ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರಕ್ಕಾಗಿ ಬೆಳೆಸಿದ್ದ ಗಡ್ಡಕ್ಕೆ ಕೊನೆಗೂ ಕತ್ತರಿ ಬಿದ್ದಿದೆ.
ಹೆಚ್ಚು ಕಡಿಮೆ 2ವರ್ಷದಿಂದ ಕೆಜಿಎಫ್ ಚಿತ್ರೀಕರಣ ನಡೆಯುತ್ತಿತ್ತು. ಸಿನಿಮಾ ಚಿತ್ರೀಕರಣ ಮುಗಿಯದ ತನಕ ಗಡ್ಡ ಬಿಟ್ಟಿರುವುದು ಅನಿವಾರ್ಯವಾಗಿತ್ತು. ಆದ್ದರಿಂದ ಯಶ್ ಗಡ್ಡಕ್ಕೆ ಕತ್ತರಿ ಹಾಕಿರ್ಲಿಲ್ಲ.
ಯಶ್ ಅವರನ್ನು ಮತ್ತೆ ಕ್ಯೂಟೆಸ್ಟ್ ಲುಕ್ ನಲ್ಲಿ ನೋಡಲು ಪತ್ನಿ ರಾಧಿಕಾ ಪಂಡಿತ್ ಮಾತ್ರವಲ್ಲದೆ ಸಾಕಷ್ಟು ಮಂದಿ ಹುಡುಗಿಯರು ಕಾಯ್ತಾ ಇದ್ದರು.
ಈಗ ಮೈ ನೇಮ್ ಈಸ್ ಕಿರಾತಕ ಚಿತ್ರಕ್ಕಾಗಿ ಲುಕ್ ಚೇಂಜ್ ಆಗಿದೆ.ರ್ಯಾಂಬೋ 2 ಸಿನಿಮಾ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ ಚಿತ್ರ ಮೈ ನೇಮ್ ಈಸ್ ಕಿರಾತಕ. ಜಯಣ್ಣ ಭೋಗೇಂದ್ರ ಈ ಕಿರಾತಕನಿಗೆ ಬಂಡವಾಳ ಹಾಕುತ್ತಿದ್ದಾರೆ. ಯಶ್ ಇದೇ ಲುಕ್ ನಲ್ಲಿ ಕಿರಾತಕ ಕಾಣಿಸಿಕೊಳ್ಳುತ್ತಿದ್ದಾರೆ.