ದಿನದ ಒಂದೂವರೆ ಗಂಟೆ ನಿಮಗಾಗಿ ಮೀಸಲಿಡಿ

Date:

ಎಲ್ಲರೂ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು ವ್ಯಾಯಾಮ ಮುಖ್ಯ. ದಿನದ ಒಂದೂವರೆ ಗಂಟೆ ನಿಮಗಾಗಿ ಮೀಸಲಿಡಿ ಎಂದು ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಪಂಚಾಯತಿ CEO ಬಿ.ಆರ್ .ಪೂರ್ಣಿಮಾ ಕಿವಿಮಾತು ಹೇಳಿದರು.

ಮೈಸೂರಿನ ಜ್ಯೋತಿನಗರದ ಡಿಎಆರ್ ಮೈದಾನದಲ್ಲಿ 3 ದಿನಗಳ ಕಾಲ ನಡೆದ ಮೈಸೂರು ಜಿಲ್ಲಾ ವಾರ್ಷಿಕ ಕ್ರೀಡಾಕೂಟಕ್ಕೆ ಪಾರಿವಾಳ ಮತ್ತು ಬಲೂನ್ ಹಾರಿಬಿಡುವ ಮೂಲಕ ಚಾಲನೆ ನೀಡಿ, ವಂದನೆ ಸ್ವೀಕರಿಸಿ, ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿದರು.

ನನಗೆ ಪೊಲೀಸ್ ಇಲಾಖೆ ತುಂಬ ಪ್ರಿಯವಾದ ಇಲಾಖೆ. ನಮ್ಮ ಪೋಷಕರು ಆರೋಗ್ಯ ಇಲಾಖೆಯಲ್ಲಿದ್ದರು. ಹಾಗಾಗಿ ನಾನು ಹೆಚ್ಚು ಪ್ರಾಧಮಿಕ ಆರೋಗ್ಯ ಕೇಂದ್ರದ ಕ್ವಾರ್ಟರ್ಸ್ ಗಳಲ್ಲಿ ಬೆಳೆಯಬೇಕಾಯಿತು.

ನನ್ನ ಸಹೋದರರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಪೊಲೀಸ್ ಇಲಾಖೆ ನನಗೆ ಪ್ರಿಯವಾದ ಇಲಾಖೆ. ನನ್ನ ಮಾತೃ ಇಲಾಖೆ ಕಂದಾಯ ಇಲಾಖೆ ಎಂದರು. ಬಳಿಕ ಮಾತನಾಡಿದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಕಾನೂನು ನಿರ್ವಹಣೆ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪೊಲೀಸರು ಹೆಚ್ಚಿನ ಒತ್ತಡದಿಂದ ಕಾರ್ಯನಿರ್ವಹಿಸುತ್ತಿರುತ್ತಾರೆ.

ಈ ದಿಸೆಯಲ್ಲಿ ಕ್ರೀಡೆ ಕೂಡ ಪ್ರಮುಖ ಪಾತ್ರ ವಹಿಸಲಿದೆ. ಆದ್ದರಿಂದ ಇನ್ನೂ ಹೆಚ್ಚಿನ ಕಾರ್ಯಕ್ಷಮತೆ, ದಕ್ಷತೆ, ಮನೋಬಲ, ನೈತಿಕ ಸ್ಥೈರ್ಯ ಹಾಗೂ ದೈಹಿಕ ಆರೋಗ್ಯ ವೃದ್ಧಿಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಅವರ ಕಾರ್ಯದಲ್ಲಿ ಇನ್ನೂ ಹೆಚ್ಚಿನ ದಕ್ಷತೆಯನ್ನು ಕಾಪಾಡಿಕೊಳ್ಳಲು ಪ್ರತಿನಿತ್ಯ ಒಂದು ಕ್ರೀಡೆಯನ್ನು ಅವರ ಹವ್ಯಾಸವನ್ನಾಗಿ ಮಾಡಿಕೊಂಡಿರುವುದನ್ನು ನಾವು ನೋಡುತ್ತೇವೆ ಎಂದರು. ಕ್ರೀಡಾಕೂಟದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Share post:

Subscribe

spot_imgspot_img

Popular

More like this
Related

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...

ಮಹಿಳೆಯರೇ, ರೋಸ್‌ ವಾಟರ್‌ ಬಳಕೆಯ ಮೊದಲು ಈ ವಿಷಯ ತಿಳಿದಿರಲಿ

ಮಹಿಳೆಯರೇ, ರೋಸ್‌ ವಾಟರ್‌ ಬಳಕೆಯ ಮೊದಲು ಈ ವಿಷಯ ತಿಳಿದಿರಲಿ ಸೌಂದರ್ಯಕ್ಕೆ ರೋಸ್‌...

ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಷ

ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಷ ನವದೆಹಲಿ: ಇತ್ತೀಚಿನ ದಿನಗಳಲ್ಲಿ...