ನಿವೃತ್ತಿ ಬಗ್ಗೆ ಮಾತಾಡಿದ ಯುವರಾಜ್…!

Date:

ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಯುವರಾಜ್ ಸಿಂಗ್ ನಿವೃತ್ತಿ ಬಗ್ಗೆ ಮಾತಾಡಿದ್ದಾರೆ.

2019ರ ವಿಶ್ವಕಪ್ ಟೂರ್ನಿಯ ಬಳಿಕ ನಿವೃತ್ತಿ ಬಗ್ಗೆ ಯೋಚಿಸುವುದಾಗಿ ಯುವಿ ಹೇಳಿದ್ದಾರೆ.


ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪರ ಆಡಲಿರುವ ಅವರು, ಉತ್ತಮ ಪ್ರದರ್ಶನ ನೀಡಿ ಮತ್ತೆ ಟೀಂ‌ ಇಂಡಿಯಾದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದು, 2019ರ ವಿಶ್ವಕಪ್ ನಂತರ ನಿವೃತ್ತಿ ಬಗ್ಗೆ ಯೋಚಿಸುವುದಾಗಿ ತಿಳಿಸಿದ್ದಾರೆ.


ವೃತ್ತಿ ಜೀವನದ ಆರಂಭದ ಆರೇಳು ವರ್ಷ ಉತ್ತಮ ಆಟ ಆಡಿದ್ದೇನೆ. ಮುಂದಿನ ದಿನಗಳಲ್ಲಿ ಅವಕಾಶ ವಂಚಿತನಾದೆ‌. ಕ್ಯಾನ್ಸರ್ ಜಯಿಸಿ ಬಂದ ಮೇಲೆ ನಿರಂತರ ಅವಕಾಶ ಸಿಗಲಿಲ್ಲ ಎಂದರು.


ಯುವಿ 2011ರ ವಿಶ್ವಕಪ್ ವರೆಗೆ ನಿರಂತರವಾಗಿ ಟೀಂ ಇಂಡಿಯಾದ ಪರ ಆಡಿದ್ದರು. ನಂತರ ಕ್ಯಾನ್ಸರ್ ನಿಂದಾಗಿ ಆಟದಿಂದ ಹೊರಗುಳಿಯ ಬೇಕಾಯಿತು. ಬಳಿಕ ಕಮ್ ಬ್ಯಾಕ್ ಆದರೂ ನಿರಂತರ ಅವಕಾಶ ಸಿಕ್ಕಿಲ್ಲ. 2017ರ ಜೂನ್ ನಲ್ಲಿ ಕೊನೆಯ ಏಕದಿನ ಪಂದ್ಯ ಆಡಿದ್ದರು.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...