ಕಟಕ್‍ನ ಬಾರಾಮತಿ ಸ್ಟೇಡಿಯಂನಲ್ಲಿ ಎಲ್ಲೆಡೆ ಕೇಳಿ ಬರ್ತಾ ಇದ್ದ ಕೂಗು ಒಂದೆ.. ಅದು ಯುವಿ ಯುವಿ.. ಕೇವಲ 31 ರನ್‍ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಆಸರೆಯಾಗಿದ್ದು ಇದೆ ಎಡಗೈ ದಾಂಡಿಗ ಯುವರಾಜ್ ಸಿಂಗ್.. ಕಳೆದ ಮೂರು ವರ್ಷಗಳಿಂದ ತಂಡಕ್ಕೆ ಹಿಂದಿರುಗಲು ಹರ ಸಾಹಸ ಪಟ್ಟಿದ್ದ ಯುವಿ, ಸಿಕ್ಕ ಚಾನ್ಸ್ ನಲ್ಲು ಸರಿಯಾದ ಫಾರ್ಮ್‍ಗೆ ಮರಳಲು ವಿಫಲವಾಗಿದ್ರು. ಆದ್ರೆ ಇಂದು ಯುವಿಯ ಆಟ ಹಳೆಯ ಯುವರಾಜನ ಆಟವನ್ನು ನೆನೆಪಿಸುವಂತಿತ್ತು.. ಯಾಕಂದ್ರೆ ಇಂದು ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಅಮೋಘ 150 ರನ್ ಹೊಡೆಯುವ ಮೂಲಕ ತನ್ನ ಸಾಮರ್ಥ್ಯ ಇನ್ನೂ ಕುಗ್ಗಿಲ್ಲೆಂದು ತೋರಿಸಿಕೊಟ್ರು. 99ರನ್ ಗಳಿಸಿದ್ದ ಯುವಿ ಇಂಗ್ಲೆಂಡ್‍ನ ಪ್ಲಂಕೆಟ್ ಎಸೆತದಲ್ಲಿ ಒಂದು ರನ್ ಕಲೆ ಹಾಕುವ ಮೂಲಕ ಶತಕ ಸಂಭ್ರಮವನ್ನು ಆಚರಿಸಿದ್ರು. ಈ ವೇಳೆ ಯುವಿ ಭಾವೋದ್ವೇಕಗೊಂಡಿದ್ದು ಇಲ್ಲಿ ಸ್ಮರಿಸಬಹುದು. ರಣಜಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಮತ್ತೆ ಎಂಟ್ರಿ ಕೊಟ್ಟ ಯುವಿ ಎರಡನೇ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ರು. ಟೀಮ್ ಇಂಡಿಯಾಗೆ ಮರಳಿದ ಮೊದಲ ಪಂದ್ಯದಲ್ಲೆ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡುತ್ತಾರೆ ಎಂದು ಭಾವಿಸಿಕೊಂಡಾಗ ಯುವಿ ಕೇವಲ 15 ರನ್‍ಗಳಿಸಿ ಔಟಾಗಿದ್ದರು. ಆದ್ರೆ ಯುವಿ ಎರಡನೇ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಲ್ಲದೆ ಆಕರ್ಷಕ 150 ರನ್ ಸಿಡಿಸಿ ತಂಡಕ್ಕೆ ಆಸರೆಯಾಗಿ ನಿಂತರು. ಇನ್ನು ಯುವಿ ಜೊತೆ ಸೊಗಸಾದ ಆಟವಾಡಿದ ಮಹೇಂದ್ರ ಸಿಂಗ್ ಧೋನಿ ಆಕರ್ಷಕ ಶತಕಗಳಿಸಿ ಕ್ರೀಸ್‍ನಲ್ಲಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಕೀರ್ತಿ ಬಗ್ಗೆ ಅಪಪ್ರಚಾರ
ಮೋದಿಗೆ ಧನ್ಯವಾದ ಹೇಳಿದ ಒಬಾಮಾ ಯಾಕೆ ಗೊತ್ತಾ.?
ಮೆಣಸಿನಕಾಯಿ ತಿಂದು ಬೀಗಿದ ಪ್ರಥಮ್.
ಮನಿ ಪ್ಲಾಂಟ್ ಮನೆಗೆ ಸೊಬಗೋ ಮನಿಯ ಸಂಕೇತವೋ???
ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?
ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!
ಸನ್ನಿ ಜೊತೆ ಸೆಲ್ಫಿ ಬೇಕಾ..? ಹಾಗಾದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ..!