ಯಶ್ ರಾಧಿಕಾ ಲವ್ ಶುರುವಾಗಿದ್ದು ಹೇಗೆ ಅಂತ ಸತೀಶ್ ಹೇಳ್ತಾರೆ ಕೇಳಿ..!

admin
By admin
2 Min Read

ಈಗಾಗ್ಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರದ್ದು 10 ವರ್ಷಗಳ ನಂಟು.. ಒಂದೇ ವಾಹಿನಿಯಲ್ಲಿನ ವೃತ್ತಿ ಆರಂಭಿಸಿದ ಇವರು ಒಂದೇ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್ ಎಂಟ್ರಿ ಕೊಟ್ಟವರು. ಹೀಗೆ ಇವರಿಬ್ಬರ ಒಡನಾಟ ಯಾಗಿಗೂ ಗೊತ್ತಾಗದಂತೆ ಸೀಕ್ರೇಟ್ ಆಗಿ ನಡೀತಾ ಇತ್ತು..! ಯಾವಾಗ ಇಬ್ರೂ ಮದ್ವೆ ಮಾಡ್ಕೊಳ್ಳೊಕೆ ನಿರ್ಧಾರ ಮಾಡ್ಕೊಂಡ್ರೋ ಆಗ್ಲೆ ನೋಡಿ ಗಾಂಧಿ ನಗರದಲ್ಲಿ ಹರಿದಾಡ್ತಾ ಇದ್ದ ಇವರಿಬ್ಬರ ಗಾಸಿಪ್ ಹೊರ ಬಂದಿದ್ದು..! ಆದ್ರೆ ಇವರಿಬ್ರು ತಮ್ಮ ಲವ್ ಸ್ಟೋರಿಯನ್ನ ಎಲ್ಲರೊಂದಿಗೂ ಹೇಳಿ ಕೊಂಡಿದ್ದಾರೆಯೇ ವಿನಃ, ಇವರ ಲವ್ ಪ್ರಪೋಸಲ್ ಹೇಗಿತ್ತು ಅಂತ ಇವ್ರಿಬ್ರು ಎಲ್ಲೂ ಹೇಳ್ಕೊಂಡಿಲ್ಲ.. ಆದ್ರೆ ಆ ಇಂಟ್ರಸ್ಟಿಂಗ್ ಕಹಾನಿನ ನಟ ನಿನಾಸಂ ಸತೀಶ್ ಬಿಚ್ಚಿಟ್ಟಿದ್ದಾರೆ ನೋಡಿ..!
ಯಶ್ ಹಾಗೂ ರಾಧಿಕಾ ಪಂಡಿತ್‍ರದ್ದು 5 ವರ್ಷಗಳ ಲವ್ ಅಂತೆ..! ಇವರಿಬ್ಬರ ಪ್ರೀತಿ ಹೇಳ್ಕೊಂಡಿದ್ದು ಮಾತ್ರ ಡ್ರಾಮಾ ಸಿನೆಮಾ ಮಾಡ್ವಾಗ..! ಇವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿ ಮಾಡ್ತಾ ಇದ್ರೂ ಕೂಡ ನೇರವಾಗಿ ಹೇಳ್ಕೊಂಡಿರ್ಲಿಲ್ಲ.. ಬದ್ಲಾಗಿ ಯಶ್ ರಾಧಿಕಾ ಬಗ್ಗೆ ರಾಧಿಕಾ ಯಶ್ ಬಗ್ಗೆ ನನ್ನ ಬಳಿ ಹೇಳಿಕೊಳ್ತಾ ಇದ್ರು ಅಂತಾರೆ ಸತೀಶ್..! ಹೀಗಾಗಿ ಯಶ್ ಹಾಗೂ ರಾಧಿಕಾ ಅವರ ಲವ್ವಿ-ಡವ್ವಿ ವಿಷಯ ಮೊದಲು ಗೊತ್ತಾಗಿದ್ದೇ ಸತೀಶ್ ಅವರಿಗಂತೆ..! ಇಬ್ಬರೂ ಬಂದು ನನಗೆ ಪ್ರೀತಿಯ ವಿಷಯ ಹೇಳ್ತಾ ಇರ್ವಾಗ ನನಗೊಂತರಾ ಥ್ರಿಲ್ಲಿಂಗ್ ಆಗ್ತಾ ಇತ್ತು ಈ ವೇಳೆ ಅವರಿಬ್ಬರಿಗೂ ಕೆಲವೊಂದು ಲವ್ ಟಿಪ್ಸ್ ಕೊಡ್ತಾ ಇದ್ದೆ ಅಂತಾರೆ.. ಯಶ್ ರಾಧಿಕಾಗೆ ಡೈರೆಕ್ಟ್ ಪ್ರಪೋಸ್ ಮಾಡಿದ್ದು ಡ್ರಾಮಾ ಸಿನೆಮಾ ಮಾಡ್ತಾ ಇರ್ವಾಗ. ಈ ವೇಳೆ ಡ್ರಾಮಾ ಚಿತ್ರೀಕರಣ ಗ್ಯಾಪಲ್ಲಿ ಒಮ್ಮೆ ಕಾರಿನ ಮೇಲೆ ಹೂವಿಟ್ಟು ತನ್ನ ಪ್ರೇಮ ನಿವೇದನೆ ಹೇಳಿಕೊಂಡ್ರಂತೆ ರಾಕಿಂಗ್ ಸ್ಟಾರ್..! ಇನ್ನು ಮನಸಿನಲ್ಲಿದ್ದ ಹುಡುಗನೇ ಡೈರೆಕ್ಟಾಗಿ ಬಂದು ಪ್ರಪೋಸ್ ಮಾಡುದ್ಮೇಲ್ ಆಗೊಲ್ಲಾ ಅನ್ನೋಕಾಗುತ್ತಾ..? ಯಶ್ ಪ್ರಪೋಸಲ್‍ನ ಅಲ್ಲೇ ಒಪ್ಪಿಗೆ ಕೊಟ್ರಂತೆ ರಾಧಿಕಾ..! ಹೀಗೆ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿ ಅದು ಮರವಾಗಿ ಬೆಳೆದು, ಎರಡೂ ಕುಟುಂಬದ ಹೃದಯ ಪೂರ್ವಕ ಒಪ್ಪಿಗೆ ಮೇರೆಗೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ನವದಂಪತಿಗಳಿಗೆ ಹಾರೈಸಿದ್ರು ನಿನಾಸಂ ಸತೀಶ್..

https://www.youtube.com/watch?v=6ZGdtpp6Cj0

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಇವಳು ಜಯಲಲಿತಾ ಮಗಳು ಎಂದು ಸುದ್ದಿ ವೈರಲ್.! ಆದರೆ ಇವರು ಯಾರು ಗೊತ್ತಾ.?

ಸಿನಿಮಾ ಥಿಯೇಟರ್‍ನಲ್ಲಿ ಯುವಕ ಯುವತಿಯರಿಗೆ ಹಿಗ್ಗಾ ಮುಗ್ಗಾ ಥಳಿತ: ಕಾರಣ ಏನ್ ಗೊತ್ತಾ..?

ಐ ಲವ್ ಯು, ಐ ಲವ್ ಯು ಪ್ರಥಮ್ ಎಂದ ಸಂಜನಾ!

ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ ಪಾಕ್ ನಿರೂಪಕಿ..!

ದರ್ಶನ್‍ರನ್ನು ಮದ್ವೆಗೆ ಆಹ್ವಾನ ಮಾಡಿದ್ದೀರಾ ಎಂದು ಕೇಳಿದ ಅಭಿಮಾನಿ: ಯಶ್ ಏನಂದ್ರು ಗೊತ್ತಾ..?

ಮಹಿಳೆಯೊಬ್ಬರ ಕಿವಿಯಿಂದ ಜೀವಂತ ಜಿರಲೆಯನ್ನು ಹೊರತೆಗೆದ ಡಾಕ್ಟರ್..!

Share This Article