೈನ್ಸಸ್‍ನ ನ್ಯಾಷನಲ್ ಆ್ಯಸ್ಟ್ರಾನಾಮಿಕಲ್ ಒಬ್ಸರ್ವೇಶನ್ ಉಪಮುಖ್ಯಸ್ಥ ಝೆಂಗ್ ಕ್ಸಿಯಾನಿಯನ್ ತಿಳಿಸಿದ್ದಾರೆ.
ಉತ್ಪಾದನೆ ವಲಯ ಹೊರತಾಗಿ ಮುಂದುವರಿದ ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿನ ಸಂಶೋಧನೆಯಲ್ಲಿ ತೊಡಗಿಸುಕೊಂಡು ಒಂದು ಹೈಟೆಕ್ ರಾಷ್ಟ್ರವಾಗಿ ಪರಿವರ್ತನೆಗೊಳ್ಳುವ ಉದ್ದೇಶವನ್ನು ಚೀನಾ ಇಟ್ಟುಕೊಂಡಿದೆ.
ಪ್ರಮುಖ ಅಂಶಗಳು
-ಈ ಬೃಹತ್ ದೂರದರ್ಶಕಗಳಲ್ಲಿರುವ ಪ್ರತಿಫಲಕಗಳ ಗಾತ್ರದಲ್ಲಿ ಒಟ್ಟು 30 ಫುಟ್ಬಾಲ್ ಮೈದಾನಗಳನ್ನು ನಿರ್ಮಿಸಬಹುದು.
-ಈ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ವಿಶ್ವದ ಅತೀ ದೊಡ್ಡ ದೂರದರ್ಶಕ ಎಂಬ ಹೆಸರಿಗೆ ಪಾತ್ರವಾಗಲಿದ್ದು, ಪ್ರಸ್ತುತ ವಿಶ್ವದ ಅತೀ ದೊಡ್ಡ ದೂರದರ್ಶಕ ಎನಿಸಿರುವ ಪೆÇೀರ್ಟೋ ರೀಕೋದ `ಅರೇಬಿಕೋ ಒಬ್ಸರ್‍ವೇಟರಿ’ ಅನ್ನು ಹಿಂದಿಕ್ಕಲಿದೆ. ಈ ದೂರದರ್ಶಕ ಒಟ್ಟು 300 ಮೀಟರ್ ಸುತ್ತಳತೆ ಹೊಂದಿದೆ.
-ಬಾನ್‍ನಲ್ಲಿ ನಿರ್ಮತವಾಗಿರುವ ಸುತ್ತಲೂ ತಿರುಗಿಸುವ ದೂರದರ್ಶಕಕ್ಕಿಂತಲೂ ಹತ್ತು ಪಟ್ಟು ಸೂಕ್ಷ್ಮ ದೂರದರ್ಶಕ ಎಂದು ಈ ನೂತನ ದೂರದರ್ಶಕ ಪಾತ್ರವಾಗಲಿದೆ.
- ವಿಶು
POPULAR STORIES :
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!
ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!
ನೋಡ್ರಿ ಇಲ್ಲಿದೆ ಕೋಟಿಗೊಬ್ಬ2 ಟ್ರೇಲರ್..! ಒಂದಲ್ಲ ಎರಡೆರಡು ಟ್ರೇಲರ್ ಒಂದು ಕನ್ನಡ ಇನ್ನೊಂದು?
ದಿ ನ್ಯೂ ಇಂಡಿಯನ್ ಟೈಮ್ಸ್ ಮೊದಲ ವಾರ್ಷಿಕೋತ್ಸವ
ನೀವೂ ಯೂಟ್ಯೂಬ್‍ನಲ್ಲಿ ವಿಡಿಯೋ ನೋಡ್ತೀರಾ..? ಇಲ್ಲಿವೆ 15 ಯೂಟ್ಯೂಬ್ ಟ್ರಿಕ್ಸ್..!