ಇನ್ಮುಂದೆ ಸೌಂಡು ಮಾಡಿದ್ರೆ ಹುಷಾರ್…! ಇನ್ನು ಎರಡು ತಿಂಗಳಷ್ಟೆ..!?

0
85

ಸೌಂಡ್ ಮಾಡೋದು ಫ್ಯಾಶನ್ ಆಗ್ಬಿಟ್ಟಿದೆ..! ಬೈಕಲ್ಲಿ ತೆಪ್ಪಗೆ, ಆರಾಮಾಗಿ ಹೋಗ್ತಾ ಇರ್ತಾರೆ.. ಆಗ ಹುಡುಗೀರು ಕಂಡ್ರೇ ಸಾಕು ಅಟೋಮೆಟಿಕ್ ಆಗಿ ಬೈಕ್ ಸೌಂಡೇ ಚೇಂಜ್ ಆಗಿ ಬಿಡುತ್ತೆ..! ಬೈಕನ್ನ ಅಡ್ಡಡ್ಡ ಆಟ ಆಡ್ಸ್ತಾ ತಗೊಂಡು ಹೋಗುವಷ್ಟು ಜಾಗ ಇದ್ರೂ ಸಿಕ್ಕಾಪಟ್ಟೆ ಹಾರನ್ ಓಡಿಯೋ ಹುಚ್ಚರೂ ಇದ್ದಾರೆ..! ಅದು ಹುಚ್ಚಲ್ಲ ತಿಕ್ಲು..! ಅದೊಂದು ಚಟ…! ರಾತ್ರಿ ಆಯ್ತು.. ಪರಮಾತ್ಮ ದೇಹಕ್ಕೆ ಪ್ರವೇಶ ಮಾಡಿಬಿಟ್ಟಿದ್ದಾನೆ..! ಆ ಬಾರೆಂಬ ದೇವಾಲಯದಲ್ಲೇ ಮಲಗಿ ಬೆಳಿಗ್ಗೆ ಎದ್ದು ಆದ್ರೆ ಬರಬಹುದಿತ್ತು.., ಇಲ್ಲ ಅಂದ್ರೆ ಬಾರ್ ಓನರ್ರೇ ಮನೆಗೆ ಸಾಗಿಸ್ತಾ ಇದ್ದ,..! ಅದನ್ನ ಬಿಟ್ಟು ಕಾರಿದೆ, ಬೈಕಿದೆ ಅಂತ ಮನೆಗೆ ಹೊರಡೋದು..! ಮೊದಲೇ ಪರಮಾತ್ಮ ದೇಹ ಪ್ರವೇಶ ಮಾಡಿರ್ತಾನಲ್ವಾ.. ಸಿಕ್ಕಾಪಟ್ಟೆ ಸೌಂಡು ಮಾಡೋದು..! ಬೇಕಂತಲೇ ವಾಹನಕ್ಕೆ ಎಕ್ಸ್-ಟ್ರಾ ಸೌಂಡ್ ಫಿಕ್ಸ್ ಮಾಡ್ಕೊಂಡಿರೋದು..! ಇದು ಅವರಿಗೆ ಏನೂ ಅನ್ನಿಸದೇ ಇರಬಹುದು..! ಆದ್ರೆ ಬೇರೆ ಅವರಿಗೆ ಚಿತ್ರಹಿಂಸೆ ಆಗುತ್ತೆ..! ಕಿರಿಕಿರಿ ಉಂಟಾಗುತ್ತೆ..! ಕೆಲವರಂತೂ ತಮ್ಮ ವಾಹನಕ್ಕೆ ವಿಚಿತ್ರ ವಿಚಿತ್ರ ಸೌಂಡ್ ಗಳನ್ನು ಅಳವಡಿಸಿಕೊಂಡಿದ್ದಾರೆ..! ಅಬ್ಬಾ ಆ ಬೈಕ್ ನಮ್ಮ ಪಕ್ಕದಲ್ಲಿ ಹಾದು ಹೋದ್ರೆ ಸಿಕ್ಕ ಕಲ್ಲು ತೆಗೆದು ಹೊಡೆಯೋಣ ಅನ್ನೋ ಕೋಪ ಬರುತ್ತೆ..! ಈ ಕೋಪ ನಿಮಗೂ ಬಂದಿರಬಹುದು..! ಆದ್ರೆ ಇನ್ನು ಕೆಲವೇ ತಿಂಗಳಲ್ಲಿ ಈ ಗದ್ದಲಕ್ಕೆ ತೆರೆ ಬೀಳುತ್ತೆ..!
ತಮ್ಮ ಗಾಡಿಗೆ (ವಾಹನಕ್ಕೆ) ಕರ್ಕಶ ಶಬ್ದವನ್ನು ಅಳವಡಿಸಿಕೊಂಡವರೇ ಕೇಳ್ರಪ್ಪೋ ಕೇಳಿ..! ಇನ್ಮುಂದೆ ನೀವು ಕರ್ನಾಟಕದಲ್ಲಿ ಸೌಂಡ್ ಮಾಡಂಗಿಲ್ಲ..! ಒಂದು ವೇಳೆ ಸೌಂಡ್ ಮಾಡಿದ್ದೇ ಆದರೆ ನಿಮ್ಮ ಗಾಡಿಯನ್ನು ಪೊಲೀಸರು ಎತ್ತಾಕ್ಕೊಂಡು ಹೋಗ್ತಾರೆ..! ದಂಡವನ್ನೂ ಕಟ್ಟಬೇಕಾಗುತ್ತೆ..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (KSPCB), ಬೆಂಗಳೂರು ಟ್ರಾಫಿಕ್ ಪೋಲಿಸ್ ಮತ್ತು ಆರ್.ಟಿ.ಒ ಸೇರಿ 12 ಮೊಬೈಲ್ ಟೆಸ್ಟಿಂಗ್ ಯುನಿಟ್ಸ್ ಮತ್ತು 100 ಶಬ್ಧದ ಮಟ್ಟವನ್ನು ಅಳೆಯುವ ಮೀಟರ್ (ನಾಯ್ಸ್ ಲೆವೆಲ್ ಡಿಟೆಕ್ಟಿಂಗ್ ಮೀಟರ್ಸ್)ಗಳನ್ನು ರೆಡಿ ಮಾಡಿಟ್ಟುಕೊಂಡಿದ್ದಾರೆ..! ನಿಮ್ಮ ವಾಹನಗಳ ಗದ್ದಲವನ್ನು ಕಡಿಮೆ ಮಾಡಲು ಎರಡು ತಿಂಗಳುಗಳ ಕಾಲಾವಕಾಶ ಕೊಟ್ಟಿದ್ದಾರೆ..! ನೀವು ನಿಮ್ಮ ವಾಹನಗಳಿಗೆ ಹೆಚ್ಚಿನ ಶಬ್ಧವನ್ನುಂಟು ಮಾಡುವ ಘಟಕಗಳನ್ನು ಜೋಡಿಸಿ ಕೊಂಡಿದ್ದೀರಿಯೇ..?! ಹಾಗಾದರೆ ಎರಡು ತಿಂಗಳೊಳಗೆ ಅದನ್ನು ತೆಗೆಸಿ ಬಿಡಿ..! ಇಲ್ಲವಾದರೆ ಈಗಾಗಲೇ ಮೇಲೆ ಹೇಳಿರುವ ಯಂತ್ರಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡೋ ನಿಮ್ಮ ವಾಹನದ ಬಣ್ಣ ಬದಲಾಗುತ್ತೆ..! ಆ ವಾಹನದ ಮಾಲಿಕರಾದ ನೀವು ಶಿಕ್ಷೆ ಅನುಭವಿಸಲು, ದಂಡಕಟ್ಟಲೂ ತಯಾರಿರ ಬೇಕಾಗುತ್ತೆ…! ಈ ಬಗ್ಗೆ ನಮ್ಮ ಪರಿಸರ, ಅರಣ್ಯಮತ್ತು ಇಂಧನ ಸಚಿವರಾದ ರಮನಾಥ್ ರೈ ತಿಳಿಸಿದ್ದಾರೆ..! ಏನೋ ಹೇಳೊದನ್ನ ಹೇಳಿದ್ದೀವಪ್ಪಾ.. ಪಾಪ, ಸೌಂಡ್ ಮಾಡಿ ದಂಡ ಕಟ್ಟೋದು ಬೇಡ ಅನ್ನೋದು ನಮ್ ಉದ್ದೇಶ..! ಏನ್ ಮಾಡ್ತೀರೋ ಮಾಡಿ.. ಶೇರ್ ಮಾತ್ರ ಮಾಡಿ.. ಯಾಕಪ್ಪಾ ಅಂದ್ರೆ ನಿಮಗಲ್ಲದೇ ಇದ್ರೂ ಬೇರೆ ಅವ್ರಿಗೆ ಒಳ್ಳೆಯದಾಗುತ್ತಲ್ಲಾ..! ಅವ್ರಾದ್ರು ಅವರರವರ ವಾಹನಗಳ ಸೌಂಡ್ ಕಡಿಮೆ ಮಾಡಿಕೊಳ್ಳಲಿ..! ಹ್ಞಾಂ, ಎರಡೇ ತಿಂಗಳೂ.. ಬೇಗ ಬೇಗ..ಹೆಚ್ಚು ಸೌಂಡ್ ಆಗುವಂತೆ ಅಳವಡಿಸಿರೋ ಘಟಕಗಳನ್ನು ತೆಗೆಸ್ರೀ..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಚಿಕ್ಕ ಹುಡುಗ ಕಾಲಿಗೆ ಬಿದ್ರೂ ಚಿಲ್ಲರೆ ಕೊಡಲ್ಲ..! ಆದ್ರೆ ಹುಡುಗಿ ತಂದ ಖಾಲಿ ಡಬ್ಬಕ್ಕೆ ನೋಟ್ ಹಾಕ್ತಾರೆ..!

ಕನ್ನಡದ ಸ್ಟಾರ್ಸ್ ಅಂದ್ರೆ ಇವರಿಗೆ ಲೆಕ್ಕಕ್ಕೇ ಇಲ್ವಾ..? ಕರ್ನಾಟಕದಲ್ಲಿ ಬಿಸ್ನೆಸ್, ಕನ್ನಡದ ಸ್ಟಾರ್ಸ್ ಅಂದ್ರೆ ಕೇರ್ ಲೆಸ್..!

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!

ಇವರೆಂಥಾ ಸ್ವಾಭಿಮಾನಿ, ಸ್ವಾವಲಂಭಿ ಅಜ್ಜಿ..! ವಯಸ್ಸು 78, ಆದ್ರೂ…!

ತಿನ್ನುವ ಮುನ್ನ ಯೋಚಿಸು ಚಿನ್ನಾ..! ನಿಮ್ಮ ತಿಂಡಿ, ತಿನಿಸು ಎಷ್ಟು ಸುರಕ್ಷಿತ..?

ಹತ್ತು ವರ್ಷದ ಹುಡುಗನಿಗೆ ಅದೆಂಥಾ ಜವಬ್ದಾರಿ..! ಈತನ ಬುದ್ಧಿ ಎಲ್ಲರಿಗೂ ಬರಲ್ಲ ಕಣ್ರೀ..!

ಗಂಡ ಹೆಂಡತಿಗೆ ಹೊಡೆದ್ರೆ ಈ ನಾಯಿ ಏನು ಮಾಡುತ್ತೆ ಅಂತ ನೋಡಿ..! ಇದು ಶಾಂತಿಪ್ರಿಯ ನಾಯಿ – ಭೀಮ್..!

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಕ್ರೀಡಾ ಇತಿಹಾಸದಲ್ಲಿಯೇ ಅತೀ ದುಬಾರಿ ಟಿಕೇಟ್ ಯಾವುದು ಗೊತ್ತೇ..?

ರಿಯಲ್ ಲೈಫ್ ನ ರಿಯಲ್ ಹೀರೋಗಳು..! ಏನೂ ಇಲ್ಲದವರು ಏನೇನೋ ಆಗಿಬಿಟ್ಟರು..!

ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್

ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?

ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

 ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

LEAVE A REPLY

Please enter your comment!
Please enter your name here