No menu items!
12.4 C
Munich
Wednesday, April 29, 2026

ಆಟಗಾರನ ಆಟ ಸೂಪರ್ ಗುರೂ…! ಆಟಗಾರನನ್ನ ಯಾಕೆ ನೋಡ್ಬೇಕು ಗೊತ್ತಾ..?

Must read

ಕನ್ನಡ ಸಿನಿಮಾಗಳ ಬಗ್ಗೆ ಮೂಗು ಮುರಿಯೋ ಮಂದಿಗೆ ಇತ್ತೀಚಿನ ದಿನಗಳಲ್ಲಿ ಬೇಜಾನ್ ಉತ್ತರ ಸಿಕ್ಕಿದೆ. ಒಂದರ ಹಿಂದೊಂದು ಸಿನಿಮಾಗಳು ಸ್ಯಾಂಡಲ್ ವುಡ್ ಅಂಗಳದಲ್ಲಿ ಮಿಂಚ್ತಾ ಇದೆ. ನಾನು ಕನ್ನಡ ಸಿನಿಮಾಗಳನ್ನು ಥಿಯೇಟರ್ ನಲ್ಲಿ ಎಂಜಾಯ್ ಮಾಡೋ ಅಪ್ಪಟ ಕನ್ನಡಿಗ. ಅದರಲ್ಲೂ ಕನ್ನಡದ ಹಿಟ್ ಸಿನಿಮಾಗಳು ಅಂದ್ರೆ ಮಲ್ಟಿಪ್ಲೆಕ್ಸ್ ಅಂತಾನೂ ನೋಡ್ದೇ ಸೀಟಿ ಹೊಡೆಯೋನು ನಾನು.
ಸಾಮಾನ್ಯವಾಗಿ ಮೊದಲ ವಾರದಲ್ಲೇ ಕನ್ನಡ ಸಿನಿಮಾ ನೋಡೋನು ನಾನು. ಆದ್ರೆ ‘ಆಟಗಾರ’ ನೋಡೋಕೆ ಸಾಧ್ಯವೇ ಆಗಿರಲಿಲ್ಲ. ಈ ಗ್ಯಾಪಲ್ಲಿ ಆಟಗಾರದ ಪ್ರಿಂಟ್ ಟೋರಂಟಲ್ಲಿ ಇದೆ ಅಂತ ವಾಟ್ಸಾಪ್ ಗ್ರೂಪಲ್ಲಿ ಮಾತಾಡ್ತಾ ಇದ್ರು. ನನ್ನ ಫ್ರೆಂಡ್ ಒಬ್ಬ ಡೌನ್ ಲೋಡ್ ಸಹ ಮಾಡಿಬಿಟ್ಟ. ಒಂದೂವರೆ ಜಿಬಿ ಡೌನ್ ಲೋಡ್ ಮಾಡಿದವನ ಮುಖ ಇಷ್ಟೇ ಇಷ್ಟಾಗಿತ್ತು. ಅದು ಡಬ್ಬಾ ಪ್ರಿಂಟ್, ಆಡಿಯೋ ಸರಿ ಇಲ್ಲ, ಎಲ್ಲೂ ಗ್ರಾಫಿಕ್ಸ್ ಇಲ್ಲ. ಎರಡೂ ಪಾರ್ಟಲ್ಲಿ ಕೊನೆಯ 15 ನಿಮಿಷ ಪ್ಲೇ ಆಗಲ್ಲ. ಯಾವ ಹಾಡೂ ಅದರಲ್ಲಿಲ್ಲ..! ಡೌನ್ ಲೋಡ್ ಮಾಡಿದ ಡಾಟಾನೂ ಹೋಯ್ತು. ಥಿಯೇಟರ್ ನಲ್ಲಿ ನೋಡೋದ್ ಬಿಟ್ಟು ಡೌನ್ ಲೋಡ್ ಮಾಡೋಕೆ ಹೋಗಿ ಟೈಮ್, ಮರ್ಯಾದಿ ಎರಡೂ ಹಾಳಾಗಿ ಹೋಯ್ತು..! ಮೊದಲು ಥಿಯೇಟರ್ ಗೆ ಹೋಗಿ ನೋಡು ಅಂತ ಅವನಿಗೂ ಬುದ್ದಿ ಹೇಳಿ ನಾನೂ ಸಹ ಸಿನಿಮಾಗೆ ಹೋದೆ.. ಯಾಕೆ ಇಷ್ಟು ದಿನ ಮಿಸ್ ಮಾಡ್ಕೊಂಡೆ ಅನ್ನಿಸಿಬಿಡ್ತು..! ಕನ್ನಡ ಸಿನಿಮಾಗಳಿಗೆ ಶುಕ್ರದೆಸೆ ಶುರುವಾಗಿದೆ ಅನ್ನಿಸ್ತು..! ಶುರುವಾದಾಗಿನಿಂದ ಮುಗಿಯೋ ತನಕ ಒಂದೇ ಒಂದು ನಿಮಿಷ ಬೋರ್ ಆಗ್ಲಿಲ್ಲ..! ಎಲ್ಲಾ ಪಾತ್ರಗಳೂ ಅಲ್ಟಿಮೇಟ್..! ಡೈರೆಕ್ಟರ್ ಪಾತ್ರಗಳ ಆಯ್ಕೆ ಎಷ್ಟು ಅಚ್ಚುಕಟ್ಟಾಗಿ ಮಾಡಿದ್ದಾರೆ ಅಂತ ಖುಷಿಯಾಯ್ತು. ಒಂಥರಾ ಥ್ರಿಲ್ಲರ್, ಒಂಥರಾ ಹಾರರ್, ಅಲ್ಲಲ್ಲಿ ಕಾಮಿಡಿ, ನೋ ಗಡಿಬಿಡಿ..! ಹಿಂಗೆ ಶುರುವಾಗಿ ಹಿಂಗೆ ಮುಗಿಯೋ ಸಿನಿಮಾದಲ್ಲಿ ಏನಿರಬೇಕೋ ಎಲ್ಲಾ ಇದೆ..! ಇಂಟರ್ವೆಲ್ ಟೈಮಲ್ಲಿ ಕೊಡೋ ಟ್ವಿಸ್ಟ್, ಪಾಪ್ ಕಾರ್ನ್ ತಿನ್ನೋಕೂ ಹೊರಗೆ ಹೋಗೋಕೆ ಬಿಡಲ್ಲ..! ಎಲ್ಲಿ ಶುರುವಾಗಿಬಿಡುತ್ತೋ ಅಂತ…! ಚೈತನ್ಯ ಇಡೀ ಸಿನಿಮಾಗೆ ಚೈತನ್ಯ ತುಂಬಿದ್ದಾರೆ. ಸಿನಿಮಾದಲ್ಲಿ ಎಲ್ಲರೂ ಹೀರೋಗಳೇ..! ರವಿಶಂಕರ್ ಎಂದಿನಂತೆ ಅದ್ಭುತ..! ಅನಂತ್ ನಾಗ್ ಸರ್ ಬಗ್ಗೆ ಮಾತಡಂಗೇ ಇಲ್ಲ..! ಇನ್ನುಳಿದ ಎಲ್ಲಾ ಪಾತ್ರಗಳಿಗೂ ನೂರಕ್ಕೆ ನೂರಾಒಂದು ಮಾರ್ಕ್ಸ್..! ಹಿನ್ನೆಲೆ ಸಂಗೀತ ಸಿನಿಮಾದ ಪ್ಲಸ್ ಪಾಯಿಂಟ್. ಟೋಟಲಿ ಸಿನಿಮಾ ಸೂಪರ್ ಗುರೂ…! ನೀವಿನ್ನೂ ನೋಡಿಲ್ಲ ಅಂದ್ರೆ ಒಂದೊಳ್ಳೆ ಸಿನಿಮಾ ಮಿಸ್ ಮಾಡ್ಕೋತೀರಿ. ಈಗಲೇ ಬುಕ್ ಮಾಡಿ, ವೀಕೆಂಡ್ ಎಂಜಾಯ್ ಮಾಡಿ…

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ..! ಈ ವೀಡಿಯೋ ನೋಡಿದ್ರೆ ನೀವು ಖಂಡಿತಾ ಅನ್ನವನ್ನು ವೇಸ್ಟ್ ಮಾಡಲ್ಲ..!

ಚಿಕ್ಕ ಹುಡುಗ ಕಾಲಿಗೆ ಬಿದ್ರೂ ಚಿಲ್ಲರೆ ಕೊಡಲ್ಲ..! ಆದ್ರೆ ಹುಡುಗಿ ತಂದ ಖಾಲಿ ಡಬ್ಬಕ್ಕೆ ನೋಟ್ ಹಾಕ್ತಾರೆ..!

ಕನ್ನಡದ ಸ್ಟಾರ್ಸ್ ಅಂದ್ರೆ ಇವರಿಗೆ ಲೆಕ್ಕಕ್ಕೇ ಇಲ್ವಾ..? ಕರ್ನಾಟಕದಲ್ಲಿ ಬಿಸ್ನೆಸ್, ಕನ್ನಡದ ಸ್ಟಾರ್ಸ್ ಅಂದ್ರೆ ಕೇರ್ ಲೆಸ್..!

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article