ಪತಿಯರು ಯೋಗಮಾಡಿದ್ರೆ ಗರ್ಭಪಾತ ನಿಲ್ಲುತ್ತೆ..!

Date:

ಪತಿಯರು ಅಂದ್ರೆ ಪುರುಷರು ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ಪುನರಾವರ್ತಿತ ಸ್ವಾಭಾವಿಕ ಗರ್ಭಪಾತ ಪ್ರಮಾಣ ಕಡಿಮೆಯಾಗುತ್ತದೆ. ಏಕೆಂದರೆ ಯೋಗದಿಂದ ವೀರ್ಯಾಣು ಡಿಎನ್​ಎದಲ್ಲಿನ ಗುಣಮಟ್ಟ ವೃದ್ಧಿಯಾಗುತ್ತದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(AIIMS)ಯ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಅಂಗರಚನಾಶಾಸ್ತ್ರ ವಿಭಾಗದ ಪರಿಣಿತರು ಈ ಸಂಶೋಧನೆ ನಡೆಸಿದ್ದಾರೆ. ಈ ಕುರಿತಾದ ವರದಿ ಆಂಡ್ರೋಲೊಜಿಯ ಎಂಬ ಮೆಡಿಕಲ್ ಜರ್ನಲ್​ನ​ ಅಕ್ಟೋಬರ್​ ಆವೃತ್ತಿ​ ಹಾಗೂ​ ಅಂತಾರಾಷ್ಟ್ರೀಯ ಜರ್ನಲ್ ಆಫ್ ಸೈಂಟಿಫಿಕ್ ರಿಸರ್ಚ್​ನ ಆವೃತ್ತಿಯಲ್ಲೂ ಪ್ರಕಟವಾಗಿದೆ.​

ಆಗಾಗ ಮರುಕಳಿಸುತ್ತಿದ್ದ ಸ್ವಾಭಾವಿಕ ಗರ್ಭಪಾತ ಹೊಂದುತ್ತಿದ್ದ ದಂಪತಿಗಳಲ್ಲಿ 60 ಪುರುಷರನ್ನು ನಿಯಮಿತವಾಗಿ ಯೋಗಾಭ್ಯಾಸ ಮಾಡಲು ಅಧ್ಯಯನದ ಭಾಗವಾಗಿ ಬಳಸಲಾಯಿತು. ಅಧ್ಯಯನಕ್ಕೆ ಆಯ್ಕೆಯಾದ ಪುರುಷರು ಯೋಗ ಮಾಡಿದ ಇತಿಹಾಸವನ್ನೇ ಹೊಂದಿರಲಿಲ್ಲ. ಅವರನ್ನು 90 ದಿನಗಳವರೆಗೆ ನಿಯಮಿತವಾಗಿ ಯೋಗ ಮಾಡುವಂತೆ ಹೇಳಲಾಯಿತು ಎಂದು ಏಮ್ಸ್​ನ ಅಂಗರಚನಾಶಾಸ್ತ್ರ ವಿಭಾಗದ ಮಾಲಿಕುಲರ್​ ರಿಪ್ರೊಡಕ್ಸನ್ ಮತ್ತು ಜೆನೆಟಿಕ್ಸ್ ಪ್ರಯೋಗಾಲಯದ ಉಸ್ತುವಾರಿ ರಿಮಾ ದಾದ ತಿಳಿಸಿದರು.

ಮೂಲ ಆಕ್ಸಿಡೇಟಿವ್ ಒತ್ತಡ ಹಾಗೂ ವೀರ್ಯ ಡಿಎನ್​ಎ ಹಾನಿಯು ಸಾಮಾನ್ಯ ಭ್ರೂಣದ ಅಭಿವೃದ್ಧಿಯ ಫಲೀಕರಣವನ್ನು ಕುಂಠಿತಗೊಳಿಸುವುದರಿಂದ ಗರ್ಭಪಾತವಾಗುತ್ತದೆ. ಅನಾರೋಗ್ಯಕರ ಹವ್ಯಾಸಗಳಾದ ಧೂಮಪಾನ, ಅತಿ ಹೆಚ್ಚು ಮದ್ಯ ಸೇವನೆಯು ಡಿಎನ್​ಎಗೆ ಹಾನಿಯುಂಟು ಮಾಡುತ್ತದೆ. ಅಲ್ಲದೆ, ಹೆಚ್ಚು ಕ್ಯಾಲೋರಿ ಹೊಂದಿದ ಹಾಗೂ ಪೌಷ್ಟಿಕಾಂಶವಿಲ್ಲದ ಆಹಾರ ಸೇವನೆ, ಜಡವಾದ ಜೀವನಶೈಲಿ, ಅತಿಯಾದ ಮೊಬೈಲ್​ ಬಳಕೆ, ಅತಿಯಾದ ಮಾನಸಿಕ ಒತ್ತಡ ಹಾಗೂ ಒಬೆಸಿಟಿಯಿಂದ ಡಿಎನ್​ಎ ಹಾನಿಗೊಳಗಾಗಿ ಗರ್ಭಪಾತವಾಗುವ ಸಂಭವ ಹೆಚ್ಚಾಗಿದೆ ಎಂದು ಹೇಳಲಾಗಿದೆ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...