ಯೂಟ್ಯೂಬ್.. ಗೊತ್ತಾ..? ಗೊತ್ತಿಲ್ದೇ ಏನ್ ಗುರೂ, ಯೂಟ್ಯೂಬ್ ನಲ್ಲಿ ವೀಡಿಯೋ ನೋಡ್ದೇ ಇರುವವರು ಇದ್ದಾರಾ..?! ಈಗಂತೂ ಸಿಕ್ಕಾಪಟ್ಟೆ ಯೂಟ್ಯೂಬ್ ಚಾನಲ್ ಗಳು ಹುಟ್ಟಿಕೊಂಡು ಬಿಟ್ಟಿವೆ..! ಹೊಸ ಹೊಸ ವೀಡಿಯೋಗಳು ಕ್ಷಣ ಕ್ಷಣಕ್ಕೂ ಅಪ್ ಲೋಡ್ ಆಗ್ತಾನೇ ಇರುತ್ತವೆ..! ಹಿಂಗಿರುವಾಗ ನೀನು ಯೂಟ್ಯೂಬ್ ಗೊತ್ತಾ ಅಂತ ಕೇಳ್ತಿಯಲ್ಲಾ..?! ಹೌದು, ಸಾರ್ ಪ್ರಶ್ನೆ ಕೇಳುವಾಗ ಸ್ವಲ್ಪ ತಪ್ಪಾಯ್ತು.. ನಾನ್ ಕೇಳೋಕೆ ಹೊರಟಿದ್ದು ಯೂಟ್ಯೂಬ್ ಗೊತ್ತಾ ಅಂತ ಅಲ್ಲ.. ಯೂಟ್ಯೂಬ್ ನಲ್ಲಿ ದುಡ್ಡು ಮಾಡಿದವರು ಗೊತ್ತಾ..? ಸಾರ್, ನೀವೋ, ನಿಮ್ಮ ಸ್ನೇಹಿತರೋ ಯೂಟ್ಯೂಬ್ ನಲ್ಲಿ ವೀಡಿಯೋ ಅಪ್ ಲೋಡ್ ಮಾಡ್ತಾ ಮಾಡ್ತಾ ಅಲ್ಪ ಸ್ವಲ್ಪ ದುಡ್ಡು ಮಾಡ್ಕೊಂಡು ಇರಬಹುದು..! ಆದ್ರೆ, ಈ ಯೂಟ್ಯೂಬ್ ನಲ್ಲಿ ಅತೀ ಹೆಚ್ಚು ದುಡ್ಡು ಮಾಡ್ತಾ ಇರೋರು ಯಾರ್ಯಾರು ಅಂತ ಗೊತ್ತಾ..?! ಗೊತ್ತಿಲ್ವಾ..!? ಈಗ ಅದನ್ನು ಹೇಳ್ತೀನಿ ಕೇಳಿ..!
ಯೂಟ್ಯೂಬ್ ನಲ್ಲಿ ಅತೀ ಹೆಚ್ಚು ಹಣಗಳಿಸಿದವರ ಪಟ್ಟಿಯನ್ನು `ಫೋರ್ಬ್ಸ್’ ನಿಯತಕಾಲಿಕೆ ಬಿಡುಗಡೆ ಮಾಡಿದೆ..! ಈ ನಿಯತಕಾಲಿಕೆ ಹೇಳಿರೋ ಮಾಹಿತಿ ಪ್ರಕಾರ `ಯೂಟ್ಯೂಬ್ ನಲ್ಲಿ’ ದುಡ್ಡು ಮಾಡಿದವರಲ್ಲಿ ಮೊದಲ ಹತ್ತು ಸ್ಥಾನದಲ್ಲಿರುವ ಯೂಟ್ಯೂಬ್ ದುಡುಮೆಗಾರಲ್ಲಿ ಅತೀ ಹೆಚ್ಚು ಹಣಗಳಿಸಿದವರ ಬಗ್ಗೆ ಸ್ಮಾಲ್ ಡೀಟೈಲ್ಸ್ ಇಲ್ಲಿದೆ..!
1. ಪಿವ್ ಡಿ ಪೈ :
ಯೂಟ್ಯೂಬ್ ನ ಆ್ಯಕ್ಟೀವ್ ಯೂಸರ್ಸ್ ಗೆ ಎಲ್ಲರಿಗೂ ಗೊತ್ತಿರೋ ಹೆಸರು ಅಂದ್ರೆ `ಪಿವ್ ಡಿ ಪೈ’, ಸಧ್ಯಕ್ಕೆ ನಂಬರ್ 1 ಯೂಟ್ಯೂಬ್ ಸ್ಟಾರ್ ಇವರೇ..! 25 ವರ್ಷದ ಈ ಸ್ಟಾರ್ ಸುಮಾರು 40 ಮಿಲಿಯನ್ ಜನರನ್ನು ಯೂಟ್ಯೂಬ್ ಮೂಲಕ ತಲುಪಿದ್ದಾರೆ..! “ಪಿವ್ ಡಿ ಪೈ” ಅನ್ನೋ ಯೂಟ್ಯೂಬ್ ಚಾನಲ್ ಹೊಂದಿರುವ ಇವರು ಇದರಿಂದ ಗಳಿಸಿರುವ ಬರೊಬ್ಬರಿ ಹಣ 776453400 ರೂಪಾಯಿಗಳು…!
2. ಸ್ಮೋಶ್ :
ಸ್ಮೋಶ್ ಎಂಬುದು `ಇಯಾನ್ ಹೆಕ್ಸೋ’ ಮತ್ತು `ಆಂಟೋನಿ ಪಡಿಲ್ಲಾ’ ಎಂಬ ಯೂಟ್ಯೂಬ್ ಸ್ಟಾರ್ ಗಳ ಯೂ ಟ್ಯೂಬ್ ಚಾನಲ್..!ಇವರು `ಇಯಾನ್ ಹೆಕ್ಸೋ’ ಮತ್ತು `ಆಂಟೋನಿ ಪಡಿಲ್ಲಾ’ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದ ಬಾಲ್ಯ ಸ್ನೇಹಿತರು..! ಇವರು ತಮ್ಮ ಸ್ಮೋಶ್ ಎಂಬ ಯೂಟ್ಯೂಬ್ ಚಾನಲ್ ನಲ್ಲಿ ಕಾಮಿಡಿ ವೀಡಿಯೋಗಳನ್ನೇ ಬಂಡವಾಳವಾಗಿಸಿಕೊಂಡು ಗಳಿಸಿರೋ ಹಣ 549987825.00 ರೂಪಾಯಿಗಳು..!
3. ಫೈನ್ ಬ್ರದರ್ಸ್ :
ಬೆನ್ನಿ ಮತ್ತು ರಫಿ ಫೈನ್ ಎಂಬ ಅಣ್ಣ ತಮ್ಮಂದಿರ ವೀಡಿಯೋ ಸರಣಿಗೆ ಎಮ್ಮಿ ಅವಾರ್ಡ್ ಕೂಡ ಲಭಿಸಿದೆ..! ಈ ಅಣ್ತಮ್ಮಂದಿರು ಯೂಟ್ಯೂಬ್ ನಿಂದ ಗಳಿಸಿದ ಹಣ ಕೂಡ 549987825.00.. ರೂಪಾಯಿಗಳು..!
4. ಲಿಂಡ್ಸೆ ಸ್ಟಿರ್ಲಿಂಗ್ :
ಪಿಟೀಲು (ವೈಲಿನ್) ಬಾರಿಸೋ ಇವರಿಗೆ ಡ್ಯಾನ್ಸ್ ಕೂಡ ಸಖತ್ತಾಗಿ ಬರುತ್ತೆ..! ಇವರು ತನ್ನ ಅದ್ಭುತ ಪ್ರತಿಭೆಯನ್ನೇ ಬಂಡವಾಳವನ್ನಾಗಿಸಿಕೊಂಡು ಯೂಟ್ಯೂಬ್ ಮೂಲಕ 388226700.00 ರೂಪಾಯಿಗಳನ್ನು ಸಂಪಾದಿಸಿದ್ದಾರೆ..!
5. ರೆಟ್ ಮತ್ತು ಲಿಂಕ್ :
ರೆಟ್ ಮೆಕ್ಲಾಫ್ಲಿನ್ ಮತ್ತು ಚಾರ್ಲ್ಸ್ ಲಿಂಕನ್ ಅವರು ಇಂಜಿನಿಯರ್ ಆಗಿ ಕೆಲಸ ಮಾಡ್ತಾ ಇದ್ದವರು..! ಆಮೇಲೆ ಯೂಟ್ಯೂಬ್ ನಲ್ಲಿ ಕಾಮಿಡಿ ಕರಿಯರ್ ಶುರು ಮಾಡಿ ಇವತ್ತು 291170025.00 ರೂಪಾಯಿಗಳ ಒಡೆಯರಾಗಿದ್ದಾರೆ..!
6. ಕೆ ಎಸ್ ಐ :
ಇವರೊಬ್ಬ ಇಂಗ್ಲೆಂಡಿನ ವೀಡಿಯೋ ಗೇಮ್ ವೀಕ್ಷಕ ವಿವರಣೆಗಾರ ಅಥವಾ ಕಾಮೆಂನ್ಟೇಟರ್..! ಹಿಪ್ ಹಾಪ್ ಡ್ಯಾನ್ಸರ್ ಕೂಡ ಆಗಿರೋ ಇವರು ಯೂಟ್ಯೂಬ್ ಸ್ಟಾರ್ ಆಗಿ ಸರಿ ಸುಮಾರು 11 ಮಿಲಿಯನ್ ಫಾಲೋರ್ಸ್ ಹೊಂದಿದ್ದಾರೆ..! ಇವರ ಯೂಟ್ಯೂಬ್ ಹಣಗಳಿಕೆ 291170025.00 ರೂಪಾಯಿಗಳು..!
7. ಮಿಶೆಲ್ ಫಾನ್ :
ಹುಡುಗಿಯರ್ ಹೇಗೆ ಮೇಕಪ್ ಮಾಡ್ಕೊಳ್ಬೇಕು ಅಂತ ಹೇಳ್ತಾ ಹೇಳ್ತಾನೇ ಯೂಟ್ಯೂಬ್ ಮೂಲಕ 194113350.00 ರೂಪಾಯಿಗಳನ್ನು ಗಳಿಸಿದ್ದಾರೆ..!
8. ಲಿಲ್ಲಿ ಸಿಂಗ್ :
ಭಾರತೀಯ ಮೂಲದವರಾದ ಇವರು ಸಖತ್ ಫೇಮಸ್, ಇವರು ಸೂಪರ್ ವುಮೆನ್ ಅನ್ನೋ ಚಾನೆಲ್ ನಿಂದ ಯೂಟ್ಯೂಬ್ ನಲ್ಲಿ ಗಳಿಸಿರೋ ಹಣ 161761125.00 ರೂಪಾಯಿಗಳು..!
9. ರೋಮನ್ ಅಟ್ ವುಡ್ :
ಕಾಮಿಡಿ ಮೂಲಕವೇ 7 ಮಿಲಿಯನ್ ಗೂ ಅಧಿಕ ಜನ ಫಾಲೋವರ್ಸ್ ಅನ್ನು ಹೊಂದಿರೋ ಇವರು ಯೂಟ್ಯೂಬ್ ಮೂಲಕ ಗಳಿಸಿರೋ ಹಣ 161761125.00 ರೂಪಾಯಿಗಳು..!
10. ರೊಸನ್ನ ಪ್ಯಾನ್ಸಿನೋ :
ಯೂಟ್ಯೂಬ್ ಟ್ಯುಟೋರಿಯಲ್ ಮೂಲಕ ಇವರೂ ಕೂಡ ಲಿಲ್ಲಿ ಸಿಂಗ್ ಮತ್ತು ರೋಮನ್ ಅಟ್ ವುಡ್ ಗಳಿಸಿರುವಷ್ಟು, ಅಂದ್ರೆ 161761125.00 ರೂಪಾಯಿಗಳನ್ನು ಗಳಿಸಿದ್ದಾರೆ..!
ಫೋರ್ಬ್ಸ್ ನಿಯತ ಕಾಲಿಕೆ ಬಿಡುಗಡೆ ಮಾಡಿರೋ ಯೂಟ್ಯೂಬ್ ಶ್ರೀಮಂತರ ಪಟ್ಟಿಯನ್ನು ನೋಡಿದ್ರಲ್ಲಾ..? ಯೂಟ್ಯೂಬ್ ನಲ್ಲಿ ಅದೆಷ್ಟೊಂದು ದುಡ್ಡು ಮಾಡಿದ್ದಾರೆ..!ನೀವೂ ಟ್ರೈ ಮಾಡಿ..ಒಂದು ದಿನ ಈ ಪಟ್ಟಿಯಲ್ಲಿ ನೀವೂ ಬರಬಹದು..!
ಕ್ಲಿಕ್ ಮಾಡಿ ಇದನ್ನೂ ಓದಿ..
ಮನೆಯಿಂದ ಹೊರಗಡೆ ಕಾಲಿಡಲ್ಲ.. ಆದ್ರೆ ಕೋಟಿ ಕೋಟಿ ದುಡೀತಾನೆ..! ಯೂಟ್ಯೂಬ್ ಪ್ರಪಂಚದಲ್ಲಿ ಇವನೇ ಸಖತ್ ಶ್ರೀಮಂತ..!
ಕ್ಲಿಕ್ ಮಾಡಿ ಇದನ್ನೂ ಓದಿ..
ಯೂಟ್ಯೂಬ್ ಮೂಲಕ ನೀವೂ ಹಣ ಗಳಿಸಿ…! ನಿಮ್ಮ ವೀಡಿಯೋಗಳೇ ಇಲ್ಲಿ ಇನ್ವೆಸ್ಟ್ ಮೆಂಟ್..!
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!
ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ..! ಈ ವೀಡಿಯೋ ನೋಡಿದ್ರೆ ನೀವು ಖಂಡಿತಾ ಅನ್ನವನ್ನು ವೇಸ್ಟ್ ಮಾಡಲ್ಲ..!
ಚಿಕ್ಕ ಹುಡುಗ ಕಾಲಿಗೆ ಬಿದ್ರೂ ಚಿಲ್ಲರೆ ಕೊಡಲ್ಲ..! ಆದ್ರೆ ಹುಡುಗಿ ತಂದ ಖಾಲಿ ಡಬ್ಬಕ್ಕೆ ನೋಟ್ ಹಾಕ್ತಾರೆ..!
ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?
ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!
ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!