ಸ್ಯಾಂಡಲ್‍ವುಡ್‍ನಲ್ಲಿ ಹೊಸ ಹೊಸ ವಿಭಿನ್ನ ಹಾಡುಗಳ ಮೂಲಕ ಜನರನ್ನು ರಂಜಿಸುತ್ತಿರೊ ಭಟ್ರು ಖ್ಯಾತಿಯ ನಮ್ಮ ಯೋಗರಾಜ್ ಭಟ್ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರನ್ನ ಭೇಟಿ ಮಾಡೋಕೆ ಹೋಗಿದ್ರು ಅಂತ ಗಾಂಧಿನಗರದಲ್ಲಿ ಸಖತ್ ಗಾಸಿಪ್ ಹರಡಿತ್ತು. ಏನಪ್ಪಾ.. ಇವ್ರು ಸಿನಿಮಾ ರಂಗ ಬಿಟ್ಟು ರಾಜಕೀಯಕ್ಕೆ ಎಂಟ್ರಿ ಕೊಡೊ ಪ್ಲಾನ್ ಏನಾದ್ರೂ ಮಾಡಿದಾರಾ..? ಮುಂದಿನ ಎಲೆಕ್ಷನ್‍ನಲ್ಲಿ ತಮ್ಮ ಪಕ್ಷದಲ್ಲಿ ನನಗೂ ಒಂದು ಸೀಟು ಬೇಕು ಅಂತ ಕೇಳೋಕೆ ಹೊರ್ಟಿದ್ದಾರಾ..? ಅನ್ನೋ ಪ್ರಶ್ನೆಗಳು ಎಲ್ರಲ್ಲೂ ಕಾಡ ತೊಡಗಿತ್ತು..! ಆದ್ರೆ ಅಂತಹ ಪ್ರಶ್ನೆಗಳಿಗೆ ಫುಲ್ ಸ್ಟಾಪ್ ಇಟ್ರು ನಮ್ಮ ಭಟ್ರು..! ಅಷ್ಟಕ್ಕೂ ತಾನು ಸಿಎಂ ಭೇಟಿ ಮಾಡಿದ್ದು ಬೇರೆ ವಿಷ್ಯಕ್ಕೆ ಅಂತೇಳಿ ಎಲ್ಲರ ಬಾಯಿ ಮುಚ್ಸಿದ್ರು..! ಅಷ್ಟಕ್ಕೂ ಯಾಕೆ ಭಟ್ರು ಸಿಎಂ ಅವ್ರನ್ನ ಭೇಟಿ ಮಾಡಿದ್ರು ಅಂದ್ರೆ..? ಅದೇನಕ್ಕೂ ಅಲ್ಲ ಮುಗುಳ್ನಗೆಗಾಗಿ..! ಅಲ್ಲಾ.. ಸಿಎಂ ಮುಗುಳ್ನಗೆಗೆ ಅವ್ರನ್ನ ಭೇಟಿ ಮಾಡಿದ್ರಾ ಅಂತ ಅಚ್ಚರಿ ಆಯ್ತಾ..? ಹಾಗೇನು ಇಲ್ಲ ಸ್ವಾಮಿ.. ಭಟ್ರು ಮತ್ತೆ ಗಣೇಶ್ ಸೇರ್ಕೊಂಡು ಮುಗುಳ್ನಗೆ ಅಂತ ಸಿನಿಮಾ ಮಾಡ್ತಾ ಇದಾರೆ..! ಈ ಚಿತ್ರದ ಶೂಟಿಂಗ್ ಮೈಸೂರ್‍ನಲ್ಲಿ ಮಾಡ್ತಾ ಇದಾರೆ. ಅದ್ರಲ್ಲೂ ಮುಖ್ಯವಾಗಿ ಮೈಸೂರ್‍ನ ಗವರ್ನಮೆಂಟ್ ಹಾಲ್‍ನಲ್ಲಿ ಚಿತ್ರದ ಶೂಟಿಂಗ್ ಮಾಡ್ಬೇಕು ಅನ್ನೋ ಪ್ಲಾನ್ ಮಾಡಿಕೊಂಡಿದ್ದಾರೆ ಭಟ್ರು.. ಅದಕ್ಕಾಗಿ ಸಿಎಂನ ಭೇಟಿ ಮಾಡಿದ್ದಾರಂತೆ..! ಈ ಗವರ್ನಮೆಂಟ್ ಹೌಸ್ ಪಾರಂಪರಿಕ ಕಟ್ಟಡಗಳಲ್ಲಿ ಒಂದು. ಈ ಕಾರಣ ಇಲ್ಲಿ ಸಿನಿಮಾ ಚಿತ್ರೀಕರಣ ಮಾಡೋಕೆ ಬಿಡೋದು ಸ್ವಲ್ಪ ಕಷ್ಟ. ಹಾಗಿದ್ರೂ ಇಲ್ಲಿ ಶೂಟಿಂಗ್ ಮಾಡ್ಲೇ ಬೇಕು ಅಂದ್ರೆ ಸಿಎಂ ಪರ್ಮಿಶನ್ ಬೇಕು. 200 ವರ್ಷಗಳಷ್ಟು ಹಳೆಯದಾದ ಈ ಕಟ್ಟಡದಲ್ಲಿ ಶೂಟಿಂಗ್ ಮಾಡುವಾಗ ಏನಾದ್ರೂ ಎಡವಟ್ಟು ಸಂಭವಿಸುತ್ತೆ ಅನ್ನೋ ಕಾರಣಕ್ಕಾಗಿ ಶೂಟಿಂಗ್ ಅವಕಾಶ ಕೊಡೋದಿಲ್ಲ. ಈ ಹೌಸ್ ಸಿಎಂ ಅಧೀನದಲ್ಲಿರೋ ಕಾರಣ ಅವರ ಪರ್ಮಿಶನ್ ಕೊಟ್ರೆ ಮಾತ್ರ ಶೂಟಿಂಗ್‍ಗೆ ಅವಕಾಶ. ಇದೇ ಕಾರಣಕ್ಕಾಗಿ ಭಟ್ರು ಸಿಎಂ ಅವ್ರನ್ನ ಭೇಟಿ ಮಾಡಿದ್ರಂತೆ. ಹಾಗಾದ್ರೆ ಶೂಟಿಂಗ್‍ಗೆ ಅವಕಾಶ ಕೊಟ್ರಾ..? ಖಂಡಿತಾ ಯಸ್ ಅಂತಾರೆ ಭಟ್ರು..! ಅಂದಹಾಗೆ ಗವರ್ನಮೆಂಟ್ ಹೌಸ್‍ನಲ್ಲಿ ಈವರೆಗೂ ಹೆಚ್ಚಾಗಿ ರಜಿನಿಕಾಂತ್ ಸಿನಿಮಾಗಳು ಹೆಚ್ಚಾಗಿ ಶೂಟ್ ಆಗಿದೆ. ಇತ್ತೀಚೆಗೆ ಕುಮಾರಸ್ವಾಮಿ ಅವರ ಮಗನ ಚಿತ್ರ ಜಾಗ್ವಾರ್ ಚಿತ್ರೀಕರಣವೂ ಈ ಹೌಸ್‍ನಲ್ಲಿ ನಡೆದಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಭಾರಿ ಗಿಫ್ಟ್ ನೀಡೋಕೆ ಮುಂದಾಗಿದೆ ಜಿಯೋ..!
ರಯೀಸ್ ಚಿತ್ರ ಬಿಡುಗಡೆ ಮಾಡ್ಬೇಡಿ: ಶಿವಸೇನೆ ಧಮ್ಕಿ..!
ಅಧಿಕಾರಿಗಳ ಕರಾಳ ಮುಖವನ್ನು ವಿಡಿಯೋ ಮೂಲಕ ಬಯಲಿಗೆಳೆದ ಯೋಧ..!
ಇನ್ಮುಂದೆ ಖಾಸಗೀ ಆಸ್ಪತ್ರೆಯಲ್ಲಿ ಫ್ರೀ ಟ್ರೀಟ್‍ಮೆಂಟ್ ಇರೋದಿಲ್ಲ..!
ಮತ್ತೆ ಒಂದಾಗಲಿದ್ದಾರೆ ಸುದೀಪ್ ದಂಪತಿ
195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರು ಒಂದು ಬಾರಿಯೂ ದಂಡ ಕಟ್ಲಿಲ್ಲ..!
ಗುಡ್ ನ್ಯೂಸ್: ಸದ್ಯದಲ್ಲೆ ಬಡವರ ಖಾತೆಗೆ ನೇರ ಹಣ ಪಾವತಿ..?
ಫಿಲ್ಮ್ ಫೇರ್‍ಗೆ ಸನ್ನಿ ಶಾರ್ಟ್ ಫಿಲ್ಮ್ ! #Sunny Leone Short film