ಸಲಾರ್ ಮುಹೂರ್ತಕ್ಕೆ ಕರೆಸಿ ಯಶ್ ಗೆ ಅವಮಾನ ಮಾಡಿದ್ರಾ?!

Date:

ನಿನ್ನೆ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ರೆಡಿಯಾಗುತ್ತಿರುವ ಸಲಾರ್ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಕೆಜಿಎಫ್ ಚಿತ್ರಕ್ಕೆ ಬಂಡವಾಳ ಹೂಡಿದ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಲಾರ್ ಚಿತ್ರ ತಯಾರಾಗುತ್ತಿದೆ. ನೆನ್ನೆ ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ಅತಿಥಿಯಾಗಿ ಕರೆಸಲಾಗಿತ್ತು.

 

 

ಹೊಂಬಾಳೆ ಫಿಲಂಸ್ ಅಡಿಯಲ್ಲಿ ಕೆಲಸ ಮಾಡಿರುವ ಯಶ್ ಅವರನ್ನು ತಮ್ಮ ಮುಂದಿನ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಯಶ್ ಅವರನ್ನು ಕರೆಸಲಾಗಿತ್ತು. ಪ್ರಶಾಂತ್ ನೀಲ್, ಪ್ರಭಾಸ್ ಮತ್ತು ಯಶ್ ಅವರು ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಕನ್ನಡ ಮತ್ತು ತೆಲುಗಿನ ಇಬ್ಬರು ನಟರಾದ ಯಶ್ & ಪ್ರಭಾಸ್ ಒಟ್ಟಿಗೆ ಇರುವ ಫೋಟೋಗಳು ಅತಿ ವೇಗವಾಗಿ ಸಾಮಾಜಿಕ ಜಾಲತಾಣದ ಪೂರ್ತಿ ರಾರಾಜಿಸಿದವು.

 

 

ಇನ್ನು ಕಾರ್ಯಕ್ರಮವೆಲ್ಲಾ ಮುಗಿದಮೇಲೆ ನಟ ಪ್ರಭಾಸ್ ಅವರು ಮುಹೂರ್ತ ಸಮಾರಂಭದ ಕುರಿತು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದರು. ಆದರೆ ಇಲ್ಲಿ ಯಶ್ ಅವರ ಜೊತೆ ಇರುವ ತಮ್ಮ ಪೋಟೋವನ್ನು ಅಪ್ಲೋಡ್ ಮಾಡಿಲ್ಲ..!! ಯಶ್ ಅವರ ಜೊತೆ ಇರುವ ಫೋಟೋವನ್ನು ಹೊರತುಪಡಿಸಿ ಮಿಕ್ಕಿದ ಫೋಟೋಗಳನ್ನು ಮಾತ್ರ ಪ್ರಭಾಸ್ ಅವರು ತಮ್ಮ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅತಿಥಿಯಾಗಿ ಹೋಗಿದ್ದ ಯಶ್ ಅವರ ಫೋಟೋವನ್ನು ಬಿಟ್ಟು ಕೇವಲ ತಮ್ಮ ಮತ್ತು ನಿರ್ದೇಶಕ ನಿರ್ಮಾಪಕರ ಫೋಟೋಗಳನ್ನು ಮಾತ್ರ ಪ್ರಭಾಸ್ ಅವರು ಹಂಚಿಕೊಂಡಿದ್ದು ಎಷ್ಟು ಸರಿ?

 

 

ಯಶ್ ರಂತಹ ನಟ ಅತಿಥಿಯಾಗಿ ಅಷ್ಟು ದೂರ ಹೋಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದಮೇಲೆ ಅವರ ಫೋಟೋವನ್ನು ಸಹ ಪ್ರಭಾಸ್ ಅವರು ಹಂಚಿಕೊಳ್ಳಬೇಕಿತ್ತು. ಪ್ರಭಾಸ್ ಯಶ್ ಜೊತೆ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ, ಆದರೆ ಫೋಟೋವನ್ನ ಮಾತ್ರ ಪ್ರಭಾಸ್ ಅವರು ಅಪ್ಲೋಡ್ ಮಾಡಲೇ ಇಲ್ಲ.. ಇನ್ನು ಈ ವಿಷಯ ಇದೀಗ ಯಶ್ ಅಭಿಮಾನಿಗಳಿಗೆ ನಿರಾಸೆಯನ್ನು ಉಂಟುಮಾಡಿದೆ. ಕನ್ನಡ ಚಿತ್ರ ಅಭಿಮಾನಿಗಳು ಪ್ರಭಾಸ್ ನಡೆ ವಿರುದ್ಧ ಕಿಡಿಕಾರಿದ್ದಾರೆ. ಕನ್ನಡ ನಟರು ಎಂದರೆ ಕೀಳಾಗಿ ನೋಡುವುದನ್ನ ಬಿಡಿ ಎಂಬ ಮಾತುಗಳನ್ನು ಆಡುತ್ತಿದ್ದಾರೆ..

Share post:

Subscribe

spot_imgspot_img

Popular

More like this
Related

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು ಬೆಂಗಳೂರು: ವಾಲ್ಮೀಕಿ...

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ:...

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ ಚಿತ್ರದುರ್ಗ:...