ವಿಶ್ವದ ಪ್ರಮುಖ ಸರ್ಚ್ ಇಂಜಿನ್ & ಈ-ಮೇಲ್ ಪ್ರೋವೈಡರ್ ಗಳಲ್ಲಿ ಒಂದಾದ ಯಾಹೂ ಸಂಸ್ಥೆಯ 50 ಕೋಟಿಗೂ ಅಧಿಕ ಈ ಮೇಲ್ ಐಡಿ, ಪರ್ಸನಲ್ ಇನ್ಫಾರ್ ಮೇಶನ್, ಮಾಹಿತಿಗಳು ಸೋರಿಕೆಯಾಗಿದೆ ಎಂಬ ಅಘಾತಕಾರಿ ಸುದ್ದಿ ಇದೀಗ ಬೆಳಕಿಗೆ ಬಂದಿದೆ. 2014ರ ನಂತರ ಕಂಪನಿಯ ನೆಟ್ವರ್ಕ್‍ನಿಂದ ಹಲವಾರು ಗುಪ್ತ ಮಾಹಿತಿಗಳು ಕಳುವಾಗಿದೆ ಎಂದು ಹೇಳಿರುವ ಯಾಹೂ ಕಂಪನಿಯ ರಕ್ಷಣಾ ಅಧಿಕಾರಿ ಬಾಬ್ ಲಾರ್ಡ್ ಯಾಹೂ ನೆಟ್ವರ್ಕ್‍ನಿಂದ ಹೆಸರು, ಇ-ಮೇಲ್ ಅಡ್ರೆಸ್, ದೂರವಾಣಿ ಸಂಖ್ಯೆ ಇನ್ನು ಮುಂತಾದ ಮಾಹಿತಿಗಳನ್ನು ಕಳವು ಮಾಡಲಾಗಿದೆ ಎಂದು ಲಾರ್ಡ್ ಫ್ಯಾಕ್ಸ್ ನ್ಯೂಸ್‍ಗೆ ವರಧಿ ಮಾಡಿದ್ದಾರೆ.
ತಮ್ಮ ಖಾತೆಯಿಂದ ಕೋಟ್ಯಾಂತರ ಅಕೌಂಟ್‍ಗಳು ಹ್ಯಾಕ್ ಆಗಿದೆ ಎಂದು ಹೇಳಿರುವ ಅವರು, ಇವೆಲ್ಲಾ ಸರಕಾರ ಪ್ರಾಯೋಜಿತ ಎಂದು ಹೇಳಿಕೆ ನೀಡಿದ್ದಾರೆ. ಕಂಪನಿಯ ಅಧಿಕಾರಿಗಳು ಹೇಳಿರುವಂತೆ ಇದರ ತೊಂದರೆಗಳು ತಿಂಗಳುಗಳ ಹಿಂದೆಯೇ ಆಗಿದೆ ಎಂದಿದ್ದಾರೆ. ಇದೀಗ ಹೆಚ್ಚಿ ನಷ್ಟ ಉಂಟಾಬಾರದು ಎಂಬ ಕಾರಣಕ್ಕೆ ಯಾಹೂ ಸಂಸ್ಥೆಯ ಎಲ್ಲಾ ಪಾಸ್‍ವರ್ಡ್‍ಗಳನ್ನು ಬದಲಿಸುವಂತೆ ಸೂಚಿಸಲಾಗಿದೆ. ಈ ಪಾಸ್‍ವರ್ಡ್ ಬಳಸಿ ಯಾಹೂ ಹೊರತುಪಡಿಸಿ ಇತರೆ ವೆಬ್‍ಸೈಟ್‍ಗಳನ್ನು ದುರಪಯೋಗ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಸೈಬರ್ ಹ್ಯಾಕರ್‍ಗಳು ತುಂಬಾ ಮುಂದುವರಿದ ತಂತ್ರಜ್ಞಾನವನ್ನು ಬಳಸಿಕೊಂಡು ಈ ಕೃತ್ಯ ಮಾಡುತ್ತಿದ್ದಾರೆ ಎಂದಿರುವ ಲಾರ್ಡ್ ಯಾಹೂ ಅಕೌಂಟ್ ಹ್ಯಾಕ್ ಮಾಡಿದ್ದ ಪರಿಣಾಮವಾಗಿ ಸಂಸ್ಥೆಗೆ 4.8 ಬಿಲಿಯನ್ ಡಾಲರ್ ವ್ಯವಹಾರದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
Like us on Facebook The New India Times
POPULAR STORIES :
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!
ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?
ಕಾವೇರಿಗಾಗಿ ಮಣ್ಣು ತಿಂದು ವಿನೂತನ ಪ್ರತಿಭಟನೆ..!
ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!
ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!
ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!