ಲವ್ ಮ್ಯಾರೇಜ್ ಆದ್ರೆ ಬೇರೆ ಜಾತಿ ಹುಡಗನನ್ನ ಮದ್ವೆ ಆದ್ರು ಅಂತ ಪೋಷಕರು ಮಗಳನ್ನ ಮನೆ ಬಿಟ್ಟು ಹೋಡಿಸ್ತಾರೆ. ಇನ್ನು ತಂದೆ ತಾಯಿ ಒಪ್ಪಿಗೆ ಮೇರೆಗೆ ಮದುವೆಯಾದ್ರೂ ವರದಕ್ಷಿಣೆ ಕಿರುಕುಳ, ಅತ್ತೆ-ಮಾವಂದಿರ ಕಾಟ ಹೀಗೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯಕ್ಕೆ ಒಳಗಾಗಿ ಮಹಿಳೆಯರು ಸಾವಿನ ನಿರ್ಧಾರಗಳನ್ನ ತಗೊಂಡಿರೊ ಅದೆಷ್ಟೋ ಉದಾಹರಣೆಗಳಿವೆ. ಅಂತಹದ್ದೆ ಒಂದು ವಿಡಿಯೋ ಇಲ್ಲಿದೆ ನೋಡಿ. ಅಪ್ಪ- ಅಮ್ಮ ಹೇಳಿದ ವರವನ್ನೆ ಮದುವೆಯಾದ ಐಶ್ವರ್ಯಾ ಎಂಬುವವಳಿಗೆ ಪ್ರತಿ ನಿತ್ಯವೂ ತನ್ನ ಗಂಡನ ಮನೆಯಲ್ಲಿ ವರದಕ್ಷಿಣೆ ಕಿರುಕುಳ ನೀಡ್ತಾ ಇದ್ರಂತೆ. ಇದ್ರಿಂದ ಬೇಸತ್ತ ಯುವತಿ ತನಗಾಗುತ್ತಿರುವ ದೌರ್ಜನ್ಯವನ್ನೆಲ್ಲಾ ವಿಡಿಯೋ ಮೂಲಕ ಹೇಳಿಕೊಂಡು ನೇಣು ಬಿಗಿದು ಆತ್ಮಹತ್ಯೆಗೆ ಪ್ರಯತ್ನ ಮಾಡ್ತಾಳೆ. ಅಪ್ಪ ಅಮ್ಮ ಹುಡುಕಿದ ವರನನ್ನೆ ಮದುವೆಯಾಗಿ ನಾನಿಲ್ಲಿ ಚಿತ್ರ ಹಿಂಸೆ ಅನುಭವಿಸುತ್ತಿದ್ದರೂ ಹೆತ್ತ ಅಪ್ಪ-ಅಮ್ಮನೆ ನನ್ನನ್ನು ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ ಅಂತ ಅಳಲು ತೋಡ್ಕೊಂಡಿರೋ ಈಕೆ ಆತ್ಮಹತ್ಯೆ ಪ್ರಯತ್ನ ಮಾಡ್ತಾಳೆ. ಇದೆಲ್ಲಾ ನಿಜಾನಾ..? ಅಂತಿರಾ. ಇಲ್ಲ ಇದೊಂದು ವರದಕ್ಷಿಣೆ ಕಿರುಕುಳ ವಿರುದ್ದ ಸಂದೇಶ ಸಾರುವ ವಿಡಿಯೋ ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಕೇವಲ ಕಾಲುಗಳನ್ನು ಮಾತ್ರ ತೋರಿಸಿರೋ ಈ ವಿಡಿಯೋ ನಂತರ ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಮಹಿಳೆಯರ ಕುರಿತು ಹೇಳಲಾಗಿದೆ. ಪ್ರತಿ ವರ್ಷ 6 ಲಕ್ಷಕ್ಕೂ ಹೆಚ್ಚು ಜನ ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಈ ಅನಿಷ್ಠ ಪದ್ದತಿ ಇಂದಿಗೂ ರೂಢಿಯಲ್ಲಿರೋದು ಶೋಚನೀಯ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.
https://youtu.be/h7va-Umw9oY?t=13s
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?
ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!
2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?
ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ
ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!