ಅಂತಾರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿಯನ್ನ ತಿರಸ್ಕರಿಸಿದ ಒಡೆಯರ್

Date:

ರಾಜವಂಶಸ್ಥ ಯದುವೀರ್ ಒಡೆಯರ್ UAE ಕನ್ನಡ ಸಮುದಾಯದ ಅಂತಾರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿಯನ್ನ ವಿನಮ್ರತೆಯಿಂದ ತಿರಸ್ಕರಿಸಿದ್ದಾರೆ. ಈ ಬಗ್ಗೆ ಯದುವೀರ್ ಒಡೆಯರ್ ಅವರು ಪ್ರಕಟಣೆ ಹೊರಡಿಸಿದ್ದು, ಅಂತಾರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಸುದ್ದಿ ಮುದ್ರಣ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಹರಿದಾಡ್ತಿರುವ ಬಗ್ಗೆ ತಿಳಿದಿದೆ. ನಾನು ಈ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಎಲ್ಲರಿಗೂ ತಿಳಿಸುತ್ತೇನೆ.

ಈ ಗೌರವವನ್ನು ಸ್ವೀಕರಿಸಲು ನಾನು ಯೋಗ್ಯ ಎಂದು ಪರಿಗಣಿಸಿದ್ದಕ್ಕೆ ಧನ್ಯವಾದಗಳು. ಈ ಪ್ರಶಸ್ತಿ ಸಂಘಟಕರಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ. ಆದ್ರೆ, ಈ ಸಮಯದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸುವುದು ಸೂಕ್ತವಲ್ಲ. ಕನ್ನಡ ಕಲ್ಯಾಣಕ್ಕೆ ಪ್ರತಿಫಲದ ನಿರೀಕ್ಷೆಯಿಲ್ಲದೇ ಶ್ರಮಿಸುತ್ತೇನೆ. ನಾನು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದೇನೆ. ಜೊತೆಗೆ UAEಯಲ್ಲಿರುವ ನಮ್ಮ ಕನ್ನಡ ಸಮುದಾಯ ಭೇಟಿಗೆ ಎದುರು ನೋಡ್ತಿದ್ದೇನೆ ಎಂದು ಯದುವೀರ್ ಒಡೆಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಅಣ್ಣಮ್ಮ ಹಾಡಿಗೆ ಮಚ್ಚು ಹಿಡಿದು ನೃತ್ಯ ಮಾಡಿದ್ದ ರೌಡಿಶೀಟರ್‌ ಗಳು ಜೈಲುಪಾಲು

ಅಣ್ಣಮ್ಮ ಹಾಡಿಗೆ ಮಚ್ಚು ಹಿಡಿದು ನೃತ್ಯ ಮಾಡಿದ್ದ ರೌಡಿಶೀಟರ್‌ ಗಳು ಜೈಲುಪಾಲು ಬೆಂಗಳೂರು:...

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB!

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB! ಬೆಂಗಳೂರುದಲ್ಲಿರುವ ಎಂ....

ಕುವೆಂಪು ಮೆಟ್ರೋ ನಿಲ್ದಾಣದ ಬಳಿ ಭಾರಿ ಅವಾಂತರ! ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ ಬೃಹತ್ ಮರ!

ಕುವೆಂಪು ಮೆಟ್ರೋ ನಿಲ್ದಾಣದ ಬಳಿ ಭಾರಿ ಅವಾಂತರ! ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ...

ಹಿಂದೂ ಧರ್ಮವು ಪೂಜಾ, ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ: ಮೋಹನ್ ಭಾಗವತ್

ಹಿಂದೂ ಧರ್ಮವು ಪೂಜಾ, ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ:...