ಕ್ರಿಕೆಟ್ ಇತಿಹಾಸದಲ್ಲಿ ಇಂದಿಗೆ ಸರಿಸುಮಾರು ೯ ವರ್ಷಗಳ ಹಿಂದಿನ ಘಟನೆ. ಸೆಪ್ಟೆಂಬರ್ 19,2007ರ ಐ.ಸಿ.ಸಿ ವರ್ಲ್ಡ್ ಟಿ.20 ದಕ್ಶಿಣ ಆಫ್ರಿಕದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರು ಸತತ 6 ಬಾಲ್ ಗಳಲ್ಲಿ 6 ಅದ್ಭುತ ಸಿಕ್ಸ್ ಹೊಡೆಯುವುದರ ಮೂಲಕ ತಮ್ಮ ಅಪ್ರತಿಮ ದಾಖಲೆಯನ್ನ ಮೆರೆದ ದಿನವದು. ಈ ದಾಖಲೆಯ ಹಿಂದಿರುವ ಕಥೆ ಅತ್ಯಂತ ರೋಮಾಂಚನಕಾರಿಯಾಗಿದೆ.
ಆ ಪಂದ್ಯದಲ್ಲಿ ಆಂಡ್ರೀವ್ ಫ್ಲಿನ್ಟಾಫ್ ಹಾಗೂ ಯುವರಾಜ್ ನಡುವೆ ಕ್ರಿಕೆಟ್ ಮೈದಾನದಲ್ಲಿ ನಡೆದ ವಾಕ್ ಸಮರ ಎಲ್ಲರಿಗೂ ಗೊತ್ತು,
ಆದರೆ ಅವರಿಬ್ಬರ ನಡುವೆ ಏನಾಯಿತು ಎಂಬುದು ಗೊತ್ತಿರಲಿಲ್ಲ, ಆ ರಹಸ್ಯವನ್ನು ಯುವರಾಜ್ ಬಿಚ್ಚಿಟ್ಟದ್ದು ಹೀಗೆ…
ಆಂಡ್ರೀವ್ ಫ್ಲಿನ್ಟಾಫ್ ಯುವರಾಜ್ ನ ಬ್ಯಾಟಿಂಗ್ ಅನ್ನು ಅತ್ಯಂತ ಹಾಸ್ಯಾಸ್ಪದ ಹಾಗೂ ಕೀಳುಮಟ್ಟದ್ದಾಗಿದೆಯೆಂದರು. ಯುವರಾಜ್ ಬಿಡದೆ ಅವರಿಗೆ ತಿರುಗಿ ಉತ್ತರಿಸಿದಾಗ ಫ್ಲಿನ್ಟಾಫ್ ನು ಯುವರಾಜ್ ಗೆ ನಿನ್ನ ಕತ್ತನ್ನು ಕತ್ತರಿಸುತ್ತೇನೆಂದನು. ಆ ಕೂಡಲೇ ಕೋಪದಿಂದ ಕೆಂಡಾಮಂಡಲವಾದ ಯುವರಾಜ್ ನನ್ನ ಕೈಯಲ್ಲಿ ಬ್ಯಾಟ್ ಇರುವುದು ಇದರಿಂದ ಎಲ್ಲಿಗೆ ಹೊಡೆಯುತ್ತೇನೆ ಅಂತ ನೋಡುತ್ತಿರು ಅಂದ ಯುವರಾಜ್ ರೋಷ ತಣ್ಣಗಾಗಿದ್ದು ಸ್ಟುವರ್ಟ್ ಬ್ರಾಡ್ ನ ಕೊನೆಯ 6 ಬಾಲಿಗೆ 6 ಸತತ ಸಿಕ್ಸ್ ಬಾರಿಸುವುದೊರೊಂದಿಗೆ.
ಪಾಪ ಸ್ಟುವರ್ಟ್ ಬ್ರೋಡ್ ! ಯುವರಾಜ್ ಕೋಪದ ತಾಪಕ್ಕೆ ಸ್ಟುವರ್ಟ್ ಬ್ರಾಡ್ ನ ೬ ಬಾಲ್ ಕ್ಷಣ ಮಾತ್ರದಲ್ಲಿ ಸುಟ್ಟು ಭಸ್ಮವಾಯ್ತು. ಇನ್ನೆನು ಪಂದ್ಯ ಗೆದ್ದೆ ಗೆಲ್ಲುತ್ತೇವೆಂಬ ಹುಚ್ಚು ಆವೇಶದಲ್ಲಿದ್ದ ಇಂಗ್ಲೆಂಡ್ ಸ್ಥಿತಿ ಬಾಲ ಸುಟ್ಟ ಬೆಕ್ಕಿನಂತಾಯಿತು. ಈ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ದ 18 ರನ್ನುಗಳ ಭರ್ಜರಿ ಜಯದೊಂದಿಗೆ ಟಿ 20 ಪುಸ್ತಕದಲ್ಲಿ ತನ್ನ ಇತಿಹಾಸವನ್ನು ದಾಖಲಿಸಿತು. ಬೆಂಕಿ ಜೊತೆ ಸರಸಬೇಕಿತ್ತೆ ! ಆಂಡ್ರೀವ್ ಫ್ಲಿನ್ಟಾಫ್???????????
ಆ ದಾಖಲೆಯ ವಿಡಿಯೋ ಇಲ್ಲಿದೆ ನೋಡಿ :
https://www.youtube.com/watch?v=wSwSaF2z124
- ಸ್ವರ್ಣ ಭಟ್
POPULAR STORIES :
ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!
ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!
ಒಸಾಮಾ ಬಿನ್ ಲಾಡೆನ್ ಸತ್ತಿಲ್ಲ..!? ಅಮೆರಿಕಾ ಮುಚ್ಚಿಟ್ಟ ಘೋರ ಸತ್ಯವೇನು..?
ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ
ಬೇಸಿಗೆ ರ(ಸ) ಜೆ – ಮಕ್ಕಳಿಗೊ? ಪೋಷಕರಿಗೋ ?
ನಾಗರಹಾವಿಗೆ ಎರಡು ಕಾಲು..! ಜನರು ದಂಗುಬಡಿದು ಹೋದರು..!
ನಿಮ್ಮ ಮಗು ಬಳಿ ಸ್ಮಾರ್ಟ್ ಫೋನ್ ಇದೆಯಾ ಹುಷಾರ್..!!
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ









