ರಾಯಲ್ ಚಾಲೆಂಜರ್ಸ್ ತಂಡದ ಸ್ಪಿನ್ನರ್ ಯಜುವೇಂದ್ರ ಚಹಲ್ ಸ್ಯಾಂಡಲ್ ವುಡ್ ನಟಿಗೆ ಮನಸೋತಿದ್ದಾರೆ. ಈ ನಟಿಯೊಂದಿಗೆ ಸುತ್ತಾಡುತ್ತಿರುವ ಚಹಲ್ ಸಧ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗುತ್ತಿದೆ.

ಫಸ್ಟ್ ರ್ಯಾಂಕ್ ರಾಜು ಚಿತ್ರದ ನಾಯಕಿ ತನಿಷ್ಕಾ ಕಪೂರ್ ಚಹಲ್ ಮನಗೆದ್ದವರು. ಐಪಿಎಲ್ ಮುಗಿದ ಬಳಿಕ ಇವರು ಹೊಸ ಜೀವನ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಐಪಿಎಲ್ ಬಳಿಕ ಟೀಂಇಂಡಿಯಾ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುತ್ತಿದ್ದು, ಅಷ್ಟರಲ್ಲೇ ಚಹಲ್ ಮದುವೆ ಮಯಾಗುತ್ತಾರಂತೆ.

ಟೀ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು, ಯುವರಾಜ್ ಸಿಂಗ್ ನಟಿ ಹೆಜಲ್ ಕೀಚ್ ಅವರನ್ನು, ಹರ್ಭಜನ್ ಸಿಂಗ್ ನಟಿ ಗೀತಾ ಬಸ್ರಾ ಅವರನ್ನು, ಜಹೀರ್ ಖಾನ್ ನಟಿ ಸಾಗರಿಕ ಗಾಟ್ ಅವರನ್ನು ಮದುವೆಯಾಗಿದ್ದಾರೆ. ಈಗ ಕ್ರಿಕೆಟಿಗ ಚಹಲ್ ಕೂಡ ನಟಿಯನ್ನೇ ವರಿಸಲಿದ್ದಾರೆ.







