ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!

Date:

ಆಸ್ತಿ ಆಸೆಗಾಗಿ ಐಸಿಯುನಲ್ಲಿದ್ದ ತಂದೆಯ ಉಸಿರಾಟದ ಪೈಪ್ ಅನ್ನು ವೈದ್ಯಳಾಗಿರುವ ಮಗಳೇ ಕಿತ್ತು ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೆಲ್ನೋಟಕ್ಕೆ ಇದು ಸಹಜ ಸಾವಿನಂತೆ ಕಂಡು ಬಂದಿತ್ತು. ನಂತರ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದ ವಿಡಿಯೊವನ್ನು ಪರಿಶೀಲಿಸಿದಾಗ ವೈದ್ಯೆ ಮಗಳ ಈ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ.
82 ವರ್ಷದ ವ್ಯಕ್ತಿ ಹೃದಯ ಸಂಬಂಧಿತ ಚಿಕಿತ್ಸೆಗಾಗಿ ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಖಲಾಗಿದ್ದ ತಂದೆಯನ್ನು ನೋಡಲು ಮಗಳು ತನ್ನ ಎರಡು ಗಂಡು ಮಕ್ಕಳೊಂದಿಗೆ ಬಂದಿದ್ದಳು. ಈ ವೇಳೆ ಆರೈಕೆ ನೀಡುತ್ತಿದ್ದ ನರ್ಸ್‍ಗಳ ಬಳಿ ತಂದೆಯೊಂದಿಗೆ ಸ್ವಲ್ಪ ಮಾತನಾಡಲಿದೆ ಎಂದು ಮನವಿ ಮಾಡಿಕೊಂಡಿದ್ದಾಳೆ. ನಂತರ ವೈದ್ಯರು ಜೋಡಿಸಿದ್ದ ಕೃತಕ ಆಮ್ಲಜನಕ ಪೈಪ್‍ನ್ನು ಕಿತ್ತು ಹಾಕಿದ್ದಾಳೆ.
ಇದಾದ ಮೇಲೆ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದ ತಂದೆಯ ಬಳಿ ಕದ್ದು ಮುಚ್ಚಿ ತಂದಿದ್ದ ಆಸ್ತಿ ಪತ್ರಕ್ಕೆ ಮಕ್ಕಳೊಂದಿಗೆ ಸೇರಿಕೊಂಡು ಹೆಬ್ಬೆಟ್ಟು ಹಾಕಿಸಿಕೊಂಡಿದ್ದಾಳೆ. ನಂತರ ಕಿತ್ತುಹಾಕಿದ್ದ ಅಮ್ಲಜನಕದ ಪೈಪ್‍ನನ್ನು ಮರು ಜೋಡಿಸಿದ್ದರು. ಈ ವೇಳೆಗಾಗಲೇ ಆಮ್ಲಜನಕ ಸಿಗದ ಕಾರಣ ಆಕೆಯ ತಂದೆ ಸಾವನ್ನಪ್ಪಿದ್ದರು.
ಈ ಸಾವಿನ ಬಗ್ಗೆ ಅನುಮಾನಗೊಂಡ ಆಸ್ಪತ್ರೆಯ ವೈದ್ಯ ಮತ್ತು ಮೃತ ವ್ಯಕ್ತಿಯ ಮಗ ಡಾ. ಎಂ. ಜಯಪ್ರಕಾಶ್ ಸಿಸಿ ಕ್ಯಾಮೆರಾದ ವಿಡಿಯೋವನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅಕ್ಕನ ಕೃತ್ಯ ಬಯಲಾಗಿದೆ. ನಂತರ ಇದನ್ನ ಪೊಲೀಸರಿಗೆ ನೀಡಿದ್ದಾರೆ.

CCTV Video :

https://youtu.be/e1Fbn9P-NIg

POPULAR  STORIES :

ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!

ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!

ಸೈಕಲ್ ಕದಿಯಲು ಇಡೀ ಮರವನ್ನೇ ಕತ್ತರಿಸಿದ ಕತರ್ನಾಕ್ ಕಳ್ಳ…!

ಸ್ಯಾಮ್ ಸಂಗ್ ಕಂಪನಿಯು ಭೀಕರ ರಹಸ್ಯದ ಬಗ್ಗೆ ಬಾಯ್ಮುಚ್ಕೊಂಡು ತೆಪ್ಪಗಿರೋಕೆ ಕೆಲಸಗಾರರಿಗೆ ಭಾರೀ ಮೊತ್ತ ನೀಡಿತ್ತಂತೆ

ಈ ಹಾಡನ್ನು ಕೇಳಿದವ್ರೆಲ್ಲಾ ಸುಸೈಡ್ ಮಾಡ್ಕೊಂಡ್ರಂತೆ…!

ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!

ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು

ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...