ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಇನ್ನೂ ಬಹುತೇಕ ಪ್ರದೇಶಗಳು ಬೃಹತ್ ಬೆಂಗಳೂರಿನ ಒಳಗೆ ಬರಲು ಇನ್ನೂ ಸಾಧ್ಯವಾಗಿಲ್ಲ. ಅದಕ್ಕಾಗಿ ಎದುರು ನೋಡುತ್ತಿವೆ.
ಯಶವಂತಪುರ ರೈಲು ನಿಲ್ದಾಣ ಬರುವುದು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ . ಇಲ್ಲಿನ ಎಪಿಎಂಸಿ ಬರುವುದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ…!
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದಾಗ ಯಶವಂತಪುರ ವಿಧಾನಸಭಾ ಕ್ಷೇತ್ರ ಹುಟ್ಟಿಕೊಂಡಿತು. ಅದಕ್ಕೂ ಮುನ್ನ ಒಂದಿಷ್ಟು ಭಾಗ ಮಾಗಡಿಗೂ , ಒಂದಿಷ್ಟು ಭಾಗ ಉತ್ತರಹಳ್ಳಿ ಕ್ಷೇತ್ರಕ್ಕೂ ಹಂಚಿ ಹೋಗಿತ್ತು.
ದೊಡ್ಡಬಿದರಕಲ್ಲು , ಹೇರೋಹಳ್ಳಿ, ಉಲ್ಲಾಳು, ಕೆಂಗೇರಿ , ಹೆಮ್ಮೆಗೆಪುರ ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
ಈ ಕ್ಷೇತ್ರ ಮೇಲ್ನೋಟಕ್ಕೆ ಮುಂದುವರೆದಿರುವಂತೆ ಕಾಣಿಸುತ್ತಿದ್ದರೂ ಹೇಳಿಕೊಳ್ಳುವ ಅಭಿವೃದ್ಧಿ ಕಂಡಿಲ್ಲ.
ಕಾಂಗ್ರೆಸ್ ನ ಎಸ್ ಟಿ ಸೋಮಶೇಖರ್ ಈ ಕ್ಷೇತ್ರದ ಹಾಲಿ ಶಾಸಕರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನ ಜವರಾಯಿ ಗೌಡರ ವಿರುದ್ಧ (91,280ಮತ) 30, 100 ಮತಗಳ ಅಂತರದಿಂದ ಗೆದ್ದಿದ್ದರು. 2008ರಲ್ಲಿ ಕಾಂಗ್ರೆಸ್ ನಿಂದಲೇ ಸ್ಪರ್ಧಿಸಿದ್ದ ಸೋಮಶೇಖರ್ ಬಿಜೆಪಿಯ ಶೋಭಾ ಕರಂದ್ಲಾಜೆ ಅವರೆದುರು 1082 ಮತಗಳ ಅಂತರದಿಂದ ಸೋತಿದ್ದರು.
ಈ ಕ್ಷೇತ್ರದ ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿಲ್ಲ. ಹೆರೋಹಳ್ಳಿ, ಉಲ್ಲಾಳು, ಕೆಂಗೇರಿ ಮತ್ತು ಹೆಮ್ಮಿಗೆಪುರ ದಲ್ಲಿ ನೀರಿನ ಸಮಸ್ಯೆ ಇದೆ. ಕುಡಿಯಲು ಶುದ್ಧ ನೀರು ಸಿಗ್ತಿಲ್ಲ, ನೀರಿನ ಟ್ಯಾಂಕರ್ ಗಳನ್ನೇ ಅವಲಂಭಿಸ ಬೇಕಾಗಿದೆ ಎಂಬುದು ಜನರ ಆರೋಪ.
ಈ ಬಾರಿ ಬಿಜೆಪಿಯಿಂದ ನಟ ಜಗ್ಗೇಶ್ ಕಣಕ್ಕಿಳಿಯುತ್ತಿದ್ದಾರೆ. ಸೋಮಶೇಖರ್ ಗೆ ಈ ಬಾರಿ ಜಗ್ಗೇಶ್ ಅವರಿಂದ ಪ್ರಬಲ ಪೈಪೋಟಿ ಇದೆ. 2008ರಲ್ಲಿ ಇದೇ ಸೋಮಶೇಖರ್ ಬಿಜೆಪಿಯ ಶೋಭಾ ಕರಂದ್ಲಾಜೆ ಅವರ ಎದುರು ಸೋತಿದ್ದನ್ನು ಸ್ಮರಿಸಬಹುದು.
ಒಮ್ಮೆ ಬಿಜೆಪಿಗೆ ಇನ್ನೊಮ್ಮೆ ಕಾಂಗ್ರೆಸ್ ಗೆ ಒಲಿದ ವಿಜಯಲಕ್ಷ್ಮಿ ಈ ಬಾರಿ ಯಾರಿಗೆ ಒಲಿಯುತ್ತಾಳೆ ಅನ್ನೋದಕ್ಕೆ ಕಾಯಬೇಕಿದೆ.