ಮತ್ತೆ ಮೋಡಿ ಮಾಡುತ್ತಾ ಯಶ್ – ಕೃತಿ ಜೋಡಿ? ಗೂಗ್ಲಿ ಬೆಡಗಿ ಇಟ್ಟ ಆ ಬೇಡಿಕೆ ಏನು?

Date:

ರಾಕಿಂಗ್ ಸ್ಟಾರ್ ಯಶ್ ಮತ್ತು ಕೃತಿ‌ ಕರಬಂಧ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ಗೂಗ್ಲಿ. 2013 ರಲ್ಲಿ ತೆರೆಕಂಡ ಗೂಗ್ಲಿ ಎವರ್ ಗ್ರೀನ್ ಸಿನಿಮಾ…!‌ ಈ ಸೂಪರ್ ಹಿಟ್ ಸಿನಿಮಾ ಜೋಡಿ ಮತ್ತೆ ತೆರೆ ಮೇಲೆ ಬರುತ್ತಾ? ಯಶ್ ಮತ್ತು ಕೃತಿ ಅರ್ಥಾತ್ ಗೂಗ್ಲಿಯ ಶರತ್ ಮತ್ತು ಸ್ವಾತಿ ಮತ್ತೆ ತೆರೆಮೇಲೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಾರಾ ಎಂಬ ಕುತೂಹಲ ಹಾಗೂ ಚರ್ಚೆ ಹುಟ್ಟುಕೊಂಡಿದೆ. ಇದೀಗ ಈ ವಿಷಯ ಮುನ್ನೆಲೆಗೆ ಬರಲು ಕಾರಣ ಬೇರೆ ಯಾರೂ ಅಲ್ಲ ಸ್ವತಃ ಕೃತಿಕರಬಂಧ..!

ಸದ್ಯ ಬಾಲಿವುಡ್ ನಲ್ಲಿ ಬ್ಯುಸಿ ಆಗಿರೋ ಬ್ಯುಟಿ ಕೃತಿ ಗೂಗ್ಲಿ ಸಿನಿಮಾದಿಂದ ಕನ್ನಡಿಗರ ಮನಗೆದ್ದರು.‌ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.‌ ಅವರೀಗ ಮತ್ತೆ ಕನ್ನಡದಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ತಮ್ಮ ಹೆಬ್ಬಯಕೆಯನ್ನು ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಮುಂದಿಟ್ಟಿದ್ದಾರೆ.

ಪವನ್ ಒಡೆಯರ್ ಗೂಗ್ಲಿ ಸಿನಿಮಾದ ಮೇಕಿಂಗ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸಿನಿಮಾದ ಮೇಕಿಂಗ್ ವಿಡಿಯೋವನ್ನು ಎಲ್ಲಿಯೂ ಶೇರ್ ಮಾಡಿರಲಿಲ್ಲ. ಆದರೀಗ ವಿಡಿಯೋ ಸಿಕ್ಕಿದ್ದು ಅದನ್ನು ಹಂಚಿಕೊಂಡಿರುವ ಅವರು, ” ಓ ಮೈ ಗಾಡ್, ವಿಡಿಯೋ ಸಿಕ್ಕಿದೆ. ಗೂಗ್ಲಿ ಸಿನಿಮಾದ ಹಾಡಿನ ಮೇಕಿಂಗ್. ಈ ಮೊದಲು ಈ ವಿಡಿಯೋವನ್ನು ಎಲ್ಲಿಯೂ ಶೇರ್ ಮಾಡಿಲ್ಲ. ಅದ್ಭುತವಾದ ನೆನಪು” ಎಂದು ಬರೆದು‌ ಯಶ್ ಮತ್ತು ಕೃತಿಗೆ ಟ್ಯಾಗ್ ‌ಮಾಡಿದ್ದಾರೆ.‌
ಆ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಕೃತಿ, ” ಮತ್ತೆ ನನ್ನನ್ನು ವಾಪಸ್ ಕರೆಸಿಕೊಳ್ಳಿ. ಈ ರೀತಿಯ ಸಿನಿಮಾವನ್ನು ಮತ್ತೆ ಮಾಡೋಣ’ ಎಂದು ಬರೆದು,ಲವ್ ಸಿಂಬಲ್ ಇಮೋಜಿ ಹಾಕಿದ್ದಾರೆ.‌
ಕೃತಿ ಮಾತ್ರವಲ್ಲದೆ ಅಭಿಮಾನಿಗಳು ಕೂಡ‌ ಇಂಥಾ ಸಿನಿಮಾ‌ ಮಾಡುವಂತೆ ಮನವಿ ಮಾಡಿ ಕಾಮೆಂಟ್ ‌ಮಾಡುತ್ತಿದ್ದಾರೆ.‌ಶರತ್ ಮತ್ತು ಸ್ವಾತಿ ಪಾತ್ರ ಕಣ್ತುಂಬಿಕೊಳ್ಳುವ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಕೃತಿ ಮತ್ತು ಅಭಿಮಾನಿಗಳ ಆಸೆ‌‌‌ ಈಡೇರುತ್ತಾ ಎಂಬುದು ಸದ್ಯದ ಕುತೂಹಲ.

Share post:

Subscribe

spot_imgspot_img

Popular

More like this
Related

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ. ಶಿವಕುಮಾರ್

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ....

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ ಬೆಂಗಳೂರು: ಕರಾವಳಿ ಹಾಗೂ...

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...