ರಾಕಿಂಗ್ ಸ್ಟಾರ್ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಶೂಟಿಂಗ್ ನಡೀತಾ ಇದೆ…! ಅಷ್ಟರಲ್ಲಿಯೇ ಯಶ್ ಮತ್ತೊಂದು ಸಿನಿಮಾದಲ್ಲಿ ನಟಿಸ್ತಿದ್ದಾರೆ ಅಂತ ಅಂದುಕೊಳ್ಳಬೇಡಿ. ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ತಾ ಇರೋದು ಕೆಜಿಎಫ್ ಚಿತ್ರದಲ್ಲೇ ಅಂತೆ…!
ಕೆಜಿಎಫ್ ಅತ್ಯಂತ ದೊಡ್ಡ ಬಜೆಟ್ ನ ಸಿನಿಮಾ ಆಗಿದೆ. ಈ ಬಹುನಿರೀಕ್ಷಿತ ಚಿತ್ರವು ಕೋಲಾರದ ಗಣಿ ಮಾಫಿಯಾದ ಕುರಿತ ಸಿನಿಮಾ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳುತ್ತಿದ್ದಾರೆ ಎಂಬುದು ನಿಮಗೆ ಈಗಾಗಲೇ ಗೊತ್ತಿದೆ. ಇದೀಗ ಇನ್ನೊಂದು ಹೊಸ ವಿಷ್ಯ ಕೇಳಿಬಂದಿದ್ದು, ಯಶ್ ವಿಭಿನ್ನ ಶೇಡ್ ಗಳಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗ್ತಿದೆ. 70ರ ದಶಕದ ಯಶ್ ಹಾಗೂ ಈಗಿನ ಯಶ್ ಇಬ್ಬರೂ ಕೂಡ ಚಿತ್ರದಲ್ಲಿ ಇರುತ್ತಾರಂತೆ…!