ನಡುಗುತ್ತಿರುವ `ಕೈ' ಪ್ರಾಣ ಕಳೆದುಕೊಳ್ಳುತ್ತದಾ..!? ಸಿದ್ದರಾಮಯ್ಯ v/s ಯಡಿಯೂರಪ್ಪ

Date:

raaaಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶನಿ ಕಾಟ ಶುರುವಾದಂತಿದೆ. ಒಂದಲ್ಲ ಒಂದು ವಿವಾದಗಳು ಅವರ ಬೆನ್ನುಬಿದ್ದಿವೆ. ಒಂದು ಕಡೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕಾಂಗ್ರೆಸ್ ಭವಿಷ್ಯದ ಬಗ್ಗೆ ಆತಂಕ ಮೂಡಿಸುತ್ತಿದ್ದರೇ, ಮತ್ತೊಂದು ಕಡೆ ಅಗತ್ಯ, ಅನಗತ್ಯ ವಿವಾದಗಳು ಸಿಎಂ ಕೊರಳಿಗೆ ಸುತ್ತಿಕೊಳ್ಳುತ್ತಿವೆ. ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಅಭಾಸಗಳಿಂದ ಹೈಕಮಾಂಡ್ ಬೇಸರವ್ಯಕ್ತಪಡಿಸಿದೆ. ಸಮಾಜವಾದಿ ಚಿಂತನೆಗಳನ್ನು ಬ್ಯಾಟರಿ ಹಾಕಿ ಹುಡುಕುವಷ್ಟರ ಮಟ್ಟಿಗೆ ಸಿದ್ದರಾಮಯ್ಯ ಹೆಸರು ಕೆಡಿಸಿಕೊಂಡಿದ್ದಾರೆ. ಅವರು ಧರಿಸುವ ಧಿರಿಸು, ಕಟ್ಟಿಕೊಂಡ ವಾಚ್ ವಿವಾದ ತಣ್ಣಗಾಗುತ್ತಿದ್ದಂತೆ, ಅರ್ಕಾವತಿ ಡಿನೋಟಿಫಿಕೇಶನ್ ಸದ್ದು ಮಾಡಿತ್ತು. ಇತ್ತೀಚೆಗೆ ಪುತ್ರ ವ್ಯಾಮೋಹದ ಸುಳಿಯಲ್ಲಿ ಸಿಲುಕಿದ್ದಾರೆ. ಮಗ ಯತೀಂದ್ರನ ಪಾರ್ಟ್ ನರ್ ಡಾ. ರಾಜೇಶ್ ಗೌಡ ಅವರ ಶಾಂತಾ ಇಂಡಸ್ಟ್ರೀಯಲ್ ಎಂಟರ್ ಪ್ರೈಸಸ್ಗೆ ಹೆಬ್ಬಾಳ ಮೇಲ್ಸೇತುವೆ ಪಕ್ಕದಲ್ಲಿರುವ ಎರಡು ಎಕರೆ ಹತ್ತೊಂಬತ್ತು ಗುಂಟೆ ಜಾಗವನ್ನು ಮಂಜೂರು ಮಾಡಿದ್ದು ಸಂಕಷ್ಟಕ್ಕೀಡುಮಾಡಿದೆ. 1977ರಲ್ಲಿ ಬಡಾವಣೆ ಅಭಿವೃದ್ಧಿಗಾಗಿ ಮಹಾಲಕ್ಷ್ಮಿಲೇಔಟ್ ನ ಕೇತಮಾರನಹಳ್ಳಿಯಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಎರಡು ಲಕ್ಷದ ಮೂವತ್ತೆರಡು ಸಾವಿರದ ಎಂಟು ಚದರಡಿ ಭೂಮಿಯ ಕುರಿತಂತೆ ಶಾಂತ ಎಂಟರ್ ಪ್ರೈಸಸ್, ಪ್ರತಿಚದರಡಿಗೆ ಇಪ್ಪತ್ತು ರೂಪಾಯಿ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿತ್ತು. ಅದಕ್ಕೆ ಬದಲಾಗಿ ಸರ್ಕಾರ ಅವರಿಗೆ ಪ್ರತಿ ಚದರಡಿಗೆ ಇಪ್ಪತ್ತು ಸಾವಿರ ಬೆಲೆಬಾಳುವ ಹೆಬ್ಬಾಳದ ಜಾಗವನ್ನು ಮಂಜೂರು ಮಾಡಿದೆ. ಇದರಲ್ಲಿ ಬಿಡಿಎ ಅಧಿಕಾರಿಗಳು ನೇರವಾಗಿ ಶಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಒಂದುವೇಳೆ ಇದು ನಿಜವೇ ಎಂದು ಸಾಬೀತಾದಲ್ಲಿ ಬಿಡಿಎಯಲ್ಲಿ ಬದಲಿ ನಿವೇಶನ ವ್ಯವಹಾರ ನಡೆಯುತ್ತಿದೆ ಎಂಬುದು ಖಾತ್ರಿಯಾಗುತ್ತದೆ.

ಮೊದಲೇ ಆಂತರಿಕ ಕಲಹದಿಂದ ಅತಂತ್ರವಾಗಿರುವ ಕಾಂಗ್ರೆಸ್ ಗೆ ಮೇಲಿಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಏಟು ಬೀಳುತ್ತಿರುವುದು ಸಹಿಸಲಾಗುತ್ತಿಲ್ಲ. ಸಿದ್ರಾಮಯ್ಯನವರು ಮುಖ್ಯಮಂತ್ರಿಯಾದ ಮೊದಲ ದಿನದಿಂದಲೇ ಅವರನ್ನು ಪಟ್ಟದಿಂದ ಇಳಿಸುವ ಪ್ರಯತ್ನವಾಗುತ್ತಿತ್ತು. ಆದರೆ ಅವರನ್ನು ಪಟ್ಟಮುಕ್ತಮಾಡಲು ಹೈಕಮಾಂಡ್ ಗೆ ಕಾರಣಗಳು ಸಿಗುತ್ತಿರಲಿಲ್ಲ. ಇದೀಗ ಸಿಎಂ ಸರಣಿ ಎಡವಟ್ಟುಗಳು ಮಾಡಿಕೊಳ್ಳುತ್ತಿರುವುದರಿಂದ, ಅತ್ತ ಬಿಜೆಪಿಯಲ್ಲಿ ರಾಜಕೀಯ ಸಂಚಲನ ಮೂಡಿರುವುದರಿಂದ- ಪರಮೇಶ್ವರ್ ಬಣ ಹೈಕಮಾಂಡ್ ಮುಂದೆ, `ಮೇಡಂ ಹಿಂಗೆ ಮುಂದುವರಿದ್ರೇ ಕಾಂಗ್ರೆಸ್ ಗತಿ ಅಧೋಗತಿ’ ಎಂದು ಅಹವಾಲು ಸಲ್ಲಿಸಿರುವ ಮಾಹಿತಿಯಿದೆ. ಸಮಾಜವಾದಿ ಸಿದ್ಧಾಂತದ ಆಧಾರದಲ್ಲೇ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಎಪ್ಪತ್ತು ಲಕ್ಷ ಬೆಲೆಯ ವಾಚು, ಲಕ್ಷ-ಲಕ್ಷ ಬೆಲೆಯ ಶಲ್ಯ, ಪಂಚೆ ಹಾಕಿದ್ದೇ ಅವರ ಸಿದ್ಧಾಂತಗಳೆಲ್ಲಾ ಅರ್ಥ ಕಳೆದುಕೊಂಡಿತ್ತು. ಕುಮಾರಸ್ವಾಮಿ ಆದಿಯಾಗಿ ಅನೇಕರು ಅವರನ್ನು ಬೀದಿಗೆ ತಂದು ನಿಲ್ಲಿಸಿದರು. ಅತ್ತ ಹೈಕಮಾಂಡ್ ಗರಂ ಆಯ್ತು. ಇದೇಕೋ ಸರಿಹೋಗಲ್ಲ ಅಂತ ಉಬ್ಲೋ ವಾಚ್ಗೆ ಉದೋ ಅಂದರು. ಆದರೂ ಅವರ ಮೇಲೆಬಿದ್ದ ಕಪ್ಪು ಮಸಿ ತೊಳೆಯದಷ್ಟು ಢಾಳಾಗಿದೆ.

ಸಿದ್ದರಾಮಯ್ಯನವರು ವಾಚ್ ರಾಮಾಯಣಕ್ಕೂ ಮುನ್ನ ಅರ್ಕಾವತಿ ಡಿನೋಟಿಫಿಕೇಶನ್ ಉರುಳಿನಲ್ಲಿ ನೇತಾಡತೊಡಗಿದ್ದರು. ನ್ಯಾಯಮೂತರ್ಿ ಕೆಂಪಣ್ಣ ಆಯೋಗದ ತನಿಖೆ ನಡೆಯುತ್ತಿರುವಾಗಲೇ ನಿರ್ಮಾಣ ಹಂತದಲ್ಲಿರುವ ಕೆಂಪೇಗೌಡ ಬಡಾವಣೆಗೆಂದು ಸ್ವಾಧೀನಪಡಿಸಿಕೊಳ್ಳಲಾಗಿದ್ದ ಒಟ್ಟು ಎಪ್ಪತ್ತೇಳು ಎಕರೆ ಮೂರುಗುಂಟೆ ಜಾಗವನ್ನು ಡೀನೋಟಿಫೈ ಮಾಡಲಾಗಿದೆ. ಕೆಂಪೇಗೌಡ ಬಡಾವಣೆಗೆ ಸ್ವಾಧೀನಪಡಿಸಿಕೊಳ್ಳಲಾಗಿದ್ದ ಭೂಮಿಯ ಪೈಕಿ ಸೀಗೇಹಳ್ಳಿ ಗ್ರಾಮದ ಸವರ್ೆ ನಂಬರ್ ಒಂದರಿಂದ ಮೂವತ್ಮೂರರವರೆಗೆ ಒಟ್ಟು ಮೂವತ್ತು ಎಕರೆ ಭೂಮಿಯನ್ನು ದಿ ಮೆಟ್ರೋಪಾಲಿಟನ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಗೆ ಸಗಟು ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿತು. ಇದರ ಉರುಳು ಸಿದ್ದರಾಮಯ್ಯನವರ ಕೊರಳಿಗೆ ಸುತ್ತಿಕೊಂಡಿತ್ತು. ಇದೀಗ ಮಗನ ಮಮಕಾರಕ್ಕೆ ನೂರೈವತ್ತು ಕೋಟಿ ಮೌಲ್ಯದ ಭೂಮಿ ಹಂಚಿಕೆ ಮಾಡಿ ಸಂಪೂರ್ಣವಾಗಿ ಹಡಾಲೆದ್ದುಹೋಗುವ ಸೂಚನೆ ನೀಡಿದ್ದಾರೆ. ಅತ್ತ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ಅಧಿಕಾರವಹಿಸಕೊಂಡ ನಂತರ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕಡಿಮೆಯೆಂದರೂ ನೂರೈವತ್ತು ಸೀಟುಗಳನ್ನು ಪಡೆದುಕೊಳ್ಳುತ್ತೆ, ಕಾಂಗ್ರೆಸ್ ಅನ್ನು ನಿರ್ನಾಮ ಮಾಡುತ್ತೇವೆ ಅಂತ ಯಡಿಯೂರಪ್ಪ ಶಪಥ ಮಾಡಿಯೂ ಆಗಿದೆ. ಹೀಗಿರುವಾಗ ರಾಜ್ಯ ಕಾಂಗ್ರೆಸ್ ನೊಗಹೊತ್ತ ಸಿದ್ದರಾಮಯ್ಯ ಮೇಲಿಂದ ಮೇಲೆ ಎಡವಟ್ಟು ಮಾಡಿಕೊಳ್ಳುತ್ತಿರುವುದು ಹೈಕಮಾಂಡ್ಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಇನ್ನೊಂದು ಕಡೆ ಭಿನ್ನಮತವೂ ಹೊಗೆಯಾಡುತ್ತಿದೆ. ಎಲ್ಲವೂ ಸೇರಿ ಸಿದ್ದುಗೆ ಕಂಟಕವಾದರೇ ಅತಿಶಯವೇನಲ್ಲ.

ಏನೇ ಹೇಳಿದರೂ, ಏನೇ ಅಂದುಕೊಂಡರೂ, ಏನೇ ಆರೋಪವಿದ್ದರೂ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಂಥ ನಾಯಕರಿಲ್ಲ ಎನ್ನುವುದೆ ದಿಟ. ಖಡಕ್ಕು ಮಾತು, ಖಡಕ್ಕು ಗೈರತ್ತು, ಎಂಥವರನ್ನೂ ಎದುರಿಸಿ ನಿಲ್ಲುವ ಚಾತಿ- ಒಟ್ಟಾರೆ ನಾಯಕತ್ವದ ಗುಣವನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡವರು ಯಡಿಯೂರಪ್ಪ ಎಂದು ಜನರು ತೀರ್ಮಾನಿಸಿಯಾಗಿದೆ. ರಾಜ್ಯದ ಮುಖ್ಯಮಂತ್ರಿಯಾದ ಯಡಿಯೂರಪ್ಪ ಅವರನ್ನು ಎರಡು ವರ್ಷ ಚಿಲ್ಲರೆ ಸಮಯ ಮಾತ್ರ ಬಿಜೆಪಿ ಅಧಿಕಾರದಲ್ಲಿರಿಸಿತ್ತು. ಆಮೇಲೆ ಸದಾನಂದಗೌಡರು ಅಧಿಕಾರದ ಚುಕ್ಕಾಣಿ ಹಿಡಿದರು. ಅವರಾದ ಮೇಲೆ ಜಗದೀಶ್ ಶೆಟ್ಟರ್ ರಾಜ್ಯದ ಮುಖ್ಯಮಂತ್ರಿಯಾದರು. ಮುಂದೆ ಚುನಾವಣೆ ಹತ್ತಿರ ಬರುವಷ್ಟರಲ್ಲಿ ಬಿಜೆಪಿಯ ಬುಡ ಸಡಿಲವಾಗಿತ್ತು. ಪ್ರಬಲ ನಾಯಕರ ನಡುವೆ ಮನಃಸ್ತಾಪ ಶುರುವಾಗಿತ್ತು. ಇವೆಲವನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡಿದ್ದು ಕಾಂಗ್ರೆಸ್. ಅಕ್ರಮ ಡಿನೋಟಿಫಿಕೇಶನ್ ಕೇಸಿನಲ್ಲಿ ಸಿಲುಕಿಕೊಂಡು ಬಿಜೆಪಿಯಿಂದ ಹೊರಬಂದ ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದರು. ಕೇಂದ್ರದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುವ ಅರ್ಹತೆಯಿದ್ದ ಯಡಿಯೂರಪ್ಪ ಪ್ರಾದೇಶಿಕ ಪಕ್ಷ ಕಟ್ಟಿ ತಮ್ಮ ರಾಜಕೀಯ ಜೀವನವನ್ನು ಮುಗಿಸಿಕೊಂಡರು ಎಂದು ಹೇಳಲಾಯಿತು. ಆದರೆ ಯಡಿಯೂರಪ್ಪನವರ ಈ ನಿರ್ಧಾರದಿಂದ ದೊಡ್ಡ ಮಟ್ಟದಲ್ಲಿ ಲುಕ್ಸಾನು ಅನುಭವಿಸಿದ್ದು ಬಿಜೆಪಿ. ಬಿಜೆಪಿ ಮತ್ತೊಂದು ಟಮರ್್ ಅಧಿಕಾರ ಮಾಡಬೇಕೆಂದರೇ ಬಲಾಢ್ಯ ನಾಯಕನ ಸಾರಥ್ಯ ಬೇಕಿತ್ತು. ಯಡಿಯೂರಪ್ಪ ಕೈಬಿಟ್ಟು ಹೋಗಿದ್ದರಿಂದ ಅವರ ಜಾಗಕ್ಕೆ ಈಶ್ವರಪ್ಪನವರನ್ನು ತಂದು ಕೂರಿಸಿತ್ತು ಬಿಜೆಪಿ.

ಈಶ್ವರಪ್ಪನವರ ನಾಯಕತ್ವದ ಬಗ್ಗೆ ಜನರಿಗಲ್ಲ, ಜಗತ್ತಿಗೆ ಗೊತ್ತಿತ್ತು. ರಾಜಕಾರಣದ ಪಟ್ಟುಗಳಿರಲಿ, ಮತದಾರರನ್ನು ಯಕಃಶ್ಚಿತ್ ಸೆಳೆದುಕೊಳ್ಳುವ ತಂತ್ರಗಾರಿಕೆಗಳು ಅವರಲ್ಲಿರಲಿಲ್ಲ. ಅವರಲ್ಲಿದ್ದ ತಾರತಮ್ಯ ನೀತಿ ಮೊದಲೇ ಏಟು ತಿಂದಿದ್ದ ಬಿಜೆಪಿಗೆ ಗಾಯದ ಮೇಲೆ ಬರೆ ಎಳೆದ ಹಾಗಿತ್ತು. ಸಾಕಷ್ಟು ಗೊಂದಲದಲ್ಲಿದ್ದ ಬಿಜೆಪಿ ತನ್ನ ಎಡವಟ್ಟು ನಿಧರ್ಾರಗಳಿಂದ ದೊಡ್ಡ ಏಟನ್ನೇ ತಿಂದಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಹಾಗಂತ ವಿಧಾನಸಭೆ ಚುನಾವಣೆಗೂ ಮುನ್ನ ಯಡಿಯೂರಪ್ಪನವರ ಮನವೊಲಿಸುವ ಪ್ರಯತ್ನ ನಡೆದಿರಲಿಲ್ಲ ಎಂದೇನಿಲ್ಲ. ಅರುಣ್ ಜೇಟ್ಲಿ ಸೇರಿದಂತೆ ಹಲವು ನಾಯಕರು ಯಡಿಯೂರಪ್ಪನವರ ಜೊತೆ ಮಾತನಾಡಿದ್ದರು. ಆದರೆ ಹಠವಾದಿ ಯಡಿಯೂರಪ್ಪ ಇವರ್ಯಾರಿಗೂ ಸೊಪ್ಪು ಹಾಕಲಿಲ್ಲ. ಹಾಗಾಗಿ ಇದರಿಂದ ವ್ಯಾಪಕ ಪರಿಣಾಮವನ್ನು ಬಿಜೆಪಿ ಎದುರಿಸಬೇಕಾಯಿತು. ಮುಂದೆ ಯಡಿಯೂರಪ್ಪ ಲೋಕಸಭೆ ಚುನಾವಣೆಯ ವೇಳೆ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡರು. ಮೋದಿ ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ರಾಜ್ಯದಿಂದ ಮೊದಲು ಧ್ವನಿಯೆತ್ತಿದವರೇ ಯಡಿಯೂರಪ್ಪ. ಈ ಅವಧಿಯಲ್ಲಿ ಕೆಜೆಪಿಯನ್ನು ಬದಿಗಿಟ್ಟು ಬಿಜೆಪಿಗೆ ವಾಪಾಸಾದರು. ಅತ್ತ ದೇಶದಲ್ಲೆಲ್ಲ ಮೋದಿ ಅಲೆ ವಕರ್ೌಟ್ ಆಗಿ ಅವರು ಪ್ರಧಾನಿಯಾದರು. ಆದರೆ ಯಡಿಯೂರಪ್ಪ ಬಿಜೆಪಿಗೆ ವಾಪಾಸಾಗಿದ್ದು ಮಾತ್ರ ಎಳ್ಳಷ್ಟು ಪ್ರಯೋಜನವಾಗಲಿಲ್ಲ. ನಾಮಕಾವಸ್ತೆ ಅವರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಸ್ಥಾನವನ್ನು ಕೊಟ್ಟು ಸುಮ್ಮನೆ ಕೂರಿಸಲಾಯಿತು. ಆ ಕಾರಣದಿಂದ ಯಡಿಯೂರಪ್ಪನವರೊಳಗಿದ್ದ ನಾಯಕ ತಣ್ಣಗಾಗಿದ್ದ. ಪುಟಿಯಲು ಅವಕಾಶವೇ ಸಿಗದಂತಹ ಪರಿಸ್ಥಿತಿ. ಅಟ್ಲಿಸ್ಟ್ ಶೋಭಾ ಕರಂದ್ಲಾಜೆ ಘರ್ಜಿಸಿದ್ದಷ್ಟು ಇವರು ಘರ್ಜಿಸಲಿಲ್ಲ. ಅತ್ತ ಕೇಂದ್ರ ಸರ್ಕಾರಕ್ಕೆ ಅಧಿಕಾರಕ್ಕೆ ಬಂದು ಎರಡು ವರ್ಷ ಮುಗಿಯುವ ಮುನ್ನವೇ ಅಲೆ ಹೋಗಿ ಬೆಲೆ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದೆ. ಹಲವು ರಾಜ್ಯಗಳ ಪ್ರಾದೇಶಿಕ ಚುನಾವಣೆಗಳಲ್ಲಿ ಬಿಜೆಪಿಯ ಸೋಲಿನ ಪರ್ವ ಮುಂದುವರಿದಿದೆ. ಅದರಲ್ಲೂ ಬಿಹಾರದಲ್ಲಾದ ಸೋಲಿನಿಂದ ಬಿಜೆಪಿ ಕಲಿತದ್ದು ಅತಿದೊಡ್ಡ ಪಾಠ.

ಬಿಹಾರ ಸೋಲಿನಿಂದ ಬಿಜೆಪಿ ಕಲಿತದ್ದು ಸಣ್ಣ ಪಾಠವಲ್ಲ. ಯಾವುದೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಲು ಸ್ಥಳೀಯ ನಾಯಕರ ಸಾರಥ್ಯ ಬೇಕು. ಕೇಂದ್ರದ ನಾಯಕರ ಬೇಳೆ ಪ್ರಾದೇಶಿಕ ವಲಯದಲ್ಲಿ ಬೇಯುವುದಿಲ್ಲ ಎಂಬ ಹಕೀಕತ್ತು ಬಿಜೆಪಿಗೆ ಅರ್ಥವಾಗಿದೆ. ಹಾಗಾಗಿ ಸ್ಥಳೀಯ ಬಲಾಢ್ಯ ನಾಯಕರಿಗೆ ಹೆಚ್ಚಿನ ಜವಬ್ಧಾರಿ ವಹಿಸುವ ನಿರ್ಧಾರಕ್ಕೆ ಬಂದಿತ್ತು. ಕರ್ನಾಟಕ ರಾಜ್ಯ ಬಿಜೆಪಿಯ ವಿಚಾರಕ್ಕೆ ಬಂದರೇ ಅದಕ್ಕೆ ಯಡಿಯೂರಪ್ಪನವರಿಗಿಂತ ಪರ್ಯಾಯ ನಾಯಕ ಕಾಣಿಸಲಿಲ್ಲ. ಹಾಗಾಗಿ ಸೂಕ್ತ ಸಮಯಕ್ಕಾಗಿ ಕೇಂದ್ರ ಬಿಜೆಪಿ ನಾಯಕರು ಕಾಯುತ್ತಿದ್ದರು. ಯಡಿಯೂರಪ್ಪ ರಾಜ್ಯ ರಾಜಕಾರಣದಿಂದ ಸಂಪೂರ್ಣ ವಿಮುಖರಾಗಿದ್ದರು. ಅವರ ಮೇಲಿದ್ದ ಕೇಸುಗಳೇ ಅವರ ನಾಯಕತ್ವವನ್ನು ಕಸಿದುಕೊಂಡಿತ್ತು. ನೇರವಾಗಿ ಹೇಳಬೇಕೆಂದರೇ ರಾಜಕಾರಣದ ಎಡರುತೊಡರುಗಳ ಬಗ್ಗೆ ಪ್ರತಿಕ್ರಿಯಿಸಲು ಅವರು ನೈತಿಕ ಶಕ್ತಿಯನ್ನೇ ಕಳೆದುಕೊಂಡಿದ್ದರು. ಏಕೆಂದರೇ ಅಕ್ರಮ ಡಿನೋಟಿಫಿಕೇಶನ್ ಕೇಸು ಅವರ ನಾಲಿಗೆಗೆ ಕಡಿವಾಣ ಹಾಕಿತ್ತು. ಏನಾದರೂ ಮಾತಾಡಿದರೇ, `ಅವರೇನು ಲೆಜೆಂಡಾ, ಅವರದ್ದೇ ದೊಡ್ಡ ಕಥೆ’ ಎಂಬರ್ಥದಲ್ಲಿ ವಾಪಾಸು ಪ್ರತಿಕ್ರಿಯೆ ಸಿಗುತ್ತಿತ್ತು. ಹಾಗಾಗಿ ಅವರು ರಾಜ್ಯ ಹೊತ್ತಿ ಉರಿದರೂ ಮಾತನಾಡಲು ಹೋಗುತ್ತಿರಲಿಲ್ಲ. ಈ ಹೊತ್ತಿಗೆ ಹತ್ತಾರು ಯಡಿಯೂರಪ್ಪನವರನ್ನು ಮೀರಿಸುವಂತೆ ಈಶ್ವರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಅಸಂಬದ್ಧ ಹೇಳಿಕೆ ನೀಡುತ್ತಾ ಹೋದರು. ಇದು ರಾಜ್ಯ ಬಿಜೆಪಿಯ ವಿನಾಶವನ್ನು ಮತ್ತಷ್ಟು ಪುಷ್ಟಿಕರಿಸುತ್ತಿತ್ತು.

ಈ ಬೆಳವಣಿಗೆ ಸಹಜವಾಗಿಯೇ ಕೇಂದ್ರ ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿತ್ತು. ಹೇಗಾದರೂ ರಾಜ್ಯ ಬಿಜೆಪಿಯನ್ನು ಸರಿಪಡಿಸಬೇಕಲ್ಲ ಎಂದುಕೊಳ್ಳುತ್ತಿದ್ದ ಕೇಂದ್ರ ನಾಯಕರಿಗೆ ಯಡಿಯೂರಪ್ಪ ಹೊರತುಪಡಿಸಿದರೇ ಬೇರ್ಯಾರು ಪ್ರಭಾವಿ ನಾಯಕರು ಎನಿಸಲಿಲ್ಲ. ರಾಜ್ಯ ಬಿಜೆಪಿಯನ್ನು ಸಂಪೂರ್ಣವಾಗಿ ಆರ್. ಅಶೋಕ್ ಕೈಲಿಟ್ಟರೂ ಯಕಃಶ್ಚಿತ್ ಬಿಬಿಎಂಪಿ ಚುನಾವಣೆಯಲ್ಲಿ ಕೈಗೆ ಬಂದ ತುತ್ತನ್ನು ಬಾಯಿಗೆ ಹಾಕಿಕೊಳ್ಳುವಲ್ಲಿ ಅವರು ಎಡವಿದರು. ಅದೇ ಅವರ ಜಾಗದಲ್ಲಿ ಯಡಿಯೂರಪ್ಪ ಇದ್ದಿದ್ದರೇ ಬಿಬಿಎಂಪಿಯನ್ನು ಬಿಜೆಪಿ ತನ್ನ ತೆಕ್ಕೆಗೆ ಆರಾಮಾಗಿ ಹಾಕಿಕೊಳ್ಳುತ್ತಿತ್ತು ಎನ್ನಲಾಯಿತು. ಆದರೆ ಅಚ್ಛೇದಿನ್ ಅಜೆಂಡಾದೊಂದಿಗೆ ಅಖಾಢಕ್ಕಿಳಿದಿರುವ ಮೋದಿಗೆ ಕಳಂಕ ಹೊತ್ತಿರುವವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವ ಮನಸ್ಸಿರಲಿಲ್ಲ. ಹಾಗಾಗಿ ಯಡಿಯೂರಪ್ಪ ಅವರಿಂದ ಮೋದಿ ಗಾವುದ ಕಾಯ್ದುಕೊಂಡರು. ಯಾವುದೇ ಸಂದರ್ಭದಲ್ಲೂ ಅವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವ ಪ್ರಯತ್ನ ಮಾಡಲಿಲ್ಲ. ಹಾಗಾಗಿ ಯಡಿಯೂರಪ್ಪ ಕೂಡ ಸುಮ್ಮನಾದರು. ಆದರೆ ಕೋರ್ಟ್ ಅವರಿಗೆ ಅಕ್ರಮ ಡಿನೋಟಿಫಿಕೇಶನ್ ಕೇಸಿನಿಂದ ಮುಕ್ತಿ ಕೊಟ್ಟಿದ್ದೇ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಯಾಗಿತ್ತು. ತೆರೆಮರೆಯಲ್ಲಿದ್ದ ಯಡಿಯೂರಪ್ಪ ಮೋದಿಯವರ ಜೊತೆ ಕಾಣಿಸಿಕೊಂಡಿದ್ದರು. ಸಂವಿಧಾನದ ದಿನ ಕುರಿತು ಲೋಕಸಭೆಯಲ್ಲಿ ನಡೆದ ಸಭೆಗೆ ಆಗಮಿಸಿದ್ದ ಯಡಿಯೂರಪ್ಪ ಅವರನ್ನು ಮೋದಿ ಆಲಂಗಿಸಿ ಬೆನ್ನು ತಟ್ಟಿದ್ದು, ಅವರ ಶರ್ಟ್ ಮೇಲಿದ್ದ ಹುಳವನ್ನು ಕೊಡವಿದ್ದು- ಈ ಆತ್ಮಿಯತೆಗಳು ಯಡಿಯೂರಪ್ಪ ಸೇರಿದಂತೆ ಬಿಜೆಪಿಗೆ ಅಚ್ಛೇದಿನ್ ತರುತ್ತಾ..? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಏಕೆಂದರೇ ಇಲ್ಲಿಯವರೆಗೂ ಕೇಂದ್ರ ನಾಯಕರ ನೆರಳನ್ನೂ ಸೋಕಿಸಿಕೊಳ್ಳದಿದ್ದ ಯಡಿಯೂರಪ್ಪ ಕೇಸಿನಿಂದ ಕ್ಲೀನ್ಚಿಟ್ ಸಿಕ್ಕಿದ ಕೂಡಲೇ ಮೋದಿಯನ್ನು ಆಲಂಗಿಸಿದ್ದರು ಎಂದರೇ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುವುದು ಬಹುತೇಕ ಖಚಿತವೆನ್ನಲಾಯಿತು. ಬಿಜೆಪಿ ಮತ್ತೊಮ್ಮೆ ಪುಟಿಯಲು ಯಡಿಯೂರಪ್ಪನವರಂತ ನಾಯಕರ ಅಗತ್ಯವಿತ್ತು. ಹಾಗಾಗಿಯೇ ಅವರಿಗೆ ಮತ್ತೆ ರಾಜ್ಯಾಧ್ಯಕ್ಷಪಟ್ಟ ಕಟ್ಟಲಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ನಿರ್ನಾಮ ಮಾಡಿಯೇ ಸಿದ್ದ ಎಂದು ಶಪಥವನ್ನೂ ಮಾಡಿದ್ದಾರೆ.

ಅದಕ್ಕೆ ತಕ್ಕಂತೆ ಕಾಂಗ್ರೆಸ್ ಅದ್ವಾನವೆದ್ದು ಕೂತಿದೆ. ಇದು ಬಿಜೆಪಿ ಹೈಕಮಾಂಡ್ ಗೆ ಸಂತಸ ತರಿಸಿದರೇ, ಕಾಂಗ್ರೆಸ್ ಗೆ ಧರ್ಮ ಸಂಕಷ್ಟಕ್ಕೀಡುಮಾಡಿದೆ. ಆದರೆ ಸಿದ್ದರಾಮಯ್ಯನವರ ಮೇಲೆ ಆರೋಪಗಳ ಸುರಿಮಳೆಯಾಗುತ್ತಿದ್ದರೂ ಕಾಂಗ್ರೆಸ್ ಹೈಕಮಾಂಡ್ ಸುಮ್ಮನಿರುವುದಕ್ಕೆ ಕಾರಣಗಳಿವೆ. ಆದರೆ ಇನ್ನೆರಡು ವರ್ಷಗಳಲ್ಲಿ ಕಾಂಗ್ರೆಸ್ನಲ್ಲಿ ಚಟುವಟಿಕೆ ಗರಿಗೆದರದಿದ್ದರೇ ದೇಶದಲ್ಲಿ ಅಳಿದುಳಿದ ಜಾಗದಲ್ಲಿ ಒಂದಾಗಿರುವ ಕರ್ನಾಟಕದಲ್ಲೂ ಅಧಿಕಾರವಂಚಿತರಾಗಬಹುದೆಂಬ ಆತಂಕವೂ ಇದೆ. ದಿಗ್ವಿಜಯ್ ಸಿಂಗ್ ಜೊತೆ ಸಿದ್ದರಾಮಯ್ಯ ಚೆನ್ನಾಗಿದ್ದಾರೆ. ಅವರಲ್ಲಿ ಹೊಂದಾಣಿಕೆ ಇರುವುದರಿಂದ ಅವರೇನೆ ತಪ್ಪು ಮಾಡಿದರೂ ಸಿಂಗ್ ಪ್ರಶ್ನಿಸುತ್ತಿಲ್ಲ ಎಂಬ ಆರೋಪವಿತ್ತು. ಇದೀಗ ಹೈಕಮಾಂಡ್ ರಾಜ್ಯದ ಉಸ್ತುವಾರಿಯನ್ನು ಅವರ ಕೈಯಿಂದ ಕಿತ್ತು ಗುಲಾಂ ನಬಿ ಆಜಾದ್ ಅವರಿಗೆ ಕೊಡುವ ನಿರ್ಧಾರಕ್ಕೆ ಬಂದಿದೆ. ಒಂದು ಕಡೆ ಪರಮೇಶ್ವರ್ ಸೈಲೆಂಟಾಗಿ ದೆಹಲಿಗೆ ಹೋಗಿ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕುರಿತು ಸೋನಿಯಾಗಾಂಧಿ ಜೊತೆ ಚರ್ಚಿಸಿದ್ದಾರೆ. ಅಷ್ಟಕ್ಕೂ ಬಿಜೆಪಿಯಲ್ಲಾದ ಕ್ಷಿಪ್ರ ಬೆಳವಣಿಗೆಯಿಂದ ಕಾಂಗ್ರೆಸ್ನಲ್ಲಿ ಆತಂಕ ಶುರುವಾಗಿರುವುದು ಸುಳ್ಳಲ್ಲ. ಖುದ್ದು ಸಿದ್ದರಾಮಯ್ಯನವರೇ ಆರೋಪಕ್ಕೆ ತುತ್ತಾಗುತ್ತಿರುವುದರಿಂದ ಇದು ಪಕ್ಷಕ್ಕೆ ದೊಡ್ಡ ಹಿನ್ನಡೆಯನ್ನುಂಟುಮಾಡುತ್ತಿದೆ. ಒಂದುವೇಳೆ ಅವರನ್ನು ಬದಲಿಸುವ ಪರಿಸ್ಥಿತಿ ಬಂದರೂ ಆ ಬಗ್ಗೆ ಹೈಕಮಾಂಡ್ ಚಿಂತಿಸಬಹುದು. ಹಾಗಂತ ಸಡನ್ನಾಗಿ ನಿರ್ಧಾರಕ್ಕೆ ಬರುವುದು ಕಷ್ಟ. ಏಕೆಂದರೇ ಈ ತೆರನಾದ ಬದಲಾವಣೆಗಳಿಂದ ಪಕ್ಷಕ್ಕೆ ಒಳ್ಳೆಯದು ಆಗಬಹುದು, ಕೆಡುಕು ಆಗಬಹುದು.

ಇಲ್ಲಿ ಪರಿಸ್ಥಿತಿಯ ಬಗ್ಗೆ ಚಿಂತಿಸಬೇಕಿರುವುದು ಖುದ್ದು ಸಿದ್ದರಾಮಯ್ಯ. ತಮ್ಮ ಸಂಪುಟದಲ್ಲಿ ಮಿಕ್ಕವರೆಲ್ಲರೂ ತಟಸ್ಥವಾಗಿರುವಾಗ, ತಾವು ಮಾತ್ರ ಮೇಲಿಂದ ಮೇಲೆ ವಿವಾದಗಳಿಗೆ ಸಿಲುಕುತ್ತಿರುವುದು ಕಾಂಗ್ರೆಸ್ ಭವಿಷ್ಯಕ್ಕೆ ಮಾರಕವಾಗುತ್ತಿದೆ ಎಂಬುದನ್ನು ಅವರು ಅರಿತುಕೊಳ್ಳಬೇಕಿದೆ. ಬಾಕಿಯುಳಿದ ಎರಡುವರ್ಷಗಳಲ್ಲಿ ಕಾಂಗ್ರೆಸ್ನಲ್ಲಿ ಯಾವ ರೀತಿಯಲ್ಲಾದರೂ ಬದಲಾವಣೆ ಕಾಣಿಸಬಹುದು. ತಾವು ಪದಚ್ಯುತರಾದರೇ, ಅಥವಾ ಅಧಿಕಾರದಲ್ಲಿ ಮುಂದುವರಿದರೇ- ಎರಡೂ ಸಾಧ್ಯತೆಗಳ ನಡುವೆಯೂ ಪಕ್ಷವನ್ನು ಕಟ್ಟಿಬೆಳೆಸುವ, ಮುಂದಿನ ಬಾರಿ ಅಧಿಕಾರಕ್ಕೇರಿಸುವ ಗುರುತರ ಜವಬ್ಧಾರಿ ಹೊರಬೇಕು. ಆಗಮಾತ್ರ ಬೆರಳೆಣಿಕೆಯ ರಾಜ್ಯಗಳಲ್ಲಿ ಉಸಿರಾಡುತ್ತಿರುವ ಕಾಂಗ್ರೆಸ್ ಸಂಪೂರ್ಣ ಸಾಯದೇ ಬದುಕುಳಿಯುತ್ತದೆ. ಅದೇನೇ ಲೆಕ್ಕಾಚಾರಗಳನ್ನು ಹಾಕಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಗಿದ್ದ ಯಡಿಯೂರಪ್ಪನವರೇ ಮತ್ತೆ ಕಾಂಗ್ರೆಸ್ ಅವನತಿಗೆ ಕಾರಣವಾದರೇ ಅಚ್ಚರಿಯೇನಿಲ್ಲ. ಈ ದೇಶದಲ್ಲಿ ಹೆಸರು ಕೆಡಿಸಿಕೊಂಡವರಿಗೆ ಜೈಕಾರ ಹಾಕುವ ಸಂಪ್ರದಾಯಗಳಿರುವುದರಿಂದ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರೂ ಆಗಬಹುದು. ಹೀಗಿರುವಾಗ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ತಾಳುವ ನಿಲುವುಗಳ ಮೇಲೆ ಆ ಪಕ್ಷದ ಭವಿಷ್ಯ ನಿಂತಿದೆ. ಗುಲಾಂ ನಬಿ ಆಜಾದ್ ರಾಜ್ಯದ ಉಸ್ತುವಾರಿವಹಿಸಿಕೊಂಡಮೇಲೆ ಅವರು ಮೊದಲು ಮಾಡಬೇಕಾದ ಕೆಲಸ ಪಕ್ಷದೊಳಗಿನ ಭಿನ್ನಮತವನ್ನು ನಿವಾರಿಸುವುದು. ಪಕ್ಷದೊಳಗಿರುವ ಅಸಮಾಧಾನವನ್ನು ನಿವಾರಿಸುವುದರ ಜೊತೆಗೆ ಖುದ್ದಾಗಿ ಸಿಎಂ ಮಾಡಿಕೊಳ್ಳುತ್ತಿರುವ ವಿವಾದಗಳಿಗೆ ಅಂತ್ಯ ಹೇಳಬೇಕು. ಇಲ್ಲವೆಂದರೇ ನಡುಗುತ್ತಿರುವ ಕೈ ಪ್ರಾಣ ಕಳೆದುಕೊಳ್ಳುವುದು ಖಾತ್ರಿ.

POPULAR  STORIES :

ಅಲ್ಟ್ರಾ ಮಾಡರ್ನ್ ಡ್ರೆಸ್ ಗೆ ನೋ ಎಂಟ್ರಿ, ತುಂಡುಡುಗೆ ಹಾಕಿಕೊಳ್ಳುವುದನ್ನ ಅಪರಾಧ ಎಂದು ಪರಿಗಣಿಸಲಾಗುತ್ತಂತೆ

ಬುಕ್ಕಿಗಳ ಫೇವರೆಟ್ ಟೀಮ್ ಯಾವುದು ಗೊತ್ತಾ..? ಈ ಬಾರಿಯ ಐಪಿಎಲ್ ಕಪ್ ಗೆಲ್ಲೋದು ಇದೇ ಟೀಮ್ ಅಂತೆ..!

`ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!

ಯೇ ದೋಸ್ತಿ ಹಮ್ ನಹೀ ಚೋಡೆಂಗೆ – ಕಿಚ್ಚ ದಚ್ಚು ಬೆಸ್ಟ್ ಫ್ರೆಂಡ್ಸ್ ಫಾರ್ ಎವರ್

ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲು ಲೈಸೈನ್ಸ್ ಪಡೆಯಬೇಕಂತೆ..!!!

ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,

ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!

ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...