ವಿಮಾನದ ಮೆಟ್ಟಿಲಿನಿಂದ ಬಿದ್ದವಳು ಏನಾದಳು? ಹೆಂಗಿದ್ದ ಮಹಿಳೆ ಹೇಗಾದ್ಲು ಗೊತ್ತಾ?

Date:

ಆಕೆ ನಡೆದು ಬರುತ್ತಿದ್ದರೆ ದೊಡ್ಡ ಮಾಂಸ ಪರ್ವತವೊಂದು ನಡೆದು ಬಂದಂತೆ ಕಾಣುತ್ತೆ..! ಹೆಸರು, ಚಾರಿಟಿ ಪಿಯರ್ಸ್. ವಯಸ್ಸು 39. ವಿಶ್ವದ ಅತೀ ದಪ್ಪನೆಯ ಮಹಿಳೆಯರಲ್ಲಿ 2ನೇ ಸ್ಥಾನದಲ್ಲಿದ್ದಾಳೆ..! ತೂಕ 384 ಕೆಜಿ..! ಹಾಗೆಂದ ಮಾತ್ರಕ್ಕೆ ಈಕೆ ಹುಟ್ಟಿನಿಂದ ದಷ್ಟಪುಷ್ಟವಾಗಿಯೇ ಇದ್ದಳೇ? ಎಂದು ಯೋಚಿಸಿದ್ರೆ ನಮ್ಮ ಕಲ್ಪನೆ ತಪ್ಪಾದೀತು..! ಮೊದಲು ತೆಳ್ಳಗೇ ಇದ್ದ ಈಕೆ ದಪ್ಪವಾಗಿದ್ದು 15 ವರ್ಷಗಳ ಹಿಂದಷ್ಟೇ..! ಆಗಿನ್ನೂ ಆಕೆಗೆ 24ರ ಹರೆಯ. ವಿಮಾನದ ಮೆಟ್ಟಿಲುಗಳಿಂದ ಜಾರಿ ಬಿದ್ದಿದ್ದೇ ಒಂದು ನೆಪ..! ಅಲ್ಲಿಂದ ಗ್ರಹಚಾರ ಕೆಟ್ಟೋಯ್ತು..! ದುರದೃಷ್ಟ ಬೆನ್ನಹತ್ತಿತು..! ಆಕೆ “ಲಿಂಫೆಡೇಮಾ’ ಎನ್ನುವ ಕಾಯಿಲೆಗೆ ತುತ್ತಾದಳು..! ದೇಹದ ಮಾಂಸವನ್ನು ಪ್ರತಿಕ್ಷಣವೂ ಬ್ಯಾಕ್ಟಿರಿಯಾಗಳು ತಿನ್ನುವ ಈ ವಿಚಿತ್ರ ಕಾಯಿಲೆಯಿಂದಾಗಿ ಕೊಬ್ಬು ಹೆಚ್ಚಾಗುತ್ತಾ ಬಂತು..! ಎಡಗಾಲಲ್ಲಿ ಮಾಂಸದ ದೊಡ್ಡ ಊತವೇ ಕಾಣಿಸಿಕೊಳ್ತು..! ಈ ಕಾಯಿಲೆ ದೆಸೆಯಿಂದ ಹಸಿವು ಹೆಚ್ಚಾಯ್ತು..! ಎಷ್ಟೇ ತಿಂದರೂ ಇನ್ನೂ ಹೆಚ್ಚು ಹೆಚ್ಚು ತಿನ್ನಬೇಕೆಂದು ಅನಿಸಲಾರಂಭಿಸಿತು..! ದಿನಕ್ಕೆ 10ಸಾವಿರ ಕ್ಯಾಲೋರಿ ತಿನ್ನಲಾರಂಭಿಸಿದ್ಲು..! ನಂತರ ವೈದ್ಯರನ್ನು ಭೇಟಿಯಾದಾಗ ಹೀಗೆ ಮುಂದುವರೆದರೆ ಅತೀ ಶೀಘ್ರದಲ್ಲೇ ಸಾವು ನಿಶ್ಚಿತ ಅಂತ ಹೇಳಿಬಿಟ್ರು..!
ಈಕೆಯ ತಂದೆ ಕುಡುಕ..! ಇವನಿಗೆ ಮಗಳ ಮೇಲೆ ಕೋಪ ಹೆಚ್ಚಿತು. ಮಗಳನ್ನು ಕೊಲ್ಲಲು ವಿಫಲಯತ್ನ ನಡೆಸಿದ ತಂದೆ ಅನಿಸಿಕೊಂಡ ಭೂಪ..! ಆದರೆ, ತಂಗಿ ಮತ್ತು ತಾಯಿ ಪ್ರೀತಿಯಿಂದ ಸಲಹಿದರು..! ಜೊತೆಗೆ 22ರ ತರುಣ ಟೋನಿ ಸಾವರ್ಟ್ ಎಂಬ ಪುಣ್ಯಾತ್ಮ ಈಕೆಗೆ ಮನಸೋತ, ಮೋಹಿಸಿದ..! ತನ್ನ ಗೆಳತಿ ಚಾರಿಟಿಯನ್ನು ಟೆಕ್ವಾಸ್‍ನಗರದ ಮೂಳೆ ಶಸ್ತ್ರ ವೈದ್ಯ ಡಾ. ಬೆನ್ ಮಿಲ್ಲರ್ ಬಳಿ ಕರೆದುಕೊಂಡು ಹೋದ..! ಈಗ ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿ ವಿಧಾನದಿಂದ ಪ್ರತಿತಿಂಗಳು ದೇಹದ ಅನಗತ್ಯ ಕೊಬ್ಬನ್ನು ತೆಗೆಯುವ ಚಿಕಿತ್ಸೆ ಕೊಡಿಸುತ್ತಿದ್ದಾನೆ..! ಚಾರಿಟಿ ತಿಂಗಳಿಗೆ ಸುಮಾರು 11 ಕೆ.ಜಿ ತೂಕ ಕಳೆದುಕೊಳ್ಳುತ್ತಿದ್ದಾಳೆ..! 10ಸಾವಿರ ಕ್ಯಾಲರಿ ಆಹಾರ ಸೇವಿಸ್ತಾ ಇದ್ದವಳೀಗ 1200 ಕ್ಯಾಲರಿ ಆಹಾರ ಸೇವಿಸ್ತಿದ್ದಾಳೆ…! ಕಳೆದ 12 ತಿಂಗಳಲ್ಲಿ ಸುಮಾರು 109 ಕೆ.ಜಿ ಪೌಂಡ್ ತೂಕ ಇಳಿದಿದೆಯಂತೆ..!
ಆದರೂ ದೇಹದ ತೂಕದಿಂದ ಆಸ್ಪತ್ರೆಗೆ ಸಾಧಾರಣ ಕಾರಿನಲ್ಲಿ ಹೋಗಿ ಬರಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಸಲ 5ಸಾವಿರ ಡಾಲರ್ ಖರ್ಚಾಗುತ್ತಿದೆ. ಟಿ.ವಿ ಕಾರ್ಯಕ್ರಮದಲ್ಲಿ ತನ್ನ ದಡೂತಿ ದೇಹ ಪ್ರದರ್ಶಿಸಿ ಆರ್ಥಿಕ ನೆರವಿಗೆ ಮೊರೆಯಿಟ್ಟಿದ್ದ ಚಾರಿಟಿಗೆ ಅನೇಕರು ಸಹಾಯ ಮಾಡಿದ್ದಾರೆ.
ಹ್ಞೂಂ, ಈಕೆ ವಿಶ್ವದ 2ನೇ ದಡೂತಿ ಮಹಿಳೆ..! ಮೊದಲನೆಯವಳು ಕ್ಯಾಲಿಫೋರ್ನಿಯಾದ ಪಾಲಿನ್ ವಾಟರ್ ಎಂಬಾಕೆ. ಅವಳು ಚಾರಿಟಿಗಿಂತ ಸುಮಾರು 28 ಕೆ.ಜಿ ಹೆಚ್ಚಿನ ತೂಕ ಹೊಂದಿದ್ದಾಳೆ..!

  • ರಘು ಭಟ್ 

POPULAR  STORIES :

ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ರಿಂಗಿಂಗ್ ಬೆಲ್ಸ್?

ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಯಲ್ಲಿ ಶೋಭ ಹಸ್ತಕ್ಷೇಪ ಇಲ್ವಂತೆ..!?

11ರ ಪೋರ ಕಲ್ಲಾಗುತ್ತಿದ್ದಾನೆ..!

ಸುದೀಪ್, ಪ್ರಿಯ ಒಂದಾದ್ರ.? ಮತ್ತೆ ಒಂದಾಯ್ತು ಕಿಚ್ಚನ ಸಂಸಾರ..!?

ಇನ್ಮುಂದೆ ಶಾಲೆಗಳಿಗೆ ಕಟ್ಟಬೇಕಿಲ್ಲ ಲಕ್ಷಗಟ್ಟಲೆ ಡೊನೇಷನ್..!

ನೀವು ಫೇಸ್‍ಬುಕ್‍ನಲ್ಲಿ ಫೇಮಸ್ಸಾದ್ರೆ ಸುಲಭದಲ್ಲಿ ಸಾಲ ಸಿಗುತ್ತೆ..!

ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ..ಮೂತ್ರ ಹೊಯ್ದರೆ ಬಂಗಾರವಾದೆ..! #Gold in Cow

ಹಾಳಾಗಿ ಹೋಗ್ತೀಯಾ…! ಕೊಳ್ಳೇಗಾಲ ಅಂದಾಕ್ಷಣ ಸಿಎಂ ಕಾಲ್ಕಿತ್ತಿದ್ದು ಯಾಕೆ..?

ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?

Share post:

Subscribe

spot_imgspot_img

Popular

More like this
Related

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ ಬೆಂಗಳೂರು:...

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ ಬೆಂಗಳೂರು:...

ದೇಹದ ಮೇಲೆ ಕಾಣಿಸುವ ಹುಟ್ಟುಮಚ್ಚೆಗಳು ಆರೋಗ್ಯಕ್ಕೆ ಅಪಾಯವೇ?

ದೇಹದ ಮೇಲೆ ಕಾಣಿಸುವ ಹುಟ್ಟುಮಚ್ಚೆಗಳು ಆರೋಗ್ಯಕ್ಕೆ ಅಪಾಯವೇ? ದೇಹದ ಮೇಲೆ ಹುಟ್ಟುಮಚ್ಚೆಗಳು ಇರುವುದು...

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...