ನಮ್ಮ ತಂದೆಯ ಮೇಲೆ ಮಾಡುತ್ತಿರುವ ಎಲ್ಲಾ ಆರೋಪಗಳು ಬೋಗಸ್: ಯತೀಂದ್ರ ಸಿದ್ದರಾಮಯ್ಯ
ಮೈಸೂರು: ನಮ್ಮ ತಂದೆಯ ಮೇಲೆ ಮಾಡುತ್ತಿರುವ ಎಲ್ಲಾ ಆರೋಪಗಳು ಬೋಗಸ್ ಎಂದು ಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಮೇಲೆ ಮಾತನಾಡಲು ಯಾರಿಗೂ ಯಾವ ವಿಚಾರಗಳು ಸಿಗುತ್ತಿಲ್ಲ. ನಮ್ಮ ತಂದೆಯ ಮೇಲೆ ಮಾಡುತ್ತಿರುವ ಎಲ್ಲಾ ಆರೋಪಗಳು ಬೋಗಸ್.
ಎಲ್ಲವುದಕ್ಕೂ ಸುಖಾಸುಮ್ಮನೆ ಆರೋಪಮಾಡುತ್ತಾ ಹೋದರೆ ಹೇಗೆ? ನಮ್ಮ ತಂದೆಯ ರಾಜೀನಾಮೆಯನ್ನ ಸುಖಾ ಸುಮ್ಮನೆ ಕೇಳುತ್ತಿದ್ದಾರೆ. ಅವರು ಯಾಕೆ ರಾಜೀನಾಮೆ ಕೊಡಬೇಕು? ಹೀಗೆ ಸಿಕ್ಕ ಸಿಕ್ಕ ಆರೋಪಗಳಿಗೆಲ್ಲಾ ರಾಜೀನಾಮೆ ಕೊಡುತ್ತಾ ಹೋದರೆ ಅದರಲ್ಲಿ ಅರ್ಥ ಇರುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.